Advertisement

Rural India: ಹಳ್ಳಿಗಳ ಪ್ರಗತಿಯಿಂದಲಷ್ಟೇ ವಿಕಸಿತ ಭಾರತ ಸಾಕಾರ

01:46 AM Aug 23, 2024 | Team Udayavani |

ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರಕಾರವು ದೇಶದ ಅಭಿವೃದ್ಧಿಯ ಕಡೆಗೆ ಬಹಳಷ್ಟು ಗಮನಹರಿಸಿ ಈಗ ತನ್ನ ಮೂರನೇ ಅವಧಿಯಲ್ಲಿ ಮತ್ತಷ್ಟು ಉತ್ಸಾಹ ದಿಂದ ಕಾರ್ಯವೆಸಗತೊಡಗಿದೆ. ಈ ಪಯಣದಲ್ಲಿ ನಗರ ಪ್ರದೇಶಗಳು ಸಾಕಷ್ಟು ಬೆಳೆದಿದ್ದರೂ ಹಳ್ಳಿಗಳ ಅಭಿ ವೃದ್ಧಿಯ ಕಡೆಗೆ ಇನ್ನೂ ಹೆಚ್ಚಿನ ಗಮನ ಅತ್ಯಗತ್ಯ.

Advertisement

“ಭಾರತದ ಭವಿಷ್ಯವು ಅದರ ಹಳ್ಳಿಗಳಲ್ಲಿದೆ’ ಎಂದು ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ಒಂದು ಶತ ಮಾನದ ಹಿಂದೆಯೇ ಅಭಿಪ್ರಾಯಪಟ್ಟಿದ್ದರು. ಎರಡು ವರ್ಷಗಳ ಹಿಂದೆಯಷ್ಟೇ ಸ್ವಾತಂತ್ರ್ಯದ ಅಮೃತ ಮಹೋತ್ಸ ವವನ್ನು ಆಚರಿಸಿರುವ, ಈಗಷ್ಟೆ ವಿಶ್ವದ ಐದನೇ ಅತೀ ದೊಡ್ಡ ಆರ್ಥಿಕತೆಯ ಸ್ಥಾನಕ್ಕೆ ಏರಿರುವ, ಭಾರತದಲ್ಲಿ ಹಳ್ಳಿಗಳನ್ನು ಅಭಿವೃದ್ಧಿ ಮಾಡಲು ವಿಪುಲ ಅವಕಾಶಗಳಿವೆ. ಸ್ವಾತಂತ್ರ್ಯತ್ತರದಲ್ಲಿ ಪೇಟೆ ಪಟ್ಟಣಗಳು ನಗರಗಳಾಗಿ, ನಗರಗಳು ಮಹಾನಗರಗಳಾಗಿ, ಮಹಾನಗರಗಳು ಬೃಹತ್‌ ಮಹಾನಗರಗಳಾಗಿ ಮಹತ್ತರವಾಗಿ ಬೆಳೆಯುತ್ತಾ ಆರ್ಥಿಕತೆಗೆ ಸಕಲ ಕೊಡುಗೆಯನ್ನು ನೀಡುತ್ತಾ ಬಂದಿವೆ.

ಈ ಪ್ರಕ್ರಿಯೆಯಲ್ಲಿ ವಿವಿಧ ಕೈಗಾರಿಕೆಗಳು ಮತ್ತು ಸೇವಾ ವಲಯಗಳು ವಿಶಾಲವಾಗಿ ಬೆಳೆದಿವೆ. ಆದರೆ ಇಂತಹ ಬೆಳವಣಿಗೆಗಳಿಂದಾಗಿ ಹೊಂಡಗಳಿಲ್ಲದ ರಸ್ತೆಗಳು, ನಿರಂ ತರ ವಿದ್ಯುತ್‌ ಪೂರೈಕೆ ಮುಂತಾದ ಮೂಲ ಸೌಕರ್ಯ ಗಳು, ಉದ್ಯೋಗಾವಕಾಶಗಳು, ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಸೌಲಭ್ಯಗಳು, ಮನೋರಂಜನ ಕೇಂದ್ರಗಳು, ಮುಂತಾದುವೆಲ್ಲವೂ ನಗರ ಕೇಂದ್ರಿತವಾಗಿವೆ.

