Advertisement
ಉಡುಪಿಯಿಂದ ಬ್ರಹ್ಮಾವರ ಕಡೆ ಹೋಗು ವವರಿಗೆ ಹಾಗೂ ನೇಜಾರು, ಕೆಮ್ಮಣ್ಣು, ಮಲ್ಪೆ, ಹೂಡೆ ಮೊದಲಾದ ಭಾಗದವರು ಕಲ್ಯಾಣಪುರ ಮೂಲಕವಾಗಿ ಬ್ರಹ್ಮಾವರ ಕಡೆಗೆ ಹೋಗಲು ಪರ್ಯಾಯ ರಸ್ತೆಯೊಂದನ್ನು ಸೂಚಿಸಲಾಗಿದೆ. ಆದರೆ ಆ ರಸ್ತೆ ಮಾತ್ರ ಸಂಚಾರ ಯೋಗ್ಯವಾಗಿಲ್ಲ. ಅಷ್ಟು ಮಾತ್ರವಲ್ಲದೆ ರವಿವಾರ ಸಂತೆ ಮಧ್ಯದಲ್ಲೇ ಸಂಚಾರ ಮಾಡಬೇಕಾದ ಸ್ಥಿತಿಯೂ ಇದೆ.
Related Articles
Advertisement
ಅಪಾಯಕಾರಿ ಇಳಿಜಾರು, ಹೊಂಡ-ಗುಂಡಿ!ಸಂತೆಕಟ್ಟೆ ಪ್ರಾಂಗಣದಿಂದ ಮುಂದೆ ರಸ್ತೆ ಸಂಪೂರ್ಣ ಇಳಿಜಾರು ಇರುವುದರಿಂದಲೇ ಅಪಾಯ ಹೆಚ್ಚಿದೆ. ಇದರ ಜತೆಗೆ ರಸ್ತೆ ಡಾಮರು ಅಥವಾ ಕಾಂಕ್ರೀಟ್ ಕೂಡ ಇಲ್ಲ. ಬೃಹದಾಕಾರದ ಗುಂಡಿಗಳು ಬಿದ್ದಿರುವುದರಿಂದ ಮಳೆ ಬಂದರೆ ಸಂಪೂರ್ಣ ಕೆಸರುಮಯವಾಗಿರುತ್ತದೆ. ಎರಡು ಇಕ್ಕೆಲಗಳಲ್ಲಿ ಹುಲ್ಲಿನ ಪೊದೆ ಬೆಳೆದಿರುವುದರಿಂದ ಆಯ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಕನಿಷ್ಠ ಸೌಲಭ್ಯ ಒದಗಿಸಿ: ಜನರ ಆಗ್ರಹ
ಪರ್ಯಾಯ ರಸ್ತೆ ಎಂದು ಸೂಚಿಸಿರುವುದರಿಂದ ಕನಿಷ್ಠ ವಾಹನ ಸಂಚಾರ ಯೋಗ್ಯವಾಗಿಸಬೇಕು. ಈ ರಸ್ತೆಯಲ್ಲಿ ವಾಹನ ಸಂಚಾರವೇ ಕಷ್ಟವಾಗಿದೆ. ಅಪಾಯ ಕಾರಿ ಗುಂಡಿಗಳು ಇವೆ. ತೇಪೆ ಹಚ್ಚಲು ವೆಟ್‌ಮಿಕ್ಸ್ ಹಾಕಿದ್ದರಿಂದ ದೊಡ್ಡ ದೊಡ್ಡ ಜೆಲ್ಲಿಕಲ್ಲು ಮೇಲೆದ್ದಿರುವುದರಿಂದ ವಾಹನ ಸವಾರರಿಗೆ ಸಮಸ್ಯೆ ಯಾಗುತ್ತಿದೆ. ಸ್ಥಳೀಯಾಡಳಿತ ಅಥವಾ ಸಂಬಂಧಪಟ್ಟ ಇಲಾಖೆಯ ಅಧಿಕಾರಿ ಗಳು ಕನಿಷ್ಠ ಸೌಲಭ್ಯ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ದಾರಿ ತಪ್ಪಿಸುವ ದಾರಿಗಳು!
ಸ್ಥಳೀಯರಿಗೆ ಪರ್ಯಾಯ ಮಾರ್ಗ ಗೊತ್ತಿರುವುದರಿಂದ ಸಂತಕೆಟ್ಟೆ ವೃತ್ತದಿಂದ ಸ್ವಲ್ಪ ಮುಂದೆ ಸಾಗಿ ವಾಟರ್ ಟ್ಯಾಂಕ್ ಸಮೀಪದಲ್ಲಿ ಬಲಕ್ಕೆ ತಿರುವು ಪಡೆದು ಹೆದ್ದಾರಿಗೆ ಹೋಗುತ್ತಿದ್ದಾರೆ. ಆದರೆ ಹೊಸಬರಿಗೆ ಈ ರಸ್ತೆ ಅರಿವಿಗೆ ಬರುವುದಿಲ್ಲ. ಸಂತೆಕಟ್ಟೆಯಿಂದ ಹಾಗೆಯೇ ಮುಂದೆ ಸಾಗಿ ಕಲ್ಯಾಣಪುರ ನದಿಯವರೆಗೂ ಹೋಗಿ ರಸ್ತೆ ಎಂಡ್ ಆದಲ್ಲಿ ಯುಟರ್ನ್ ಪಡೆದು ವಾಪಸ್ ಬರುವುದು ಹೆಚ್ಚಾಗುತ್ತಿದೆ. ಪರ್ಯಾಯ ಮಾರ್ಗದ ಸಣ್ಣ ಬೋರ್ಡ್ ಅಳವಡಿಸಿದ್ದರೂ ಸರಿಯಾಗಿ ಕಾಣುತ್ತಿಲ್ಲ. ಹೀಗಾಗಿ ಹೊಸಬರು ದಾರಿ ತಪ್ಪುವುದೇ ಹೆಚ್ಚಾಗಿದೆ. -ರಾಜು ಖಾರ್ವಿ ಕೊಡೇರಿ