Advertisement
ಹೀಗಾಗಿ, ತಮ್ಮ ಭಾಗದ ಹುದ್ದೆ ಆಕಾಂಕ್ಷಿ ಗಳಿಗೆ ವಿದ್ಯುತ್ ಕಂಬ ಏರುವ ತರಬೇತಿ ನೀಡಿದರೆ ಅವರಿಗೆ ಅನುಕೂಲವಾದೀತು ಎಂಬ ನೆಲೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದ ರೈ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಹಾಗೂ ಮೆಸ್ಕಾಂ ಪುತ್ತೂರು ಜತೆಗೂಡಿ ವಿನೂತನ ಪ್ರಯತ್ನಕ್ಕೆ ಚಾಲನೆ ನೀಡಿದ್ದು ಅದುವೇ ವಿದ್ಯುತ್ ಕಂಬ ಏರುವ ಉಚಿತ ತರಬೇತಿ.212 ಮಂದಿ ಭಾಗಿ.
Related Articles
ಪವರ್ಮನ್ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ ಮೂರು ಪರೀಕ್ಷೆಗಳಲ್ಲಿ ಅರ್ಹತೆ ಪಡೆಯುವುದು ಈ ಹುದ್ದೆಯ ನೇಮಕಕ್ಕೆ ಕಡ್ಡಾಯವಾದ ಅಂಶ. ಮೂರು ಸ್ಪರ್ಧೆಗಳಲ್ಲಿ ಅರ್ಹತೆ ಹೊಂದಿರುವಂತಹ ಅಭ್ಯರ್ಥಿಗಳನ್ನು ಎಸೆಸೆಲ್ಸಿ ಪರೀಕ್ಷೆಯಲ್ಲಿ ಪಡೆದಿರುವ ಶೇಕಡಾವಾರು ಅಂಕಗಳ ಜೇಷ್ಠತೆ ಆಧಾರದಲ್ಲಿ ಕರ್ನಾಟಕ ಸರಕಾರದ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳನ್ನು ಪಾಲಿಸಿ ಆಯ್ಕೆ ಮಾಡಲಾಗುತ್ತದೆ.
Advertisement
ಏನೇನು ತರಬೇತಿ?ವಿದ್ಯುತ್ ಏರುವುದು ಮೊದಲ ಹಂತ. 8 ಮೀಟರ್ ಎತ್ತರದ ಕಂಬ ಏರುವುದರಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ. ಅನಂತರ 100 ಮೀಟರ್ ಓಟವನ್ನು ನಿಗದಿತ ಸೆಕೆಂಡಿನಲ್ಲಿ ಕ್ರಮಿಸಬೇಕು. ಸ್ಕಿಪ್ಪಿಂಗ್, ಶಾಟ್ಪೂಟ್ ಎಸೆತ, 800 ಮೀ. ಓಟ ಹೀಗೆ ಅರ್ಹತಾ ಸುತ್ತನ್ನು ದಾಟಬೇಕು. ಇದಕ್ಕೆ ಪೂರಕವಾಗಿ ಕೊಂಬೆಟ್ಟು ಮೈದಾನದಲ್ಲಿ ಕಂಬ ಏರುವ ತರಬೇತಿಯ ಜತೆಗೆ ಶಾಟ್ಪುಟ್, ಸ್ಕಿಪ್ಪಿಂಗ್, 100 ಮೀ.ಓಟ ಹಾಗೂ 800 ಮೀ.ಓಟದ ತರಬೇತಿ ಅನ್ನು ನೀಡಲಾಗುತ್ತಿದೆ. ಇಲ್ಲಿ ಮೆಸ್ಕಾಂ ನಿಗದಿಪಡಿಸಿದ ಆಯ್ಕೆಯ ಮಾನದಂಡದೊಳಗೆ ಅರ್ಜಿದಾರ ತನ್ನ ಸಾಮರ್ಥ್ಯ ಋಜುಪಡಿಸುವ ನಿಟ್ಟಿನಲ್ಲಿ ಆದ್ಯತೆ ನೀಡಲಾಗಿದೆ. ಸ್ಥಳೀಯರಿಗೆ ಉದ್ಯೋಗ ನೀಡಲು ಕ್ರಮ
ಈ ಭಾಗದ ಯುವಕರಿಗೆ ಕೆಲಸ ಕೊಡಿಸಬೇಕು ಎನ್ನುವ ನಿಟ್ಟಿನಲ್ಲಿ ಉಚಿತ ತರಬೇತಿಗೆ ಮೆಸ್ಕಾಂನೊಂದಿಗೆ ಟ್ರಸ್ಟ್ ಸಹಕಾರ ನೀಡಿದೆ. ಈಗಾಗಲೇ ಮೆಸ್ಕಾಂನಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು ಪುತ್ತೂರಿನಿಂದಲೂ ನೂರಾರು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಈ ತರಬೇತಿ ಅನುಕೂಲ ನೀಡಲಿದೆ.
-ಅಶೋಕ್ ಕುಮಾರ್ ರೈ ಶಾಸಕರು, ಪುತ್ತೂರು ಆಯ್ಕೆ ಸುತ್ತಿನಲ್ಲಿ ತೇರ್ಗಡೆಗೆ ಸಹಕಾರಿ
ಶಾಸಕರ ಮನವಿ ಮೇರೆಗೆ ತರಬೇತಿ ಹಮ್ಮಿಕೊಳ್ಳಲಾಗಿದೆ. ಸರಿಯಾಗಿ ತರಬೇತಿ ಪಡೆದುಕೊಂಡು ಆಯ್ಕೆ ಸುತ್ತಿನಲ್ಲಿ ತೇರ್ಗಡೆ ಹೊಂದಲು ಇದು ಸಹಕಾರಿಯಾಗಲಿದೆ.
– ಪದ್ಮಾವತಿ, ವ್ಯವಸ್ಥಾಪಕ ನಿರ್ದೇಶಕಿ, ಮೆಸ್ಕಾಂ ಮಂಗಳೂರು.