ಪಿರಿಯಾಪಟ್ಟಣ: ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆಯ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಅಲ್ಪನಾಯಕನ ಹಳ್ಳಿ ಮಹದೇವ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮುತ್ತೂರು ಮಹೇಶ್ ರವರನ್ನು ಆಯ್ಕೆ ಮಾಡಿ ನೇಮಕಾತಿ ಪತ್ರವನ್ನು ವಿತರಿಸಲಾಯಿತು.
ಸಂಘಟನೆಯ ರಾಜ್ಯ ಉಪಾಧ್ಯಕ್ಷ ನೇರಲಕುಪ್ಪೆ ನವೀನ್ ಮಾತನಾಡಿ ಸ್ವಾತಂತ್ರ್ಯ ಹೋರಾಟಕ್ಕೆ ಮೊದಲು ಕಿಡಿ ಹೊತ್ತಿಸಿದ ವೀರ ಸೇನಾನಿ ರಾಯಣ್ಣ, ಈತ ಕಿತ್ತೂರು ರಾಣಿ ಚನ್ನಮ್ಮಾಜಿಯ ಅಂಗರಕ್ಷಕ, ಅಪ್ರತಿಮ ದೇಶಭಕ್ತ, ರಾಯಣ್ಣ ಬದುಕಿನುದ್ದಕ್ಕೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ವೀರ ಮರಣವನ್ನು ಹೊಂದಿದ ಮಾಹಾನ್ ಚೇತನ, ರಾಯಣ್ಣನ ಶೌರ್ಯ ಮತ್ತು ಆದರ್ಶದ ಬದುಕು ಇಂದಿನ ಯುವ ಸಮುದಾಯಕ್ಕೆ ದಾರಿದೀಪವಾಗಬೇಕಿದೆ. ದೇಶದ ಏಕತೆ ಮತ್ತು ಸಮಗ್ರತೆಗಾಗಿ ಹೋರಾಟ ಮಾಡಿದ ರಾಯಣ್ಣನ ಹೆಸರಿನಲ್ಲಿ ಸಮಾಜವನ್ನು ಸಂಘಟಿಸಿ ಅವರ ಹೆಸರಿನಲ್ಲಿ ಸಮಾಜದಲ್ಲಿರುವ ಅಸಾಯಕರಿಗೆ ನೆರವು ನೀಡುವ ಉದ್ದೇಶದಿಂದ ಜನಾಂಗವನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಈ ಸಂಘಟನೆಯು ರಾಜ್ಯದಾದ್ಯಂತ ಮುನ್ನುಗ್ಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ನೂತನವಾಗಿ ನೇಮಕಗೊಂಡ ತಾಲ್ಲೂಕು ಘಟಕದ ಅಧ್ಯಕ್ಷ ಅಲ್ಪನಾಯಕನಹಳ್ಳಿ ಮಹದೇವ್ ಹಾಗೂ ಪ್ರಧಾನ ಕಾರ್ಯದರ್ಶಿ ಮುತ್ತೂರು ಮಹೇಶ್ ರವರಿಗೆ ನೇಮಕಾತಿ ಪತ್ರವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಂತೆಕೊಪ್ಪಲು ರಮೇಶ್, ಸಂಘದ ಪಧಾಧಿಕಾರಿಗಳಾದ ಕರೀಗೌಡ, ರಾಜೇಗೌಡ, ಜಾಗರಾಜು, ಸುರೇಶ್, ವಿಕಾಶ್, ಮಹದೇವ್, ಪುಟ್ಟಣ್ಣಯ್ಯ, ಅಣ್ಣೇಗೌಡ, ಅಭಿಷೇಕ್, ಅವಿನಾಶ್, ಅಶೋಕ್, ಹಿಟ್ನೆಹೆಬ್ಬಾಗಿಲು ಮಹದೇವ್, ಹರೀಶ್, ಜೀವನ್, ಚಿಕ್ಕೇಗೌಡ, ರೇವಣ್ಣ, ದೇವರಾಜು ಸೇರಿದಂತೆ ಮತ್ತಿತರರು ಹಾಜರಿದ್ದರು.