Advertisement

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

12:47 AM Dec 21, 2024 | Team Udayavani |

ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ, ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ ಬçಹತ್‌ ಗೀತೋತ್ಸವದಲ್ಲಿ ಡಿ. 21ರಂದು ಸಂಜೆ 5.30ಕ್ಕೆ “ಶ್ರೀ ಭಗವಾನುವಾಚ’ ಪುಸ್ತಕ ಲೋಕಾರ್ಪಣೆ ನಡೆಯಲಿದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಗೋ. ಮಧು ಸೂದನ್‌ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಪರ್ಯಾಯ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀ ಸುಶೀಂದ್ರತೀರ್ಥ ಶ್ರೀಪಾದರು ಪುಸ್ತಕ ಬಿಡುಗಡೆಗೊಳಿಸುವರು.

ಆರೆಸ್ಸೆಸ್‌ ಮುಖಂಡ ಡಾ| ಕಲ್ಲಡ್ಕ ಪ್ರಭಾಕರ ಭಟ್‌ ಮುಖ್ಯ ಭಾಷಣ ಮಾಡುವರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸುವರು. ಮೈಸೂರು ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿವೃತ್ತ ಉಪನಿರ್ದೇಶಕ ಡಾ| ಟಿ. ವಿ. ಸತ್ಯನಾ ರಾಯಣ, ಚಿತ್ರಕಲಾವಿದ ಗಂಜೀಫಾ ರಘ‌ುಪತಿ ಭಟ್‌, ಕೆ. ರಾಕೇಶ್‌ ರಾಜೇ ಅರಸ್‌, ಜೆ.ಬಿ. ಪಟ್ಟಾಭಿ, ಡಾ| ವಿ. ರಂಗನಾಥ್‌ ಗ್ರಂಥ ಪರಿಚಯ ಮಾಡುವರು ಎಂದರು.

ಪುತ್ತಿಗೆ ಶ್ರೀಗಳ ಕೋಟಿ ಗೀತಾ ಲೇಖನ ಯಜ್ಞದಲ್ಲಿ ದೀಕ್ಷೆ ಸ್ವೀಕರಿಸಿ ಗೀತೆಯನ್ನು ಬರೆದ ಮೇಲೆ ಇದರ ಬಗ್ಗೆ ಉನ್ನತ ಅಧ್ಯಯನ ಕೈಗೊಳ್ಳುವ ಆಸಕ್ತಿ ಉಂಟಾಯಿತು. ದಿನಕ್ಕೆ 8ರಿಂದ 10 ಗಂಟೆ ಗೀತೆ ಬಗ್ಗೆ ಚಿಂತನ ಮಂಥನ ಕೈಗೊಂಡು, ಕುರುಕ್ಷೇತ್ರ, ದ್ವಾರಕಾ ಮುಂತಾದ ಕ್ಷೇತ್ರಗಳಿಗೆ ಭೇಟಿ ನೀಡಿ ಪುಸ್ತಕ ಬರೆದಿದ್ದೇನೆ ಎಂದರು.

ಕೈಮಗ್ಗ ಸೀರೆಗಳ ಪ್ರದರ್ಶನ
ಮಠದ ದಿವಾನರಾದ ನಾಗರಾಜ ಆಚಾರ್ಯ ಮಾತನಾಡಿ, ಬೃಹತ್‌ ಗೀತೋ ತ್ಸವದ ಪ್ರಯುಕ್ತ ಡಿ.18ರಿಂದ 31ರ ವರೆಗೆ ರಾಜಾಂಗಣದಲ್ಲಿ ಕೈಮಗ್ಗ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ ಎಂದರು.ಮಠದ ಪ್ರಮುಖರಾದ ಪ್ರಮೋದ್‌ ಸಾಗರ್‌ ಮಾತ ನಾಡಿ, ಡಿ.22ರಂದು ಬೆಳಗ್ಗೆ 9.30ರಿಂದ ಸಂಜೆ 5ರವರೆಗೆ ರಾಜಾಂಗಣದಲ್ಲಿ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿ ಗಳಿಗೆ ಕಾರ್ಯಾಗಾರ “ಯುವ ಗೀತೋತ್ಸವ’ ನಡೆಯಲಿದೆ.

Advertisement

ಖ್ಯಾತ ವಿದ್ವಾಂಸರಾದ ವಿದ್ವಾನ್‌ ಕೃಷ್ಣರಾಜ ಕುತ್ಪಾಡಿ, ಡಾ| ವಿಶ್ವನಾಥ ಸುಂಕಸಾಳ, ರೋಹಿತ್‌ ಚಕ್ರತೀರ್ಥ, ಸಚಿಕೇತ್‌ ಹೆಗಡೆ, ಡಾ| ನವೀನ್‌ ಗಂಗೋತ್ರಿ ಭಾಗವಹಿಸುವರು ಎಂದರು. ಎಂಜಿಎಂ ಕಾಲೇಜು ನಿವೃತ್ತ ಪ್ರಾಂಶುಪಾಲ ಡಾ| ಎಂ.ಜಿ.ವಿಜಯ್‌, ಮಠದ ಪ್ರಮುಖರಾದ ರಮೇಶ್‌ ಭಟ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next