Advertisement

ಎಸ್.ಜೈಶಂಕರ್ ಸೇರಿದಂತೆ 11 ಮಂದಿ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ

05:16 PM Jul 17, 2023 | Team Udayavani |

ಹೊಸದಿಲ್ಲಿ: ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಓ ಬ್ರಿಯಾನ್ ಸೇರಿದಂತೆ 11 ನಾಯಕರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Advertisement

ಆಡಳಿತಾರೂಢ ಬಿಜೆಪಿ ಒಂದು ಸ್ಥಾನವನ್ನು ಗಳಿಸಲಿದ್ದು, ಕೇಂದ್ರ ಸರ್ಕಾರಕ್ಕೆ ಬಹುಮತವಿಲ್ಲದ ರಾಜ್ಯಸಭೆಯಲ್ಲಿ 93 ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲಿದೆ.

ಪಶ್ಚಿಮ ಬಂಗಾಳದ ಆರು, ಗುಜರಾತ್‌ನಲ್ಲಿ ಮೂರು ಮತ್ತು ಗೋವಾದಲ್ಲಿ ಒಂದು ಸ್ಥಾನಗಳಲ್ಲಿ ಎದುರಾಳಿ ಅಭ್ಯರ್ಥಿಗಳಿಲ್ಲ. ಹೀಗಾಗಿ ಇಲ್ಲಿ ನಿಗದಿಯಂತೆ ಜುಲೈ 24 ರಂದು ಮತದಾನ ನಡೆಯುವುದಿಲ್ಲ. ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿತ್ತು.

ಇದನ್ನೂ ಓದಿ:ಯಲಗೂರೇಶ್ವರ ದೇವರ ಹುಂಡಿಯಲ್ಲಿ ನೇಪಾಳಿ ನೋಟು, ಪಿಎಸ್‍ಐ, ಕ್ಲರ್ಕ್ ಹುದ್ದೆ ನೇಮಕಕ್ಕೆ ಹರಕೆ!

ಆರು ತೃಣಮೂಲ ಕಾಂಗ್ರೆಸ್ ಮತ್ತು ಐದು ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಪಶ್ಚಿಮ ಬಂಗಾಳದ ಒಂದು ರಾಜ್ಯ ಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ತೃಣಮೂಲ ಕೂಡ ಗೆದ್ದಿದೆ.

Advertisement

ಎಸ್ ಜೈಶಂಕರ್ ಮೇಲ್ಮನೆಯಲ್ಲಿ ಎರಡನೇ ಬಾರಿಗೆ ಗೆದ್ದಿದ್ದಾರೆ. ಬಾಬುಭಾಯಿ ದೇಸಾಯಿ ಮತ್ತು ಕೇಸರಿದೇವ್ ಸಿಂಗ್ ಝಾಲಾ ಅವರು ಗುಜರಾತ್‌ ನಿಂದ ಬಿಜೆಪಿ ಅಭ್ಯರ್ಥಿಗಳು, ಅನಂತ್ ಮಹಾರಾಜ್ ಪಶ್ಚಿಮ ಬಂಗಾಳದಿಂದ ಮತ್ತು ಸದಾನಂದ್ ಶೇಟ್ ತನವಡೆ ಗೋವಾದಿಂದ ಆಯ್ಕೆಯಾಗಿದ್ದಾರೆ.

ಡೆರೆಕ್ ಒ’ಬ್ರೇನ್ ಜೊತೆಗೆ, ಅವಿರೋಧವಾಗಿ ಆಯ್ಕೆಯಾದ ಇತರ ತೃಣಮೂಲ ಕಾಂಗ್ರೆಸ್ ನಾಯಕರೆಂದರೆ ಸುಖೇಂದು ಶೇಖರ್ ರಾಯ್, ಡೋಲಾ ಸೇನ್, ಸಾಕೇತ್ ಗೋಖಲೆ, ಸಮೀರುಲ್ ಇಸ್ಲಾಂ ಮತ್ತು ಪ್ರಕಾಶ್ ಬಾರಿಕ್.

ರಾಜ್ಯಸಭೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನವನ್ನು ಕಳೆದುಕೊಂಡು 30 ಸದಸ್ಯರಿಗೆ ಇಳಿಯಲಿದೆ

Advertisement

Udayavani is now on Telegram. Click here to join our channel and stay updated with the latest news.

Next