Advertisement
ಈ ಸಂದರ್ಭ ಮಾತನಾಡಿದ ಖಾದರ್, ಅನೂಪ್ ಪೂಜಾರಿ ಬಗ್ಗೆ ಮುಖ್ಯಮಂತ್ರಿಗಳ ಜತೆಗೆ ಮಾತನಾಡಿದ್ದು, ಸರಕಾರದಿಂದ ಒದಗಿಸಬಹುದಾದ ಸವಲತ್ತು ಹಾಗೂ ಪರಿಹಾರ ನೀಡು ವುದಾಗಿ ಹೇಳಿದರು. ಮೃತರ ಪತ್ನಿ ಪದವೀಧರೆಯಾಗಿದ್ದು, ಅವರಿಗೆ ಸರಕಾರ ಕೆಲಸ ಕೊಡಿಸಬೇಕು ಎಂದು ಕುಂದಾಪುರ ಬಿಲ್ಲವ ಸಮಾಜದ ಅಧ್ಯಕ್ಷ ಅಶೋಕ ಪೂಜಾರಿ ಮನವಿ ಮಾಡಿದರು. ಈ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು ಖಾದರ್ ಮತ್ತು ಸೊರಕೆ ಹೇಳಿದರು.
ಸ್ಮಾರಕ ರಚನೆಗೆ ಸಹಕಾರ ಬೀಜಾಡಿ ಕಡಲ ತೀರದಲ್ಲಿ ಅನೂಪ್ ಪೂಜಾರಿ ಅವರ ಸ್ಮಾರಕ ನಿರ್ಮಿಸಲು ಸಹಕಾರ ನೀಡುವುದಾಗಿ ಖಾದರ್ ಹೇಳಿದರು. ಶಾಸಕ ಯಶ್ಪಾಲ್ ಸಹಾಯ
ಶಾಸಕ ಯಶ್ಪಾಲ್ ಅವರು ಕೂಡ ಹುತಾತ್ಮರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರಲ್ಲದೆ, ವೈಯಕ್ತಿಕವಾಗಿ 1 ಲ.ರೂ. ಸಹಾಯ ನೀಡಿದರು.