Advertisement

ಸಂತ ಸೇವಾಲಾಲ್‌ ಜಯಂತಿ

12:53 PM Feb 17, 2018 | |

ಪುತ್ತೂರು: ಸಮಾನತೆಯ ಬದುಕಿಗೆ ಹೆಚ್ಚು ಮಹತ್ವ ಕೊಟ್ಟು, ತನ್ನ ಬಂಜಾರ ಸಮುದಾಯದ ಉನ್ನತಿಗಾಗಿ ಹೋರಾಡಿದ
ಮಹಾನ್‌ ಸಂತ ಸೇವಾಲಾಲರು ಎಂದು ಪುತ್ತೂರು ಸಹಾಯಕ ಕಮಿಷನರ್‌ ಎಚ್‌. ಕೆ. ಕೃಷ್ಣಮೂರ್ತಿ ಹೇಳಿದರು.

Advertisement

ಅವರು ಶುಕ್ರವಾರ ತಾ| ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ವತಿಯಿಂದ ಪುತ್ತೂರು ತಾ| ಕಚೇರಿ ಸಭಾಂಗಣದಲ್ಲಿ ನಡೆದ ಸಂತ ಸೇವಾಲಾಲ್‌ ಜಯಂತಿಯಲ್ಲಿ ಸಂಸ್ಮರಣ ಜ್ಯೋತಿ ಪ್ರಜ್ವಲಿಸಿ ಮಾತನಾಡಿದರು.

ಒಡೆದು ಹೋಗಿದ್ದ ತನ್ನ ಸಮುದಾಯವನ್ನು ಒಗ್ಗೂಡಿಸಲು ಸ್ವಾರ್ಥರಹಿತ ಹೋರಾಟದ ಮೂಲಕ ಮೇಲೆತ್ತುವ ಕೆಲಸ ಮಾಡಿ ತನ್ನ ಜೀವನವನ್ನೇ ಸಮುದಾಯಕ್ಕಾಗಿ ಮುಡಿ ಪಾಗಿಟ್ಟವರು ಸಂತ ಸೇವಾಲಾಲ್‌. ಭಾರತ ದಾರ್ಶನಿಕರ, ಚಿಂತಕರ, ತತ್ತ್ವಜ್ಞಾನಿಗಳ ದೇಶ. ತನ್ನ ಸಮಾಜ ಅಧೋಗತಿಯಲ್ಲಿರುವಾಗ ಅದರ ಏಳಿಗೆಗೆ ಪ್ರತಿಯೊಂದು ಸಮುದಾಯದಲ್ಲೂ ಮಹಾಪುರುಷರು ಜನ್ಮ ತಾಳಿದ
ಅದೆಷ್ಟೋ ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಸೇವಾಲಾಲ್‌ ಕೂಡ ತನ್ನ ಸಮಾಜವನ್ನು ದಾರ್ಶನಿಕರಾಗಿ, ಸಂತರಾಗಿ, ಚಿಂತಕರಾಗಿ ಒಗ್ಗೂಡಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ತೊಡಕುಗಳ ನಿವಾರಣೆ
ಸಂಸ್ಮರಣ ಉಪನ್ಯಾಸ ಮಾಡಿದ ಕೊಂಬೆಟ್ಟು ಸರಕಾರಿ ಪ. ಪೂ. ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಚಂದು ನಾಯ್ಕ
ಮಾತನಾಡಿ, ಬಂಜಾರ ಸಮುದಾಯಕ್ಕೆ ಹಲವಾರು ವರ್ಷಗಳ ಇತಿಹಾಸವಿದೆ. ಹರಪ್ಪ ನಾಗರಿಕತೆಯನ್ನೇ ಹೋಲುವ ನಾಗರಿಕತೆ ಬಂಜಾರ ಸಮುದಾಯದ್ದು. ಸೇವಾಲಾಲರು ಭಜನೆಯ ಮೂಲಕ ಸಮಾಜದಲ್ಲಿದ್ದ ತೊಡಕುಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಭೇಟಿ ನೀಡಿದ ಪ್ರದೇಶಗಳು ಇಂದಿಗೂ ಪ್ರಸಿದ್ಧಿ ಪಡೆದಿವೆ. ಪವಾಡ ಪುರುಷರಾಗಿ, ಮಾರ್ಗದರ್ಶಕರಾಗಿ, ಚಿಂತಕರಾಗಿ, ಗುರುವಾಗಿ ಸಮಾಜದ ಏಳಿಗೆಗೆ ಶ್ರಮಿಸಿದ್ದಾರೆ ಎಂದರು.

ಬಂಜಾರ ಸಮುದಾಯ ಇಂದಿಗೂ ಆರ್ಥಿಕವಾಗಿ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿದ್ದಾರೆ. ನಮ್ಮ ಸಮಾಜ ಮುಂದೆ ಬರಬೇಕಾದರೆ ಎಲ್ಲಾ ರಂಗಗಳಲ್ಲಿಯೂ ಪ್ರಾತಿನಿಧ್ಯ ಸಿಗುವಂತಾಗಬೇಕು. ಆಗ ಮಾತ್ರ ಸಮಾಜ ಬೆಳವಣಿಗೆಯಾಗಲು ಸಾಧ್ಯವಿದೆ. ಈ ಕುರಿತು ಗಂಭೀರ ಚಿಂತನೆ ಮಾಡುವ ಅವಶ್ಯಕತೆ ಇದೆ. ಸಂತ ಸೇವಾಲಾರು 18ನೇ ಶತಮಾನದಲ್ಲಿ ನುಡಿದ ಭವಿಷ್ಯಗಳು ಇಂದು ನಿಜವಾಗುತ್ತಿವೆ ಎಂದು ಅಭಿಪ್ರಾಯಪಟ್ಟರು.

Advertisement

ಅಧ್ಯಕ್ಷತೆ ವಹಿಸಿದ ಪುತ್ತೂರು ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಮಾತನಾಡಿ, ಇಂದಿನ ಯುವಪೀಳಿಗೆ ಸಂತ ಸೇವಾಲಾರ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಅವರ ಜನ್ಮದಿನಾಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದು ಹೇಳಿದರು. ಪುತ್ತೂರು ತಹಶೀಲ್ದಾರ್‌ ಹಾಗೂ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ಅನಂತ ಶಂಕರ್‌ ಸ್ವಾಗತಿಸಿ, ಬಂಜಾರ ಸಮುದಾಯದ ಮುಖಂಡ ಚಂದ್ರು ನಾಯ್ಕ ವಂದಿಸಿದರು. ಉಪತಹಶೀಲ್ದಾರ್‌ ಶ್ರೀಧರ್‌ ಕೋಡಿಜಾಲ್‌ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next