Advertisement

ಸಿಮಿ ಶಿಬಿರ: 18 ಮಂದಿ ದೋಷಿ

06:00 AM May 15, 2018 | Team Udayavani |

ಕೊಚ್ಚಿ: ಕೇರಳದಲ್ಲಿ 2007ರಲ್ಲಿ ನಡೆದ ಸಿಮಿ ಶಸ್ತ್ರಾಸ್ತ್ರ ತರಬೇತಿ ಶಿಬಿರ ಪ್ರಕರಣ ಸಂಬಂಧ ನಿಷೇಧಿತ ಸಿಮಿ ಉಗ್ರ ಸಂಘಟನೆಯ ಸ್ಥಾಪಕ ಸದಸ್ಯ ಸಫ್ದಾರ್‌ ನಗೋರಿ ಸೇರಿದಂತೆ 18 ಮಂದಿಯನ್ನು ದೋಷಿಗಳೆಂದು ಘೋಷಿಸಿ ವಿಶೇಷ ಎನ್‌ಐಎ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ. 

Advertisement

ಕಾನೂನುಬಾಹಿರ ಚಟುವಟಿಕೆ ನಿಯಂ ತ್ರಣ ಕಾಯ್ದೆ, ಸ್ಫೋಟಕ ಕಾಯ್ದೆ, ಕ್ರಿಮಿನಲ್‌ ಸಂಚು ಆರೋಪದ ಅನ್ವಯ ಇವರನ್ನು ದೋಷಿಗಳೆಂದು ಘೋಷಿಸಲಾಗಿದೆ. ಉಳಿದ 17 ಮಂದಿಯನ್ನು ಖುಲಾಸೆಗೊಳಿಸ ಲಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾ |  ಕೌಸರ್‌ ಎಡಪ್ಪಗತ್‌, ಶಿಕ್ಷೆ ಪ್ರಮಾಣ ಮಂಗಳವಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸ ಲಾಗಿತ್ತು. ಉಳಿದವರು ಜೈಲಿನಲ್ಲಿದ್ದು, ವಿಡಿಯೋ ಕಾನೆರನ್ಸ್‌ ಮೂಲಕ ಕಲಾಪ ನಡೆಯಿತು. ಕರ್ನಾಟಕ ಸೇರಿ ವಿವಿಧ ಭಾಗಗ ಳಲ್ಲಿ ಸಿಮಿ ಶಸ್ತ್ರಾಸ್ತ್ರ ತರಬೇತಿ ಆಯೋಜಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next