Advertisement
ಇದು ಹಿಂದಿನ ಕಾಲದಿಂದಲೂ ಇದೇ ಕಾರಣಕ್ಕೆ ಇದ್ದಿರಬಹುದು. ಹಿಂದೆ ಸ್ವಾಮೀಜಿಗಳಿಗೆ ಮರದ ಪಾದುಕೆಗಳು, ಶ್ರೀಮಂತರಿಗೆ ಚರ್ಮದ ಪಾದರಕ್ಷೆಗಳು ಇದ್ದವು. ಆದರೆ ಈಗ ಕಾಲ ಬದಲಾಗಿದೆ ಸ್ಲಿಪ್ಪರ್, ಸ್ಯಾಂಡಲ್, ಕ್ರಾಕರ್ಸ್, ಶೂಗಳು ಇನ್ನು ಹಲವಾರು ವಿಧದ ಪಾದರಕ್ಷೆಗಳು ಸಿಗುತ್ತದೆ.
Related Articles
Advertisement
ಪಾದರಕ್ಷೆಯನ್ನು ಖರೀದಿಸುವಾಗ, ಅದರ ಬಾಳಿಕೆ ಮತ್ತು ಅದರ ಯಾವ ಕಾಲದಲ್ಲಿ ಉಪಯೋಗ ಮಾಡಬೇಕು ಎಂಬ ಬಗ್ಗೆ ಪಾದರಕ್ಷೆಯನ್ನು ಮಾರುವವನೊಂದಿಗೆ ಕೊಳ್ಳುವವರು ಕೇಳುವುದು ರೂಢಿ. ಮತ್ತೆ ಮಧ್ಯಮ ವರ್ಗದವರ ಕಡಿಮೆ ಮಾಡಿಕೊಡಿ ಎಂಬ ಚೌಕಾಸಿ ಕೂಡ ಇದೆ. ಪಾದರಕ್ಷೆಯನ್ನು ಸಲ್ಪ ಕಟ್ ಆದರೂ, ಅದನ್ನು ರಿಪೇರಿ ಮಾಡುವಲ್ಲಿ ತೆಗೆದುಕೊಂಡು ಹೋಗುತ್ತೇವೆ. ಅವರು ಸರಿಪಡಿಸಿ ನೀಡುತ್ತಾರೆ. ಎಷ್ಟೋ ಬಾರಿ ಚಪ್ಪಲಿ ಮೊತ್ತಕ್ಕಿಂತಲೂ ಅದನ್ನು ಪೂರ್ತಿ ಸ್ಟಿಚ್ ಮಾಡಲು ನೀಡಿದಾಗ ದುಪ್ಪಟ್ಟು ಮೊತ್ತ ನೀಡಬೇಕಾಗುತ್ತದೆ ಎನ್ನುವುದು ದುಃಖದ ಸಂಗತಿ.
ಈ ಹಿಂದೆ ದೇವರ ಪಾದುಕೆಗಳನ್ನು ಸಮಗಾರರು ಮಾಡುತ್ತಿದ್ದರು. ಈಗ ಅದರ ಪ್ರಮಾಣ ಇಳಿದಿದೆ. ಆದರೆ ಸಮಗಾರರು ತಮ್ಮ ಕುಲಕಸುಬುವನ್ನು ಮಾಡಿದರೆ, ಉತ್ತಮ ವ್ಯಾಪಾರವಾಗುತ್ತದೆ ಎಂಬ ನಂಬಿಕೆ ಕೂಡ ಆ ಸಮುದಾಯಕ್ಕೆ ಈಗಲೂ ಇದೆ. ಈ ಸಮುದಾಯವು ಪರಿಶಿಷ್ಟ ಪಂಗಡದ ಒಳಗೆ ಬರುತ್ತದೆ. ಈಗ ಸರಕಾರದ ಹಲವಾರು ಹುದ್ದೆಗಳಲ್ಲಿ ಕೂಡ ಈ ಸಮುದಾಯದ ಮಂದಿ ಇದ್ದಾರೆ. ಆದರೆ ಈಗ ಅವರ ಕುಲಕಸುಬನ್ನು ಬಿಟ್ಟು ಬೇರೆ ಉದ್ಯೋಗವನ್ನು ಹುಡುಕಿಕೊಳ್ಳುತ್ತಿದ್ದಾರೆ.
