Advertisement

Wayanad; ಕಾಂಗ್ರೆಸ್‌ ನಾಯಕರ ಭಾವಚಿತ್ರವುಳ್ಳ ಆಹಾರ ಕಿಟ್‌ ಪತ್ತೆ: ಕೇಸು

02:19 AM Nov 10, 2024 | Team Udayavani |

ಹೊಸದಿಲ್ಲಿ: ವಯನಾಡ್‌ನ‌ಲ್ಲಿ ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ವಾದ್ರಾ, ಕರ್ನಾಟಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಭಾವಚಿತ್ರಗಳಿರುವ ಆಹಾರದ ಕಿಟ್‌ಗಳು ಪತ್ತೆಯಾದ ಬೆನ್ನಲ್ಲೇ ಪ್ರಿಯಾಂಕಾ ಹಾಗೂ ರಾಹುಲ್‌ ವಿರುದ್ಧ ಶನಿವಾರ ಕೇಸು ದಾಖಲಾಗಿದೆ.

Advertisement

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌173ರ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಯನಾಡ್‌ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲೆಯಲ್ಲಿ ಪರಿಶೀಲನೆ ನಡೆಸಿದ್ದ ಚುನಾವಣಾಧಿಕಾರಿಗಳ ತಂಡ, ಒಟ್ಟು 30 ಆಹಾರ ಕಿಟ್‌ಗಳನ್ನು ವಶಕ್ಕೆ ಪಡೆದಿತ್ತು. ಈ ಕಿಟ್‌ಗಳನ್ನು ಮತದಾರರಿಗೆ ಹಂಚಲು ತರಲಾಗಿದೆ ಎಂದು ವಿಪಕ್ಷಗಳು ಆರೋಪಿಸಿದ್ದರೆ, ಕಾಂಗ್ರೆಸ್‌, ಇವು ವಯನಾಡ್‌ ಭೂಕುಸಿತದ ಸಂತ್ರಸ್ತರಿಗೆ ಹಂಚಲು ತಂದಿದ್ದ ಕಿಟ್‌ಗಳು ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next