Advertisement

Tamilnadu:  ಪಟಾಕಿ ತಯಾರಿಕೆ ಕಾರ್ಖಾನೆಯಲ್ಲಿ ಸ್ಫೋಟ- ಆರು ಮಂದಿ ಸಾ*ವು

01:24 PM Jan 04, 2025 | Team Udayavani |

ಚೆನ್ನೈ(ತಮಿಳುನಾಡು): ಪಟಾಕಿ ತಯಾರಿಸುತ್ತಿದ್ದ ಘಟಕದಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಆರು ಮಂದಿ ದಾರುಣವಾಗಿ ಸಾವ*ನ್ನಪ್ಪಿರುವ ಘಟನೆ ಶನಿವಾರ (ಜನವರಿ 04) ತಮಿಳುನಾಡಿನಲ್ಲಿ ನಡೆದಿರುವುದಾಗಿ ಪಿಟಿಐ ವರದಿ ತಿಳಿಸಿದೆ.

Advertisement

ವರದಿಯ ಪ್ರಕಾರ, ಘಟನೆಯಲ್ಲಿ ಹಲವಾರು ಕಾರ್ಮಿಕರು ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದ್ದು, ಸಂತ್ರಸ್ತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇರುವುದಾಗಿ ವಿವರಿಸಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟಕ್ಕೆ ಕಾರಣ ಏನೆಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಪಟಾಕಿ ತಯಾರಿಸುವ ವೇಳೆ ಕೆಮಿಕಲ್ಸ್‌ ಮಿಶ್ರಣದ ಸಂದರ್ಭದಲ್ಲಿ ಸ್ಫೋಟ ಸಂಭವಿಸರಬಹುದು ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಶಂಕಿಸಿದ್ದಾರೆ.

ದುರಂತದ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ.ಸ್ಟಾಲಿನ್‌ ಸಂತಾಪ ವ್ಯಕ್ತಪಡಿಸಿದ್ದು, ಘಟನೆಯಲ್ಲಿ ಮೃತಪಟ್ಟ ಕುಟುಂಬ ಸದಸ್ಯರಿಗೆ ನಾಲ್ಕು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಇತ್ತೀಚೆಗಷ್ಟೇ ಸಿಎಂ ಸ್ಟಾಲಿನ್‌ ವಿರುದ್ವುನಗರಕ್ಕೆ ಭೇಟಿ ನೀಡಿ, ಪಟಾಕಿ ತಯಾರಿಕೆ ಕಾರ್ಖಾನೆ ಮಾಲೀಕರಲ್ಲಿ ದುರಂತಗಳು ನಡೆಯದಂತೆ ಮುನ್ನೆಚ್ಚರಿಕೆಯ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದರು.

Advertisement

ವಿರುದ್ವುನಗರದಲ್ಲಿ 1,150 ಪಟಾಕಿ ತಯಾರಿಕೆ ಕಾರ್ಖಾನೆಗಳಿದ್ದು, ಅಂದಾಜು 4 ಲಕ್ಷ ಕಾರ್ಮಿಕರಿದ್ದಾರೆ. ಶಿವಕಾಶಿವೊಂದರಲ್ಲೇ ದೇಶದ ಶೇ.70ರಷ್ಟು ಪಟಾಕಿ ಉತ್ಪಾದನೆಯಾಗುತ್ತದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next