Advertisement
ಅನಿವಾರ್ಯತೆ: ತಾಲೂಕಿನಾದ್ಯಂತ ಕುಡಿಯುವನೀರಿನ ಸಮಸ್ಯೆ ತೀವ್ರಗೊಂಡಿದ್ದು ಜನ ಜಾನುವಾರುಗಳಿಗೂ ನೀರಿಲ್ಲದ ಪರಿಸ್ಥಿತಿಯಿದೆ. ಸ್ಥಳೀಯಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳುಸಮರ್ಪಕ ನೀರು ಪೂರೈಕೆಗೆ ಯುಧ್ದೋಪಾದಿಯಲ್ಲಿಕ್ರಮವಹಿಸಬೇಕಾದ ಅನಿವಾರ್ಯತೆ ಬಂದೊದಗಿದೆ.
Related Articles
Advertisement
ಕಂಗಾಲು: ತಾಲೂಕಿನಾದ್ಯಂತ ಈ ಹಿಂದೆ ಕುಡಿವನೀರಿಗಾಗಿ ಕೊರೆಸಿದ್ದ ಕೊಳವೆ ಬಾವಿಗಳು ಅಂತರ್ಜಲ ಕೊರತೆಯಿಂದಾಗಿ ಬರಿದಾಗಿದ್ದು ತೇವಾಂಶವೂಇಲ್ಲದಷ್ಟು ನೀರಿನ ಭವಣೆ ದುಪ್ಪಟ್ಟಾಗಿದೆ.ಅಧಿಕಾರಿಗಳು ಅಗತ್ಯವಿರುವ ಕಡೆ ಕೊಳವೆ ಬಾವಿಕೊರೆಸಿ ಕ್ರಮವಹಿಸಿದ್ದರೂ ಕೆಲ ಗ್ರಾಮಗಳಲ್ಲಿ 700ರಿಂದ 800 ಅಡಿವರೆಗೆ ಕೊರೆಸಿದರೂ ನೀರು ಬಾರದಹಿನ್ನೆಲೆ ಸ್ಥಳೀಯರು ಕಂಗಾಲಾಗಿದ್ದಾರೆ.
ಅಂತರ್ಜಲ ವೃದ್ಧಿಗೆ ಮುಂದಾಗಿ: ದೇಶಹಳ್ಳಿ ಕೆರೆಯಿಂದ ಪ್ರತಿ ಮನೆಗಳಿಗೆ ನೀರು ಪೂರೈಕೆ ಮಾಡುವ ಸದುದ್ದೇಶದಿಂದ ಶಾಸಕ ಡಿ.ಸಿ. ತಮ್ಮಣ್ಣ 45 ಕೋಟಿ ರೂ.ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋ ಜನೆ ಕೈಗೊಂಡಿದ್ದು ಹಾಗೂ ಬನ್ನಹಳ್ಳಿ ಏತ ನೀರಾವರಿ ಪುನಶ್ಚೇತನಗೊಳಿಸಿ ನೂರಾರು ಗ್ರಾಮಗಳಿಗೆ ನೀರುಪೂರೈಕೆ ಮಾಡಲು ಅಗತ್ಯ ಯೋಜನೆ ರೂಪಿಸಿದ್ದಾರೆ. ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷರಾಗಿರುವ ಶಾಸಕಡಿ.ಸಿ.ತಮ್ಮಣ್ಣ ಆತಗೂರು ಹೋಬಳಿ ವ್ಯಾಪ್ತಿಯಲ್ಲಿ ಕುಡಿವ ನೀರಿನ ಸಮಸ್ಯೆ ನೀಗಿಸಲು ಈಗಾಗಲೇ ಕೋಟ್ಯಂತರ ರೂ. ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಿ ಸುವ ಕಾರ್ಯಕ್ಕೆ ಮುಂದಾ ಗಿದ್ದಾರೆ. ಜತೆಗೆ ಕೊಳವೆ ಬಾವಿಗಳ ಅಂತರ್ಜಲವೃದ್ಧಿಗೆ ಮುಂದಾಗಿರುವುದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.
ತಾಲೂಕುಮಟ್ಟದ ಅಧಿಕಾರಿಗಳ ಸಭೆ ನಡೆಸಿ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮ ಅನುಸರಿಸಿ ಸಿದ್ಧತೆಕೈಗೊಂಡು ನೀರಿನ ಬವಣೆ ನೀಗಿಸಿ ಅಗತ್ಯವಿರುವೆಡೆ ಕೊಳವೆ ಬಾವಿ ಕೊರೆಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಾಗಮಂಗಲ ವಿಧಾನಸಭಾ ಕ್ಷೇತ್ರದ ಕೊಪ್ಪ ಜಿಪಂ ವ್ಯಾಪ್ತಿಯ ಗ್ರಾಮಗಳಿಗೆ ಸಮ ರ್ಪಕವಾಗಿ ನೀರು ಪೂರೈಕೆ ಮಾಡುವ ಹಿನ್ನೆಲೆಯಲ್ಲಿ 45 ಕೋಟಿ ರೂ.ವೆಚ್ಚದಲ್ಲಿ ಕೊಪ್ಪ ಕೆರೆಯಿಂದ ಪ್ರತಿ ಮನೆಗಳಿಗೆ ಶುದ್ಧಕುಡಿಯುವ ನೀರು ಪೂರೈಕೆ ಮಾಡುವ ಕಾಮಗಾರಿಪ್ರಗತಿ ಹಂತದಲ್ಲಿದ್ದು ಯೋಜನೆಯಿಂದಾಗಿ ಸ್ಥಳೀಯ ನಿವಾಸಿಗಳ ಬಹುದಿನದ ಕನಸು ಈಡೇರಲಿದೆ.
