Advertisement

ಲಂಕಾ ಸರಣಿಯಿಂದ ಹೊರಬಿದ್ದ ಋತುರಾಜ್ ಗಾಯಕ್ವಾಡ್: ಬದಲಿ ಆಟಗಾರನ ನೇಮಿಸಿದ ಬಿಸಿಸಿಐ

11:01 AM Feb 26, 2022 | Team Udayavani |

ಧರ್ಮಶಾಲಾ: ಶ್ರೀಲಂಕಾ ವಿರುದ್ಧದ ಟಿ20ಐ ಸರಣಿಯ ಉಳಿದೆರಡು ಪಂದ್ಯಗಳಿಂದ ಭಾರತದ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಹೊರ ಬಿದ್ದಿದ್ದಾರೆ. ಲಕ್ನೋದಲ್ಲಿ ನಡೆದ ಮೊದಲ ಟಿ20 ಪಂದ್ಯದ ದಿನದಂದು ಅವರು ಬಲಗೈಯಲ್ಲಿ ಮಣಿಕಟ್ಟಿನ ನೋವಿನಿಂದ ಬಳಲುತ್ತಿದ್ದರು.

Advertisement

ಋತುರಾಜ್ ಗಾಯಕ್ವಾಡ್ ತಮ್ಮ ಬಲಗೈ ಮಣಿಕಟ್ಟಿನ ನೋವಿಗೆ ಒಳಗಾಗಿದ್ದಾರೆ. ಈ ನೋವು ಅವರ ಬ್ಯಾಟಿಂಗ್ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಅವರು ಮೊದಲ ಟಿ20ಐ ಆಯ್ಕೆಗೆ ಅಲಭ್ಯರಾಗಿದ್ದರು. ಬಿಸಿಸಿಐ ವೈದ್ಯಕೀಯ ತಂಡ ಅವರನ್ನು ಪರೀಕ್ಷಿಸುತ್ತಿದೆ ಎಂದು ಭಾರತ ತಂಡದ ವಕ್ತಾರರು ಗುರುವಾರ ತಿಳಿಸಿದ್ದಾರೆ.

ಶನಿವಾರ, ಭಾನುವಾರ ನಡೆಯಲಿರುವ ಕೊನೆಯ ಎರಡು ಟಿ20ಐಗಳಿಗೆ ಋತುರಾಜ್ ಅಲಭ್ಯರಾಗಿರುವುದು ಇದೀಗ ದೃಢಪಟ್ಟಿದೆ. ಅವರ ಬದಲಿಗೆ, ಕರ್ನಾಟಕದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಅವರನ್ನು ಬದಲಿಯಾಗಿ ಕರೆಯಲಾಗಿದೆ ಎಂದು ಬಿಸಿಸಿಐ ತಿಳಿಸಿವೆ.

ಇದನ್ನೂ ಓದಿ:ಧರ್ಮಶಾಲಾದಲ್ಲಿ ಇಂದು, ನಾಳೆ ಟಿ20 ಪಂದ್ಯ ; ಮಳೆ ಭೀತಿಯಲ್ಲಿ ಭಾರತ-ಲಂಕಾ ಸರಣಿ

ಅಗರ್ವಾಲ್ ಅವರನ್ನು ಬಬಲ್ ಒಳಗೆ ಕಳುಹಿಸಲು ಕಷ್ಟವಾಗಲಿಲ್ಲ, ಯಾಕೆಂದರೆ ಬಬಲ್-ಟು-ಬಬಲ್ ವರ್ಗಾವಣೆಯಾಗಿತ್ತು. ಅವರು ಚಂಡೀಗಢದಲ್ಲಿದ್ದರು, ತಕ್ಷಣವೇ ಅವರು ತಂಡ ಕೂಡಿಕೊಂಡರು ಎಂದು ಕ್ರಿಕ್ ಬಜ್ ವರದಿ ಮಾಡಿದೆ.

Advertisement

ಋತುರಾಜ್ ಅವರ ಗಾಯದಿಂದ ಟೀಂ ಇಂಡಿಯಾದ ಗಾಯಾಳುಗಳ ಪಟ್ಟಿ ದೊಡ್ಡದಾಗಿದೆ. ಸೂರ್ಯಕುಮಾರ್ ಯಾದವ್, ದೀಪಕ್ ಚಹಾರ್ ಮತ್ತು ಕೆಎಲ್ ರಾಹುಲ್ ಸರಣಿಗೆ ಮುಂಚಿತವಾಗಿ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದರು.

ತಂಡ: ರೋಹಿತ್ ಶರ್ಮಾ (ನಾಯಕ), ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಮೊಹಮ್ಮದ್. ಸಿರಾಜ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಅವೇಶ್ ಖಾನ್ ಮತ್ತು ಮಯಾಂಕ್ ಅಗರ್ವಾಲ್.

Advertisement

Udayavani is now on Telegram. Click here to join our channel and stay updated with the latest news.

Next