Advertisement

ಮಹಿಳಾ ಕ್ರಿಕೆಟ್‌ ಕೋಚ್‌ ಆಯ್ಕೆ ಸಚಿನ್‌, ಗಂಗೂಲಿಗೆ ಕೆಲಸವೇ ಇಲ್ಲ!

06:15 AM Aug 12, 2018 | Team Udayavani |

ಮುಂಬಯಿ: ಭಾರತ ಮಹಿಳಾ ಕ್ರಿಕೆಟ್‌ ತಂಡಕ್ಕೆ ತರಬೇತುದಾರರ ಆಯ್ಕೆ ಸಂದರ್ಶನ ಶುಕ್ರವಾರ ನಡೆದಿದೆ. ಆದರೆ ಈ ಮಹತ್ವದ ಸಂದರ್ಶನಲ್ಲಿ ಸಚಿನ್‌ ತೆಂಡುಲ್ಕರ್‌, ಸೌರವ್‌ ಗಂಗೂಲಿ, ವಿವಿಎಸ್‌ ಲಕ್ಷ್ಮಣ್‌ ನೇತೃತ್ವದ ಉನ್ನತ ಸಲಹಾ ಸಮಿತಿಗೆ ಯಾವುದೇ ಪಾತ್ರವಿರಲಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಈ ಮೂವರ ಕೆಲಸವೇ ತರಬೇತುದಾರರ ಆಯ್ಕೆ. ಆದರೂ ಮಹಿಳಾ ತರಬೇತುದಾರರ ಆಯ್ಕೆ ವೇಳೆ ಅವರ ಪಾತ್ರ ಶೂನ್ಯ ಎಂದು ಆಂಗ್ಲ ಪತ್ರಿಕಾ ಮೂಲಗಳು ಹೇಳಿವೆ.

Advertisement

2016ರಲ್ಲಿ ಭಾರತದ ಪುರುಷರ ತಂಡದ ತರಬೇತುದಾರ ಅನಿಲ್‌ ಕುಂಬ್ಳೆಯನ್ನು ಇದೇ ಗುಂಪು ಆಯ್ಕೆ ಮಾಡಿತ್ತು. 2017ರಲ್ಲಿ ರವಿಶಾಸ್ತ್ರಿಯನ್ನೂ ಆಯ್ಕೆ ಮಾಡಿದ್ದು ಇವರೇ. ಆದರೆ ಕಳೆದ ವರ್ಷ ತುಷಾರ್‌ ಅರೋಥೆಯನ್ನು ಮಹಿಳಾ ತಂಡಕ್ಕೆ ತರಬೇತುದಾರರನ್ನಾಗಿ ಆಯ್ಕೆ ಮಾಡುವಲ್ಲಾಗಲೀ, ಅವರು ಆ ಸ್ಥಾನದಿಂದ ಹೊರಹೋಗುವಲ್ಲಾಗಲೀ ಈ ಮೂವರಿಗೆ ಯಾವುದೇ ಮಾಹಿತಿಯಿರಲಿಲ್ಲ. ಮಹಿಳಾ ತಂಡದ ಆಯ್ಕೆಯಲ್ಲಿ ಇವರ ಪಾತ್ರವಿಲ್ಲವೇ ಎಂಬ ಪ್ರಶ್ನೆಗೂ ಇದುವರೆಗೆ ಉತ್ತರ ಸಿಕ್ಕಿಲ್ಲ.

ಆದರೆ ಕ್ರಿಕೆಟ್‌ ಅದ್ಭುತ ಜ್ಞಾನ ಹೊಂದಿರುವ ಈ ಮೂವರನ್ನು ಸರಿಯಾಗಿ ಬಳಸಬೇಕಾಗಿರುವುದು ಬಿಸಿಸಿಐ ಕರ್ತವ್ಯ. ಅದರಲ್ಲಿ ಅದು ಎಡವಿದೆ ಎನ್ನಲಾಗಿದೆ. ಅಲ್ಲದೇ ಮೂವರು ಸದ್ಯ ತಮ್ಮ ಸಲಹಾ ಹುದ್ದೆಯಲ್ಲಿ ಸಕ್ರಿಯರಾಗಿಲ್ಲ ಎಂದೂ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next