Advertisement

Puttur: ವಿದೇಶದಿಂದ ರಜೆಯಲ್ಲಿ ಬಂದಿದ್ದ ಯುವಕ ಹೃದಯಾಘಾತದಿಂದ ನಿಧನ

07:52 PM Dec 17, 2024 | Team Udayavani |

ಕಾಣಿಯೂರು: ವಿದೇಶದಲ್ಲಿ ಉದ್ಯೋಗಿಯಾಗಿದ್ದು, ರಜೆಯಲ್ಲಿ ಊರಿಗೆ ಬಂದಿದ್ದ ಯುವಕ ಹೃದಯಾಘಾತದಿಂದ ನಿಧನಹೊಂದಿದ ಘಟನೆ ಸೋಮವಾರ ಪುತ್ತೂರಿನಲ್ಲಿ ಸಂಭವಿಸಿದೆ.

Advertisement

ಕಡಬ ತಾಲೂಕು ಚಾರ್ವಾಕ ಗ್ರಾಮದ ದೇವಿನಗರ ಮೂಲದವರಾಗಿದ್ದು, ಪುತ್ತೂರಿನ ಸಂಪ್ಯದಲ್ಲಿ ಮನೆ ಮಾಡಿಕೊಂಡಿದ್ದ ದೇಜಪ್ಪ ಯಾನೆ ದಿವೀಶ್‌ ಮಡಿವಾಳ (45) ಮೃತಪಟ್ಟವರು.

ಚಾರ್ವಾಕದ ಮೂಲ ಮನೆಯಲ್ಲಿ ನಡೆಯುತ್ತಿದ್ದ ದೈವಗಳ ಕಾರ್ಯಕ್ರಮಕ್ಕೆಂದು ವಿದೇಶದಿಂದ ಆಗಮಿಸಿದವರು ರವಿವಾರ ರಾತ್ರಿ ಪುತ್ತೂರಿನ ಮನೆಗೆ ಬಂದಿದ್ದರು. ಸೋಮವಾರ ಬೆಳಗ್ಗಿನ ಜಾವ ಹೃದಯಾಘಾತವಾಗಿದ್ದು, ತತ್‌ಕ್ಷಣ ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ಸಾಗಿಸಿದರೂ ಅಲ್ಲಿ ಮೃತಪಟ್ಟರು.

ದಿವೀಶ್‌ ಡಿ. 28ರಂದು ವಿದೇಶಕ್ಕೆ ಮರಳುವವರಿದ್ದರು. ಮೃತರು ತಂದೆ, ಪತ್ನಿ, ಇಬ್ಬರು ಪುತ್ರಿಯರು ಹಾಗೂ ಪುತ್ರನನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next