Advertisement

ಬೆಂಗಳೂರು ಸುರಕ್ಷಿತ ನಗರ: ಸಚಿವ ಆರ್‌.ವಿ. ದೇಶಪಾಂಡೆ

11:20 AM Jan 07, 2017 | Team Udayavani |

ಬೆಂಗಳೂರು: ಹವಾನಿಯಂತ್ರಿತರ ನಗರಿ ಎಂದೇ ಪ್ರಸಿದ್ಧಿ ಪಡೆದಿರುವ ಬೆಂಗಳೂರು ನಗರ ಶಿಕ್ಷಣ, ಆರೋಗ್ಯ, ಐಟಿ-ಬಿಟಿ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದು, ಕಾನೂನು ಸುವ್ಯವಸ್ಥೆಯೂ ಉತ್ತಮವಾಗಿರುವ ಸುರಕ್ಷಿತ ನಗರ ಎಂದು ಹೆಸರು ಪಡೆದಿದೆ ಎಂದು ಬೃಹತ್‌ ಕೈಗಾರಿಕೆ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದ್ದಾರೆ.

Advertisement

ನಗರದಲ್ಲಿ ಶುಕ್ರವಾರ ನಡೆದ ಪೈಂಟ್‌ ಅಸೋಸಿಯೇಷನ್‌ ಆಫ್ ಇಂಡಿಯಾ (ಪಿಐಎ) 28ನೇ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿ ಉದ್ಯಮಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಅಲ್ಲದೇ ದೇಶ-ವಿದೇಶಗಳಿಂದ ಆಗಮಿಸಿದ್ದ ಉದ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ “ಬೆಂಗಳೂರು ನಿಮಗೆ ಹೇಗೆ ಫೀಲ್‌ ಆಗುತ್ತಿದೆ. ಮೊದಲು ಏರ್‌ಪೋರ್ಟ್‌ನಲ್ಲಿ ಇಳಿದಾಗ ಯಾವ ಭಾವನೆ ಬಂತು?’ ಎಂದು ಪ್ರಶ್ನಿಸಿದರು.

ಈ ವೇಳೆ ಎಲ್ಲಾ ಉದ್ಯಮಿಗಳು “ಫೆಂಟಾಸ್ಟಿಕ್‌’ ಎಂದು ಉದ^ರಿಸಿದರು. ಹೌದು ಇಲ್ಲಿನ ಕಾನೂನು ಸುವ್ಯವಸ್ಥೆಯ ಜತೆಗೆ ಹವಾನಿಯಂತ್ರಿತ ವಾತಾವರಣ, ವಿಫ‌ುಲ ಅವಕಾಶಗಳು, ಶಿಕ್ಷಣ, ಐಟಿ-ಬಿಟಿ ಎಲ್ಲದರಲ್ಲೂ ಭಾರತದಲ್ಲೇ ಬೆಂಗಳೂರು ಮುಂಚೂಣಿಯಲ್ಲಿದೆ. ಆದರೆ, ” ಇಲ್ಲಿರುವವರಿಗೆ (ಬೆಂಗಳೂರು) ನ್ಯೂಯಾರ್ಕ್‌ ಚೆನ್ನಾಗಿದೆ ಎನಿಸುತ್ತದೆ. ಆದರೆ ಅಲ್ಲಿರುವವರಿಗೆಲ್ಲಾ ಬೆಂಗಳೂರು ಚೆನ್ನಾಗಿದೆ ಎನಿಸುತ್ತದೆ’ ಇದು ಸಾಮಾನ್ಯ ಎಂದು ಮಾರ್ಮಿಕವಾಗಿ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next