ನವದೆಹಲಿ: ಒಂದು ಕಾಲದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ನಂಬಿಕಸ್ಥ ಸ್ನೇಹಿತೆಯಾಗಿದ್ದ, ಎಐಎಡಿಎಂಕೆ ಯಲ್ಲಿ ಪ್ರಬಲ ನಾಯಕಿಯಾಗಿಯೂ ಹೊರಹೊಮ್ಮಿದ್ದ ವಿ.ಕೆ. ಶಶಿಕಲಾ ಅವರು, ಮತ್ತೆ ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರೆ.
ಶಶಿಕಲಾರನ್ನು ದೂರವಿಡಲು ಪ್ರಮುಖ ನಾಯಕರಾದ ಪಳನಿಸ್ವಾಮಿ, ಪನ್ನೀರ್‌ಸೆಲ್ವಂ ಯತ್ನಿಸುತ್ತಿದ್ದರೂ, ಶಶಿಕಲಾ ಮಾತ್ರ ತಮ್ಮದೇ ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ಇದನ್ನೂ ಓದಿ:1-8 ನೇ ತರಗತಿ ಪ್ರಾರಂಭ : ನಾಳೆ ತಜ್ಞರ ಜೊತೆ ಸಿಎಂ ಸಭೆ
ಪಕ್ಷದ ಒಳಹೊರಗುಗಳನ್ನು ಅರೆದು ಕುಡಿದಿರುವ ಅವರು, ಎಐಎಡಿಎಂಕೆ ನಾಯಕತ್ವದೊಂದಿಗೆ ಹೇಗೆ ಕೆಲಸ ಮಾಡಬೇಕು ಎಂಬುದನ್ನು ಅರಿತಿದ್ದಾರೆ ಎನ್ನುತ್ತಾರೆ ಮದುರೈನ ಸಾಮಾಜಿಕ ಸಂಶೋಧನಾ ಸಂಸ್ಥೆಯೊಂದರ ಮ್ಯಾನೇಜಿಂಗ್ ಟ್ರಸ್ಟಿ, ಸಾಮಾಜಿಕ ಹೋರಾಟಗಾರ ಪದ್ಮನಾಭನ್ ಆರ್. ಅಮ್ಮಾ ಮಕ್ಕಳ್ ಮುನ್ನೇತ್ರ ಕಳಗಂ ಸ್ಥಾಪಕ ಟಿಟಿವಿ ದಿನಕರನ್ ಮತ್ತು ಶಶಿಕಲಾ ಅವರು ತಮಿಳುನಾಡು ಮಾಜಿ ಸಿಎಂಗಳಾದ ಪಳನಿಸ್ವಾಮಿ ವಿರುದ್ಧ ಭ್ರಷ್ಟಾಚಾರ ಆರೋಪ ಬರಲಿ ಎಂದು ಕಾಯುತ್ತಿದ್ದಾರೆ.
ಆ ಕ್ಷಣವೇ ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಇರಾದೆ ಇವರದ್ದು ಎಂದು ಹೇಳಲಾಗಿದೆ.