ಇನ್ನು ನಾವು ದೇವಸ್ಥಾನಗಳಿಗೆ ಹೋಗುವಾಗ ಚಪ್ಪಲಿ ಕಾಯುವ ಸ್ಟ್ಯಾಂಡ್‌ಗಳನ್ನು ಇಂದು ನೋಡಬಹುದು. ಈ ಹಿಂದೆ ಈ ರೀತಿ ಇದ್ದದ್ದು ಕಡಿಮೆ. ದೇವಸ್ಥಾನದ ಆವರಣದಲ್ಲಿ ಚಪ್ಪಲಿಯನ್ನು ಬಿಟ್ಟು ಹೋಗುತ್ತಿದ್ದರು. ಹಾಗೂ ಒಂದು ಕಡೆ ಇದ್ದ ಚಪ್ಪಲಿಯನ್ನು ಇನ್ನೊಬ್ಬರು ತಮ್ಮದೊಂದು ಹಾಕಿಕೊಂಡು ಹೋದ ಸಂಗತಿಗಳನ್ನು ನೋಡಬಹುದು. ಹಾಗೆ ಮಧ್ಯಮ ವರ್ಗದವರು ಚಪ್ಪಲಿ ಕಳೆದು ಹೋಗಬಾರದೆಂದು ಒಂದು ಚಪ್ಪಲಿಯ ಮೇಲೆ ಇನ್ನೊಂದು ಚಪ್ಪಲಿಗಳನ್ನು ಇಟ್ಟು ತಮ್ಮದೊಂದು ಗುರುತು ಮಾಡಿ ಹೋಗುತ್ತಿದ್ದ ಸಂಗತಿಗಳು ಇವೆ.
ಅಧಿಕವಾಗಿ ಜಾತ್ರೆಯ ಸಂದರ್ಭದಲ್ಲಿ ಚಪ್ಪಲಿಯ ಕಳ್ಳತನವನ್ನು ಕೂಡ ನೋಡಬಹುದು. ಈಗಿನ ವಿದ್ಯಾಮಾನ ಎಷ್ಟೇ ಬದಲಾಗಿರಬಹುದು. ಕನಿಷ್ಠ 10 ನಿಮಿಷಗಳ ಕಾಲ ಬರಿಗಾಲಿನಲ್ಲಿ ಸಂಚರಿಸಿದರೆ ಆರೋಗ್ಯದ ಮಟ್ಟವನ್ನು ಅಭಿವೃದ್ಧಿಪಡಿಸಬಹುದು ಎಂದು ವೈದ್ಯಕೀಯ ವರದಿಗಳು ಹೇಳುತ್ತದೆ.
ಆದರೆ ಈಗ ತಮ್ಮ ಸ್ವಂತ ಮನೆಯೊಳಗೂ ಕೂಡ ಸ್ಲಿಪ್ಪರ್‌ಗಳನ್ನು ಹಾಕಿ ಸಂಚರಿಸುವುದನ್ನು ಶ್ರೀಮಂತರ ಮನೆಗಳಲ್ಲಿ ನೋಡಬಹುದು. ಈಗಿನ ಕಾಲದಲ್ಲಿ ಹೊಸ ವೈದ್ಯಕೀಯದ ತಂತ್ರಜ್ಞಾನವುಳ್ಳ ಪಾದರಕ್ಷೆಯನ್ನು ನೋಡಬಹುದು ಮತ್ತು ಈಗಿನ ಆಧುನಿಕ ವಿದ್ಯಮಾನಕ್ಕೆ ಈ ವಿಷಯಗಳು ತಿಳಿಯದೆ ಹೋಗಿರುವುದು ವಿಪರ್ಯಾಸವಾಗಿದೆ.
ಕೆಲವೊಂದು ಬಾರಿ, ಅರಿವಿಲ್ಲದೇ ಪ್ರವಹಿಸುತ್ತಿರುವ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದಾಗ ರಬ್ಬರ್‌ನ ಪಾದರಕ್ಷೆಗಳು ಜೀವವನ್ನು ಉಳಿಸುವ ಕೆಲಸವನ್ನು ಕೂಡ ಮಾಡಿದೆ.
ಇಂದಿನ ಕಾಲದಲ್ಲಿ ಪಾದರಕ್ಷೆಗಳು ತಮ್ಮ ಮೌಲ್ಯವನ್ನು ಅಧಿಕಗೊಳಿಸುತ್ತಿದೆ. ಹಲವು ಮಂದಿಗೆ ಉದ್ಯೋಗವನ್ನು ಕಲ್ಪಿಸಿದ್ದಾರೆ,ಇನ್ನೊಂದು ಕಡೆಯಲ್ಲಿ ಪರಿಸರಕ್ಕೆ ಹಾನಿ ಕೂಡ ಆಗಿದೆ.
-ದೇವಿಶ್ರೀ ಶಂಕರಪುರ,
ಆಳ್ವಾಸ್ ಕಾಲೇಜು ಮೂಡುಬಿದಿರೆ