Advertisement
ವೃಷಭ: ಉದ್ಯೋಗಸ್ಥರಿಗೆ ಪದೋನ್ನತಿ ಅಥವಾ ವೇತನ ಏರಿಕೆ ಸಂಭವ. ಎಲೆಕ್ಟ್ರಾನಿಕ್ ಸಾಮಗ್ರಿಗಳ ವ್ಯಾಪಾರಿಗಳಿಗೆ ಲಾಭ. ಉದ್ಯೋಗಪತಿಗಳಿಗೆ ಅಪವಾದ ಹೊರಿಸುವ ಹುನ್ನಾರ. ದೀರ್ಘಾವಧಿ ಹೂಡಿಕೆಗಳ ಬಗ್ಗೆ ಯೋಚನೆ.
Related Articles
Advertisement
ಕನ್ಯಾ: ಎಲ್ಲರ ಆರೋಗ್ಯ ಉತ್ತಮ. ಹಿರಿಯರಿಂದ ವ್ಯವಹಾರಕ್ಕೆ ಸೂಕ್ತವಾದ ಸಲಹೆ ಲಭ್ಯ. ದೂರಪ್ರಯಾಣ ಸಂಭವ. ಉದ್ಯೋಗ ಕ್ಷೇತ್ರದಲ್ಲಿ ಸ್ಥಿರವಾತಾವರಣ. ಸ್ವಂತ ವ್ಯವಹಾರದಲ್ಲಿ ಲಾಭ. ಹತ್ತಿರದ ದೇವತಾ ಸಾನ್ನಿಧ್ಯಕ್ಕೆ ಭೇಟಿಯಿಂದ ಶುಭ.
ತುಲಾ: ಎಲ್ಲ ಸಮಸ್ಯೆಗಳಿಗೂ ಧೈರ್ಯವೇ ಉತ್ತರ. ಉದ್ಯೋಗ ಕ್ಷೇತ್ರದಲ್ಲಿ ಮಾಮೂಲು ಸವಾಲುಗಳು. ಗುರು, ದೇವತಾನುಗ್ರಹದಿಂದ ನಿತ್ಯದ ವ್ಯವಹಾರಗಳಲ್ಲಿ ಜಯ. ಮನೆಯಲ್ಲಿ ದೇವತಾ ಕಾರ್ಯಗಳ ಸಿದ್ಧತೆ.
ವೃಶ್ಚಿಕ: ವರ್ತಮಾನದಲ್ಲಿ ಜೀವಿಸಲು ಕಲಿಯುವುದೇ ಯಶಸ್ಸಿನ ಸೂತ್ರ. ನಿರೀಕ್ಷಿತ ಸಹಾಯ ಸಕಾಲದಲ್ಲಿ ಲಭ್ಯ. ಬಂಧುವರ್ಗದಿಂದ ಶುಭವಾರ್ತೆ. ಉದ್ಯೋಗ ಕ್ಷೇತ್ರದಲ್ಲಿ ಸಮಾಧಾನದ ಸ್ಥಿತಿ.ಸ್ವಂತ ಉದ್ಯಮ ನಡೆಸುವವರಿಗೆ ಮುನ್ನಡೆ.
ಧನು: ಹೆಚ್ಚು, ಕಡಿಮೆ ಇಲ್ಲದ ಮಧ್ಯಮ ಜೀವನ. ಉದ್ಯೋಗ ಕ್ಷೇತ್ರದಲ್ಲಿ ವಿವಿಧ ಅವಕಾಶಗಳು ಲಭ್ಯ. ಸ್ವಂತ ಉದ್ಯಮಿಗಳ ಉತ್ಪನ್ನಗಳಿಗೆ ಉತ್ತಮ ಬೇಡಿಕೆ. ಲೇವಾದೇವಿ ವ್ಯವಹಾರಸ್ಥರಿಗೆ ಮಧ್ಯಮ ಲಾಭ.
ಮಕರ: ಆತ್ಮವಿಮರ್ಶೆಯಿಂದ ಮುಂದಿನ ದಾರಿ ಗೋಚರ. ಉದ್ಯೋಗದಲ್ಲಿ ಜವಾಬ್ದಾರಿ ಕೊಂಚ ಬದಲಾವಣೆ. ಕಳೆದು ಹೋದ ವಸ್ತು ಮರಳಿ ಸಿಗುವ ಸಾಧ್ಯತೆ. ಹೊಸಬರ ಪರಿಚಯದಿಂದ ಲಾಭ. ಸ್ವಂತ ಆರೋಗ್ಯದತ್ತ ಗಮನವಿರಲಿ.
ಕುಂಭ: ಶನಿಯ ಮಹಿಮೆಯಿಂದ ಪರಿಸ್ಥಿತಿಯಲ್ಲಿ ಕೊಂಚ ವ್ಯತ್ಯಾಸ. ಉದ್ಯೋಗದಲ್ಲಿ ಗಳಿಕೆಗೆ ಸರಿಹೊಂದದ ದುಡಿಮೆ. ಕಿವಿಕಚ್ಚುವ ಪ್ರವೃತ್ತಿಯುಳ್ಳವರ ಕುರಿತು ಎಚ್ಚರ. ಸಮಾಜಸೇವೆಗೆ ಮತ್ತಷ್ಟು ಅವಕಾಶಗಳು ಗೋಚರ. ಬಂಧುವರ್ಗದವಿವಾಹ ಸಮಸ್ಯೆ ನಿವಾರಿಸಲು ನೆರವು. ಮೀನ: ದಿನಾರಂಭದಲ್ಲಿ ಕೊಂಚ ಕಿರಿಕಿರಿ ಅನಿಸಿಕೆ. ವೃತ್ತಿಕ್ಷೇತ್ರದಲ್ಲಿ ಸಮಯದ ಸವಾಲು. ಅಧಿಕಾರಿ ವರ್ಗದಿಂದ ಅನುಕೂಲಕರ ಸ್ಪಂದನ. ಕೊಟ್ಟು ಮರೆತಿದ್ದ ಸಾಲ ತಾನಾಗಿ ಮರಳಿ ಆನಂದ. ಹಿರಿಯರ
ಮನಸ್ಸಿಗೆ ಮುದನೀಡುವ ಘಟನೆ.