Advertisement

ಸಂಹಿತಾ ಸಿನಿ ಸಂಭ್ರಮ

10:03 AM Jul 04, 2019 | Lakshmi GovindaRaj |

ಮಾಡೆಲಿಂಗ್‌ ಎಂಬುದು ಚಿತ್ರರಂಗಕ್ಕೆ ನಟ-ನಟಿಯರಾಗಲು ಬಯಸುವಂಥವರಿಗೆ ಮೊದಲು ಮೆಟ್ಟಿಲಿದ್ದಂತೆ. ಮಾಡೆಲಿಂಗ್‌ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅನೇಕ ನಟ-ನಟಿಯರು ನಂತರ ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರಿರುವ ಸಾಕಷ್ಟು ಉದಾಹರಣೆಗಳು ಕನ್ನಡ ಚಿತ್ರರಂಗದಲ್ಲೂ ಸಿಗುತ್ತದೆ. ಈಗ ಈ ಸಾಲಿಗೆ ಸಂಹಿತಾ ವಿನ್ಯಾ ಎನ್ನುವ ಅಂಥದ್ದೇ ಮತ್ತೂಂದು ಹೆಸರು ಸೇರ್ಪಡೆಯಾಗುತ್ತಿದೆ.

Advertisement

ಸುಮಾರು 3-4 ವರ್ಷಗಳಿಂದ ಮಾಡೆಲಿಂಗ್‌ ಲೋಕದಲ್ಲಿ ಸಕ್ರಿಯವಾಗಿರುವ ಸಂಹಿತಾ ವಿನ್ಯಾ, ಅನೇಕ ಜಾಹೀರಾತುಗಳು, ಕೆಲ ಕಿರುಚಿತ್ರಗಳಲ್ಲಿ ಅಭಿನಯಿಸುತ್ತಲೇ ಹಿರಿತೆರೆಗೆ ಕಾಲಿಟ್ಟ ಹುಡುಗಿ. ಆರಂಭದಲ್ಲಿ ಬೈರಾಜ್‌ ನಿರ್ದೇಶನದ “ಸೂತ್ರದಾರಿ’ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಂಹಿತಾ ವಿನ್ಯಾ, ಬಳಿಕ ಎ. ಮಂಜು ದೈವಜ್ಞ ನಿರ್ದೇಶನದ “ಗೌಡರ ದರ್ಬಾರ್‌’ ಚಿತ್ರದ ಪಾತ್ರಕ್ಕೂ ಬಣ್ಣ ಹಚ್ಚಿದರು.

“ಗೌಡರ ದರ್ಬಾರ್‌’ ಚಿತ್ರದ ಬಳಿಕ ಸಂಹಿತಾ ವಿನ್ಯಾಗೆ, ನಿಧಾನವಾಗಿ ಒಂದಷ್ಟು ಅವಕಾಶಗಳು ಹುಡುಕಿಕೊಂಡು ಬರಲು ಶುರುವಾದವು. ತಮ್ಮ ಚಿತ್ರರಂಗದ ಅನುಭವಗಳ ಬಗ್ಗೆ ಮಾತನಾಡುವ ಸಂಹಿತಾ ವಿನ್ಯಾ, “ಕನ್ನಡ ಚಿತ್ರರಂಗಕ್ಕೆ ಬಂದು ಸುಮಾರು ಎರಡು ವರ್ಷವಾಯ್ತು. ಈ ಎರಡು ವರ್ಷದಲ್ಲಿ ನಾನು ನಾಯಕಿಯಾಗಿ ಅಭಿನಯಿಸಿದ್ದ “ಹಾಲುತುಪ್ಪ’, “ಅಮೃತ ಘಳಿಗೆ’ ಎರಡು ಚಿತ್ರಗಳು ಬಿಡುಗಡೆಯಾಗಿವೆ.

ಇನ್ನೂ “ವಿಷ್ಣು ಸರ್ಕಲ್‌’, “ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು’, “ಗೌಡರ ದರ್ಬಾರ್‌’ ಚಿತ್ರಗಳು ರಿಲೀಸ್‌ಗೆ ರೆಡಿಯಾಗಿವೆ. ಇದರ ನಡುವೆಯೇ ತಮಿಳಿನಲ್ಲಿ “ಕಾದಲ್‌ ವಾನಮ್‌’ ಚಿತ್ರದಲ್ಲೂ ನಟಿಸುವ ಅವಕಾಶ ಸಿಕ್ಕಿತು. ಇಲ್ಲಿಯವರೆಗೆ ಅಭಿನಯಿಸಿರುವ ಪ್ರತಿಚಿತ್ರಗಳು ಕೂಡ ಒಂದೊಂದು ವಿಭಿನ್ನ ಅನುಭವ ಕೊಟ್ಟಿವೆ. ನಾನು ಪ್ರತಿ ಪಾತ್ರಗಳನ್ನೂ ಖುಷಿಯಿಂದ ನಿರ್ವಹಿಸಿದ್ದೇನೆ’ ಎನ್ನುತ್ತಾರೆ.

ಆದರೆ ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಕನ್ನಡ ಚಿತ್ರಗಳಿಗೆ ಇಲ್ಲಿಯ ನಟಿಯರಿಗಿಂತ ಪರಭಾಷಾ ನಟಿಯರಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ ಎನ್ನುವುದು ಸಂಹಿತಾ ವಿನ್ಯಾ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾತನಾಡುವ ಸಂಹಿತಾ ವಿನ್ಯಾ “ಕನ್ನಡದಲ್ಲಿ ಇತ್ತೀಚೆಗೆ ಹೆಚ್ಚು ಹೆಚ್ಚು ಚಿತ್ರಗಳು ನಿರ್ಮಾಣವಾಗುತ್ತಿವೆ.

Advertisement

ಆದರೆ ಬಹುತೇಕ ಚಿತ್ರಗಳಲ್ಲಿ ಕನ್ನಡದ ನಟಿಯರಿಗೆ ಅವಕಾಶ ಸಿಗುತ್ತಿಲ್ಲ. ಇಲ್ಲಿನ ನಿರ್ಮಾಪಕರು, ನಿರ್ದೇಶಕರು ಅವಕಾಶ ಕೊಟ್ಟರೆ ಇನ್ನಷ್ಟು ಕನ್ನಡದ ನಟಿಯರು ಬೆಳಕಿಗೆ ಬರುತ್ತಾರೆ. ನನಗೂ ಕೂಡ ಬೇರೆ ಭಾಷೆಗಳಲ್ಲಿ ಚಿತ್ರಗಳ ಆಫ‌ರ್ ಬರುತ್ತಿವೆ. ಆದ್ರೆ ಕನ್ನಡ ಚಿತ್ರರಂಗದಲ್ಲೇ ಗುರುತಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ, ಇಲ್ಲೇ ಹೆಚ್ಚು ಗಮನ ಕೊಡುತ್ತಿದ್ದೇನೆ’ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next