ಮೂಡಬಿದಿರೆ: ಅರ್ಪಣಾ ಭಾವದ ಸೇವೆ ಹನುಮನಿಗೆ ಇಷ್ಟ. ನಮ್ಮ ಅಂತರಂಗ ಪ್ರವೇಶಕ್ಕೆ ಅಧ್ಯಾತ್ಮ ತತ್ವ ರಹದಾರಿ ಎಂದು ಶ್ರೀಕ್ಷೇತ್ರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಕೋಟೆಬಾಗಿಲು ಶ್ರೀ ವೀರ ಮಾರುತಿ ದೇವಸ್ಥಾನದಲ್ಲಿ ಸಾನ್ನಿಧ್ಯ ಕಲಶಾಭಿಷೇಕ ವರ್ಷಾವಧಿ ಜಾತ್ರಾ ಮಹೋತ್ಸವದ ಸಂದರ್ಭ ಶ್ರೀ ವೀರ ಮಾರುತಿ ಕಲಾ ಮಂದಿರವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಅಧ್ಯಕ್ಷ ಉದಯ ಕುಮಾರ್ ಹೆಗ್ಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ದೇವೇಂದ್ರ ಹೆಗ್ಡೆ ಕೊಕ್ರಾಡಿ, ಮುಂಬಯಿ ಹೆಗ್ಗಡೆ ಸಮಾಜ ಸೇವಾ ಸಂಘದ ವಿಜಯ್ ಬಿ. ಹೆಗ್ಡೆ, ಬೆಂಗಳೂರು ಹೆಗ್ಗಡೆ ಸೇವಾ ಸಂಘದ ಪ್ರತಿನಿಧಿ ಸದಾಶಿವ ಹೆಗ್ಡೆ, ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ಯಾಮ್ ಹೆಗ್ಡೆ, ಜಿಲ್ಲಾ ಹೆಗ್ಗಡೆ ಮಹಿಳಾ ಸಂಘ ಮೂಡಬಿದಿರೆ ವಲಯಾಧ್ಯಕ್ಷೆ ನಳಿನ್ ಆರ್. ಹೆಗ್ಡೆ ಉಪಸ್ಥಿತರಿದ್ದರು.
ಕಲಾವಿದ ದಿಲೀಪ್ ಹೆಗ್ಡೆ ಹೆಬ್ಟಾಳಬೆಟ್ಟು ಕಡ್ತಲ ವೀರ ಹನುಮಾನ್ ಚಿತ್ರ ಬಿಡಿಸಿದರು. ಶಶಿಧರ ಹೆಗ್ಡೆ ಕಾರ್ಯಕ್ರಮ
ನಿರೂಪಿಸಿದರು. ಸಂಜೆ ಸತ್ಯನಾರಾಯಣ ಪೂಜೆ, ರಂಗಪೂಜೆ, ಮಹೋತ್ಸವ, ಬಲಿ, ಹಿರಿಯಡ್ಕ ಮೇಳದವರಿಂದ ಯಕ್ಷಗಾನ ಜರಗಿದವು.