Advertisement
“ಕೀ (ಕೆ.ಇ.ಇ) ಕ್ರಿಯೇಷನ್ಸ್’ ಬ್ಯಾನರಿನಲ್ಲಿ ವಿ. ಲಕ್ಷ್ಮೀಕಾಂತ್ (ಕಾಲವಿ) ನಿರ್ಮಾಣದಲ್ಲಿ ಮೂಡಿಬಂದಿರುವ “ಪಂಪ’ ಸಿನಿಮಾಕ್ಕೆ ಹಿರಿಯ ನಿರ್ದೇಶಕ ಎಸ್. ಮಹೇಂದರ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಹಂಸಲೇಖ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿದ್ದಾರೆ. ಸದ್ಯ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿರುವ “ಪಂಪ’ ಬಿಡುಗಡೆಯ ಹೊಸ್ತಿಲಿನಲ್ಲಿ ಬಂದು ನಿಂತಿದೆ. ಇತ್ತೀಚೆಗಷ್ಟೇ “ಪಂಪ’ನ ಬಗ್ಗೆ ಒಂದಷ್ಟು ಮಾಹಿತಿ ನೀಡಲು ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ಚಿತ್ರದ ವಿಶೇಷತೆಗಳ ಬಗ್ಗೆ ಒಂದಷ್ಟು ಮಾತನಾಡಿತು.
Related Articles
Advertisement
“ಪಂಪ’ ಸಿನಿಮಾದಲ್ಲಿ ಅಭಿನಯಿಸಿರುವ ನಟ ಕೀರ್ತಿ ಭಾನು, ಸಂಗೀತಾ ಶೃಂಗೇರಿ, ಆದಿತ್ಯ ಶೆಟ್ಟಿ, ರವಿ ಭಟ್, ಕೃಷ್ಣಾ ಭಟ್ ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು. ಇನ್ನುಳಿದಂತೆ ರಾಘವ ನಾಯಕ್, ಅರವಿಂದ್, ಭಾವನಾ ಭಟ್, ರೇಣುಕಾ, ಶ್ರೀನಿವಾಸ್ ಪ್ರಭು, ಪೃಥ್ವಿರಾಜ್, ಮಹಾದೇವ ಹೆಜ್ಜಾಜಿ, ಮುಂತಾದವರು “ಪಂಪ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ರಮೇಶ ಬಾಬು ಛಾಯಾಗ್ರಹಣ, ಮೋಹನ್ ಕಾಮಾಕ್ಷಿ ಸಂಕಲನವಿದೆ.
ಸದ್ಯ ನಿಧಾನವಾಗಿ “ಪಂಪ’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಆಗಸ್ಟ್ ವೇಳೆಗೆ “ಪಂಪ’ನನ್ನು ಥಿಯೇಟರ್‌ಗೆ ತರುವ ಯೋಚನೆಯಲ್ಲಿದೆ