Advertisement

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

09:30 AM Nov 27, 2024 | Team Udayavani |

ಹೊಸದಿಲ್ಲಿ: ಪಾಕಿಸ್ಥಾನಕ್ಕೆ ಪ್ರಯಾಣಿಸದಿರಲು ಭಾರತ ಕ್ರಿಕೆಟ್ ತಂಡದ ನಿರ್ಧಾರದ ನಂತರ ಅನಿಶ್ಚಿತತೆಯನ್ನು ಎದುರಿಸುತ್ತಿರುವ ಚಾಂಪಿಯನ್ಸ್ ಟ್ರೋಫಿಯ ಸುತ್ತಲಿನ ಬಿಕ್ಕಟ್ಟನ್ನು ಪರಿಹರಿಸಲು ಅಂತಾ ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ತನ್ನ ನಿರ್ದೇಶಕರ ಮಂಡಳಿಯ ಸಭೆಯನ್ನು ಕರೆದಿದೆ. ಶುಕ್ರವಾರ (ನ 29) ಆನ್‌ಲೈನ್‌ನಲ್ಲಿ ನಡೆಯಲಿರುವ ಸಭೆಯು ಎಲ್ಲಾ ಸದಸ್ಯ ಮಂಡಳಿಗಳಿಗೆ ಬದ್ಧವಾಗಿರುವ ನಿರ್ಣಾಯಕ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.

Advertisement

ಫೆಬ್ರವರಿ 19-ಮಾರ್ಚ್ 9, 15 ಪಂದ್ಯಗಳಿಗೆ ಹೈಬ್ರಿಡ್ ಮಾದರಿಯು ಸ್ವೀಕಾರಾರ್ಹವಲ್ಲ ಎಂದು ಪಾಕಿಸ್ಥಾನ ಕ್ರಿಕೆಟ್ ಮಂಡಳಿ (PCB) ಸ್ಥಿರವಾಗಿ ಸಮರ್ಥಿಸಿಕೊಂಡಿದ್ದರೂ, ಐಸಿಸಿ ಸೀಮಿತ ಪರ್ಯಾಯಗಳನ್ನು ನಿರ್ಧರಿಸಬಹುದು ಎಂದು ತೋರುತ್ತಿದೆ.

ಹೈಬ್ರಿಡ್ ಮಾದರಿಯಲ್ಲಿ ಪಾಕಿಸ್ಥಾನದಲ್ಲಿ 10 ಪಂದ್ಯಗಳು ಮತ್ತು ಇನ್ನೊಂದು ದೇಶದಲ್ಲಿ ಒಂದು ಸೆಮಿಫೈನಲ್ ಮತ್ತು ಫೈನಲ್ ಸೇರಿದಂತೆ ಐದು ಪಂದ್ಯಗಳನ್ನು ನಡೆಸುವ ಕುರಿತು ಮಹತವಾದ ಚರ್ಚೆಯ ಸಮಯದಲ್ಲಿ ಪ್ರಸ್ತಾಪಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಸಂಭಾವ್ಯ ರಾಜಿಯಾಗಿ, ಐಸಿಸಿ ಹೈಬ್ರಿಡ್ ಮಾದರಿಯ ಪರಿಣಾಮವನ್ನು ಕಡಿಮೆ ಮಾಡಲು ಪ್ರಯತ್ನಿಸಬಹುದು ಮತ್ತು ಕೊನೆಯ ನಾಲ್ಕು ಅಥವಾ ಕೊನೆಯ ಎರಡು ಹಂತಗಳಿಗೆ ಅರ್ಹತೆ ಪಡೆಯಲು ಭಾರತ ವಿಫಲವಾದ ಅಸಂಭವ ಸನ್ನಿವೇಶದಲ್ಲಿ ಒಂದು ಸೆಮಿಫೈನಲ್ ಮತ್ತು ಫೈನಲ್ ಅನ್ನು ಪಾಕಿಸ್ಥಾನದಲ್ಲಿಯೇ ಆಯೋಜಿಸಲು ಒಪ್ಪಿಕೊಳ್ಳಬಹುದು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next