Advertisement

Recipe: ಚಟ್ ಪಟ್ ಅಂತ ಮಾಡಿ ಪನೀರ್ ಪಕೋಡಾ…

05:20 PM Nov 12, 2024 | ಶ್ರೀರಾಮ್ ನಾಯಕ್ |

ಪನೀರ್(Paneer )ನೋಡಿದ ಕೂಡಲೇ ಬಾಯಿಯಿಂದ ನೀರು ಸುರಿಯುತ್ತದೆ ಅಷ್ಟರ ಮಟ್ಟಿಗೆ ಪ್ರತಿಯೊಬ್ಬರೂ ಕೂಡ ಪನೀರನ್ನು ಇಷ್ಟಪಟ್ಟು ತಿನ್ನುತ್ತಾರೆ. ಪನೀರ್ ನಿಂದ ತಯಾರಿಸಿದ ಪ್ರತಿಯೊಂದು ಆಹಾರವು ನಾಲಗೆಗೆ ಹೆಚ್ಚು ರುಚಿಯನ್ನು ನೀಡುವುದರ ಜೊತೆಗೆ ಆರೋಗ್ಯಕ್ಕೂ ಸಹ ಒಳ್ಳೆಯದು.

Advertisement

ಪನೀರ್ ನಲ್ಲಿ ಪ್ರೋಟೀನ್‌, ಕ್ಯಾಲ್ಸಿಯಂ ಮತ್ತು ಫೈಬರ್‌ ಗುಣ ಹೊಂದಿರುವುದರಿಂದ ಆರೋಗ್ಯಕ್ಕೂ ಇದು ಉತ್ತಮ.

ಪನೀರ್ ನಿಂದ ತಯಾರಿಸುವ ತಿನಿಸನ್ನು ತಿನ್ನಲು ಹೋಟೆಲ್‌ಗೆ ಹೋಗಬೇಕೆಂದಿಲ್ಲ ನೀವೇ ಮನೆಯಲ್ಲಿ ಮಾಡಿಕೊಂಡು ತಿನ್ನಬಹುದಾಗಿದೆ. ಹಾಗಿದ್ದರೆ ಇನ್ನೇಕೆ ತಡ ಕೇವಲ 10ರಿಂದ 15ನಿಮಿಷದಲ್ಲಿ ಝಟ್‌ಫ‌ಟ್‌ ಅಂತಾ “ಪನೀರ್ ಪಕೋಡಾ”(Paneer Pakora)ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ…

ಬೇಕಾಗುವ ಸಾಮಗ್ರಿಗಳು:
ಪನೀರ್ ಕ್ಯೂಬ್ಸ್-500 ಗ್ರಾಂ, ಅರಿಶಿನ ಪುಡಿ-1 ಚಮಚ, ಕಾರ್ನ್ ಫ್ಲೋರ್- 3 ಚಮಚ, ಅಚ್ಚಖಾರದ ಪುಡಿ -2 ಚಮಚ
ಕಡ್ಲೆ ಹಿಟ್ಟು-1 ಕಪ್, ಅಡುಗೆ ಸೋಡಾ-1 ಚಮಚ, ಚಾಟ್ ಮಸಾಲ-ಸ್ವಲ್ಪ, ಕಸೂರಿ ಮೇಥಿ-ಸ್ವಲ್ಪ, ಕೊತ್ತಂಬರಿ ಸೊಪ್ಪು-ಸ್ವಲ್ಪ
ಓಂಕಾಳು-1 ಚಮಚ, ಎಣ್ಣೆ-ಕರಿಯಲು, ಉಪ್ಪು- ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ
ಮೊದಲಿಗೆ ಒಂದು ಬೌಲ್‌ ಗೆ ಪನೀರ್‌ ಕ್ಯೂಬ್ಸ್ ಅನ್ನು ಹಾಕಿ ಅದಕ್ಕೆ ಅರಿಶಿನ ಪುಡಿ, ಒಂದು ಚಮಚದಷ್ಟು ಅಚ್ಚಖಾರದ ಪುಡಿ, ಚಾಟ್‌ ಮಸಾಲ ಮತ್ತು ಸ್ವಲ್ಪ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಒಂದು ಬೌಲ್‌ಗೆ ಒಂದು ಕಪ್‌ನಷ್ಟು ಕಡ್ಲೆಹಿಟ್ಟು ಮತ್ತು ಕಾನ್‌ ಫ್ಲೋರ್‌ನ್ನು ಹಾಕಿ, ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ, ಅಚ್ಚಖಾರದ ಪುಡಿ, ಅಡುಗೆ ಸೋಡಾ, ಓಂಕಾಳು, ಕಸೂರಿ ಮೇಥಿ, ಸಣ್ಣ ಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಿ.

Advertisement

ತದನಂತರ ಮೊದಲೇ ಮಾಡಿಟ್ಟ ಪನೀರ್‌ ಕ್ಯೂಬ್ಸ್ ಮಿಶ್ರಣವನ್ನು ಹಾಕಿ ಚೆನ್ನಾಗಿ ಅದ್ದಿರಿ. ಬಳಿಕ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಕಾದಮೇಲೆ ಅದಕ್ಕೆ ಮಾಡಿಟ್ಟ ಪನೀರ್‌ ಅನ್ನು ಹಾಕಿ ಎರಡೂ ಬದಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಅದನ್ನು ಎಣ್ಣೆಯಿಂದ ತೆಗೆದು ಅದರ ಮೇಲೆ ಸ್ವಲ್ಪ ಚಾಟ್‌ ಮಸಾಲ ಪುಡಿಯನ್ನು ಹಾಕಿಕೊಂಡು ಟೊಮೆಟೋ ಕೆಚಪ್‌ ಅಥವಾ ಗ್ರೀನ್‌ ಚಟ್ನಿಯೊಂದಿಗೆ ಬಿಸಿಬಿಸಿಯಾದ ಪನೀರ್‌ ಪಕೋಡಾ ಸವಿಯಲು ಸಿದ್ಧ.

-ಶ್ರೀರಾಮ್ ಜಿ ನಾಯಕ್

Advertisement

Udayavani is now on Telegram. Click here to join our channel and stay updated with the latest news.

Next