Advertisement
ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ 12ನೇ ಆರೋಪಿ ವಿನಯ್‌ಕುಮಾರ್ ವಿಚಾರಣೆ ವೇಳೆ ನಟಿಯ ಹೆಸರು ಬಾಯಿಬಿಟ್ಟಿದ್ದು, ಆಕೆಗೂ ಡ್ರಗ್ಸ್ ದಂಧೆಗೂ ನಂಟು ಇದೆ ಎಂಬುದು ಗೊತ್ತಾಗಿದೆ.
Related Articles
Advertisement
ಇದನ್ನೂ ಓದಿ : ಪೊಂಗಲ್ ಸಂಭ್ರಮ: ಕೋವಿಡ್ ಮಾರ್ಗಸೂಚಿಯಂತೆ ಜಲ್ಲಿಕಟ್ಟು ಆಚರಣೆಗೆ ಅನುಮತಿ: ತಮಿಳುನಾಡು
ಅಂತಾರಾಜ್ಯ ಪೆಡ್ಲರ್‌ಗಳ ಬಂಧನ :
ಬೆಂಗಳೂರು: ಐಷಾರಾಮಿ ಕಾರು ಖರೀದಿಸಿ ಅದರಲ್ಲಿ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಡ್ರಗ್ಸ್ ಪೆಡ್ಲರ್‌ಗಳನ್ನು ಜೆ.ಸಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಸನ್ನದ್ (24) ಮತ್ತು
ಮೊಹಮ್ಮದ್ ಬಿಲಾಲ್ (24) ಬಂಧಿತರು. ಆರೋಪಿಗಳಿಂದ ಹತ್ತು ಕೆ.ಜಿ.ಗಾಂಜಾ ಮತ್ತು 12 ಲಕ್ಷ ರೂ.ಬೆಲೆಬಾಳುವ ಕಾರು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.
ಮೊಹಮ್ಮದ್ ಬಿಲಾಲ್ ಎಂಜಿನಿಯರಿಂಗ್ ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದು, ಸನ್ನದ್ ಪಿಯುಸಿ ವ್ಯಾಸಂಗ ಮಾಡಿದ್ದಾನೆ. ಆರೋಪಿಗಳು ಡ್ರಗ್ಸ್ ದಂಧೆಯನ್ನು ವೃತ್ತಿಯ ನ್ನಾಗಿಸಿಕೊಂಡಿದ್ದಾರೆ. ಏಳೆಂಟು ವರ್ಷಗಳಿಂದ ದಂಧೆಯಲ್ಲಿ ತೊಡಗಿದ್ದರು. ಆರೋಪಿಗಳು ಆಂಧ್ರಪ್ರದೇಶದಿಂದ ಗಾಂಜಾ ಖರೀದಿ ಮಾಡಿ ನಗರಕ್ಕೆಕಾರಿನಲ್ಲಿ ತಂದು, ಟೆಕ್ಕಿಗಳು, ವಿದ್ಯಾರ್ಥಿ ಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.
ಡ್ರಗ್ಸ್ ದಂಧೆಯಲ್ಲಿ ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಆರೋಪಿಗಳು ಜೆ.ಸಿ.ನಗರದ ಯುಟಿಸಿ ಕಾಲೇಜು ಸಮೀಪ ಕಾರು ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪಿಐ ನಾಗರಾಜ್ ಮತ್ತು ಪಿಎಸ್‌ಐ ವಿನೋದ್ ಜಿರಗಾಳೆ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಪೊಲೀಸ ರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಆರೋಪಿಗಳು 12 ಲಕ್ಷ ರೂ. ಮೌಲ್ಯದ ಕಾರುಖರೀದಿ ದಂಧೆಯಲ್ಲಿ ಬಂದ ಹಣಲ್ಲೇ ಕಾರು ಖರೀದಿಸಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.