ಎಂಟು ಗ್ರಾಪಂನಲ್ಲಿ ಅಂತರ್ಜಲ ಕುಸಿತ :
ಖಾಸಗಿ ವ್ಯಕ್ತಿಗಳ ಪಂಪ್‌ಸೆಟ್ ಮೂಲಕ ಸ್ಥಳೀಯ ನಿವಾಸಿಗಳು ನೀರು ತರುವಪರಿಸ್ಥಿತಿಯಿದ್ದು ಸಮರ್ಪಕವಾಗಿ ವಿದ್ಯುತ್ ಪೂರೈಕೆ ಹಾಗೂ ಹಲವು ಗ್ರಾಮಗಳಲ್ಲಿ ಕೆಟ್ಟುನಿಂತ ಟ್ರಾನ್ಸ್‌ಫಾರ್ಮರ್‌ಗಳಿಂದ ನೀರಿಗೆ ತೊಂದರೆ ಉಂಟಾಗಿದೆ. ಪ್ರತಿನಿತ್ಯ ಸ್ಥಳೀಯ ನಿವಾಸಿಗಳು ದಿನನಿತ್ಯದಕಾರ್ಯಚಟುವಟಿಕೆಗಳನ್ನು ಬದಿಗೊತ್ತಿ ನೀರಿಗಾಗಿ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.ತಾಲೂಕಿನ 42 ಗ್ರಾಪಂ ವ್ಯಾಪ್ತಿಯ 8 ಗ್ರಾಪಂಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು ನೀರಿನ ಹಾಹಾಕಾರಉಂಟಾಗಿದೆ. ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಅಂತರ್ಜಲ ವೃದ್ಧಿಗೆ ಹತ್ತು ಹಲವು ಕಾರ್ಯ ಕೈಗೊಂಡಿದ್ದರೂ ಸಮಸ್ಯೆ ನೀಗಿಸದಿರುವುದು ವಿಪರ್ಯಾಸ.
ಕುಡಿಯುವ ನೀರಿನಸಮಸ್ಯೆ ನೀಗಿಸಲುಜಿಲ್ಲಾಧಿಕಾರಿಗಳಅಧ್ಯಕ್ಷತೆಯಲ್ಲಿಅಧಿಕಾರಿಗಳ ಸಭೆನಡೆಸಲಾಗಿದೆ. ಕೆಲಗ್ರಾಮಗಳಲ್ಲಿ ಖಾಸಗಿ ವ್ಯಕ್ತಿಗಳ ಬೋರ್‌ವೆಲ್,ಅಗತ್ಯವಿರುವೆಡೆ ಟ್ಯಾಂಕರ್ ಮೂಲಕ ನೀರುಪೂರೈಕೆ ಹಾಗೂ ಕೊಳವೆ ಬಾವಿಗಳಪುನಶ್ಚೇತನಕ್ಕೆ ಹೆಚ್ಚಿನ ಒತ್ತು ನೀಡುವಂತೆ ಪಿಡಿಒಗಳಿಗೆ ಸೂಚಿಸಲಾಗಿದೆ. ● ಎಚ್.ಬಿ.ವಿಜಯಕುಮಾರ್, ತಹಶೀಲ್ದಾರ್, ಮದ್ದೂರು
ಆತಗೂರುಹೋಬಳಿ ಹಾಗೂಕೊಕ್ಕರೆ ಬೆಳ್ಳೂರು ಗ್ರಾಪಂವ್ಯಾಪ್ತಿಯಲ್ಲಿ ಕುಡಿಯುವನೀರಿನ ಸಮಸ್ಯೆ ತಲೆದೋರಿದೆ. ಸರ್ಕಾರ,ಜಿಲ್ಲಾ ಹಾಗೂ ತಾಲೂಕು ಆಡಳಿತ ಹೆಚ್ಚಿನಅನುದಾನ ಬಿಡುಗಡೆಗೊಳಿಸಿ ಪ್ರತಿಗ್ರಾಮಗಳಿಗೂ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ● ವಿ.ಎಸ್.ಪ್ರಭು, ವೈದ್ಯನಾಥಪುರ
–ಎಸ್.ಪುಟ್ಟಸ್ವಾಮಿ