Advertisement
ಬುಧವಾರ ತಮ್ಮ ನಿವಾಸದ ಹೊರಭಾಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ ಜಯಲಲಿತಾ ಅವರ ಸಾವಿನ ಬಗ್ಗೆ ಅನುಮಾನ ಇದೆ. ಅಲ್ಲದೇ ಸತ್ಯವನ್ನು ಜನರಿಗೆ ತಿಳಿಸುವುದು ಸರ್ಕಾರದ ಕೆಲಸವಾಗಿದೆ. ಹಾಗಾಗಿ ಅಮ್ಮ ಅವರ ಸಾವಿನ ತನಿಖೆ ಬಗ್ಗೆ ನಿವೃತ್ತ ನ್ಯಾಯಾಧೀಶರ ಆಯೋಗವನ್ನು ರಚಿಸುವ ಅಗತ್ಯವಿದೆ. ಅದೇ ನಿಟ್ಟಿನಲ್ಲಿ ತನಿಖಾ ಸಮಿತಿಯೊಂದನ್ನು ರಚಿಸುವ ಅಗತ್ಯವಿದೆ ಎಂದರು.
Related Articles
ಏತನ್ಮಧ್ಯೆ ನಿಮಗೆ ಎಷ್ಟು ಮಂದಿ ಶಾಸಕರ ಬೆಂಬಲ ಇದೆ ಎಂಬ ಸುದ್ದಿಗಾರರ ಪ್ರಶ್ನೆಗೆ, ನನಗೆ ಎಷ್ಟು ಮಂದಿ ಬೆಂಬಲ ಇದೆ ಎಂಬುದನ್ನು ವಿಧಾನಸಭೆಯಲ್ಲಿ ತೋರಿಸುವೆ ಎಂದು ಸೆಲ್ವಂ ತಿರುಗೇಟು ನೀಡಿದ್ದಾರೆ.
Advertisement
ಮತ್ತೊಂದೆಡೆ ಬುಧವಾರ ಬೆಳಗ್ಗೆ ಎಐಎಡಿಎಂಕೆಯ 131 ಶಾಸಕರು ಶಶಿಕಲಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಮೂಲಕ ಬಲಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಬಿಜೆಪಿ ಕೈವಾಡ ಇಲ್ಲ: ತಮಿಳುನಾಡಿನ ರಾಜಕೀಯ ಬೆಳವಣಿಗೆ ಹಿಂದೆ ಕೇಂದ್ರ ಸರ್ಕಾರದ ಕೈವಾಡ ಇದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸೆಲ್ವಂ, ಸದ್ಯದ ರಾಜಕೀಯ ಗೊಂದಲಕ್ಕೆ ಬಿಜೆಪಿ ಕಾರಣವಲ್ಲ ಎಂದು ತಿಳಿಸಿದ್ದಾರೆ. ಚಿನ್ನಮ್ಮಗೆ ಚುನಾವಣಾ ಆಯೋಗದ ಶಾಕ್:
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಆಯ್ಕೆ ಸರಿಯಾಗಿಲ್ಲ. ಶಶಿಕಲಾ ಅವರಿಗಾಗಿ ನಿಯಮಾವಳಿ ಉಲ್ಲಂಘಿಸಲಾಗಿದೆ ಎಂದು ಚುನಾವಣಾ ಆಯೋಗ ದೂರುವ ಮೂಲಕ ಆಯೋಗ ಶಶಿಕಲಾ ಅವರ ಪದೋನ್ನತಿಯನ್ನು ಪ್ರಶ್ನಿಸಿದೆ. ನಿಯಮಾವಳಿ ಉಲ್ಲಂಘಿಸಿ ಶಶಿಕಲಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಆಯೋಗ ಹೇಳಿದೆ. ಪಕ್ಷದ ಒಗ್ಗಟ್ಟನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ: ಶಶಿಕಲಾ
ಪಕ್ಷದ ಒಗ್ಗಟ್ಟನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ನಿಯೋಜಿತ ಮುಖ್ಯಮಂತ್ರಿ ಶಶಿಕಲಾ ನಟರಾಜನ್ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಪನ್ನೀರ್ ಸೆಲ್ವಂಗೆ ತಿರುಗೇಟು ನೀಡಿದ್ದಾರೆ. ಶಶಿಕಲಾ ನಟರಾಜನ್ ಅವರು ಪಕ್ಷದ ಕಚೇರಿಯಲ್ಲಿ ನಡೆಸಿದ್ದ ಮಹತ್ವದ ಸಭೆಗೆ ಎಐಎಡಿಎಂಕೆಯ 131 ಶಾಸಕರು ಹಾಜರಾಗಿದ್ದರು. ಸಭೆ ನಡೆಸಿದ ಬಳಿಕ ಹೊರಬಂದ ಶಶಿಕಲಾ ಅವರು ಪಕ್ಷದ ಕಾರ್ಯಕರ್ತರತ್ತ ಕೈಬೀಸಿದರು. ಪಕ್ಷದಲ್ಲಿ ಯಾವುದೇ ಸಮಸ್ಯೆ ಇಲ್ಲ. ಪನ್ನೀರ್ ಸೆಲ್ವಂ ರಾಜೀನಾಮೆಗೆ ನಾನು ಯಾವುದೇ ಒತ್ತಡ ಹೇರಿಲ್ಲ ಎಂದು ಸ್ಪಷ್ಟಪಡಿಸಿದರು.