ಆದರೆ ಗ್ರಾಮೀಣ ಜನತೆಯ ಪಾಲಿಗೆ ಇವೆಲ್ಲವೂ ಇಂದಿಗೂ ಗಗನಕುಸುಮಗಳಾಗಿಯೇ ಉಳಿದಿವೆ. ಹೀಗಾ ಗಿಯೇ ಗ್ರಾಮೀಣ ಪ್ರದೇಶಗಳ ಮುಖ್ಯ ಬೇಡಿಕೆ ಎಂದರೆ ಹಳ್ಳಿಗಳಲ್ಲಿ ಮೂಲ ಸೌಕರ್ಯದ ಅಭಿವೃದ್ಧಿ ಮತ್ತು ಸ್ಥಳೀಯವಾಗಿಯೇ ಉದ್ಯೋಗಾವಕಾಶಗಳ ಸೃಷ್ಟಿ. ದೇಶದಲ್ಲಿ ಏಕರೂಪದ ಅಭಿವೃದ್ಧಿಗಾಗಿ ಗ್ರಾಮೀಣ ಪ್ರದೇಶಗಳತ್ತ ಇನ್ನಷ್ಟು ಹೆಚ್ಚಿನ ಗಮನ ಕೊಡುವ ಆವಶ್ಯಕತೆಯಿದೆ.

ನಗರಗಳ ಸಮಸ್ಯೆಗಳು: ಪ್ರಸ್ತುತ ಎಲ್ಲ ನಗರ, ಮಹಾ ನಗರಗಳು ತಮ್ಮದೇ ಆದ ಸಮಸ್ಯೆಗಳನ್ನು ಎದುರಿಸುತ್ತಿವೆ. ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆ ಬರು ವವರ ಸಂಖ್ಯೆ ನಿರಂತರ ಹೆಚ್ಚುತ್ತಲೇ ಇರುವುದರಿಂದ ನಗರದಲ್ಲಿ ವಾಸವಿರುವ ಎಲ್ಲರಿಗೂ ಮೂಲಸೌಕರ್ಯದ ಲಭ್ಯತೆಯಲ್ಲಿ ಅಡೆತಡೆಗಳು ಉಂಟಾಗುತ್ತಿವೆ. ನಗರಗಳಲ್ಲಿ ಸಂಚಾರ ದಟ್ಟಣೆ ದಿನೇದಿನೆ ಹೆಚ್ಚುತ್ತಿದೆ. ವಾಸದ ಸ್ಥಳ ದಿಂದ ಕೆಲಸದೆಡೆಗೆ ಸಾಗಲು ದೀರ್ಘ‌ ಸಮಯ ತೆಗೆದು ಕೊಳ್ಳುವುದರಿಂದ ದಿನವೂ ಹಲವು ಮಾನವ ಗಂಟೆಗಳು ವ್ಯರ್ಥಗೊಳ್ಳುತ್ತಿವೆ, ಆರೋಗ್ಯ ಸಂಬಂಧಿತ ಸಮಸ್ಯೆಗಳೂ ತಲೆದೋರುತ್ತಿವೆ.

Advertisement

ನಿರಂತರವಾಗಿ ಏರುತ್ತಿರುವ ವಾಹನ ಗಳ ಸಂಖ್ಯೆಯಿಂದ ವಾಯುಮಾಲಿನ್ಯ ಮತ್ತು ಶಬ್ದ ಮಾಲಿನ್ಯಗಳು ಹೆಚ್ಚುತ್ತಿವೆ. ಸ್ವತ್ಛ ನೀರಿನ ಕೊರತೆ, ಹೆಚ್ಚುತ್ತಿ ರುವ ತ್ಯಾಜ್ಯ, ದುಬಾರಿ ಬಾಡಿಗೆ ಮನೆಗಳು, ಗಗನ ಕುಸುಮವಾಗಿರುವ ಸ್ವಂತ ಸೂರು, ನಿರಂತರವಾಗಿ ಹೆಚ್ಚು ತ್ತಲೇ ಸಾಗಿರುವ ಅಗತ್ಯ ವಸ್ತುಗಳ ಬೆಲೆಏರಿಕೆ, ಉಲ್ಬಣ ಗೊಳ್ಳುತ್ತಿರುವ ವಂಚನೆ ಪ್ರಕರಣಗಳು, ಸೈಬರ್‌ ಕಳ್ಳತನದ ಪಿಡುಗು, ಅತ್ಯಾಚಾರ, ಕೌಟುಂಬಿಕ ಅಸ್ವಸ್ಥತೆಗಳು, ಸಂಬಂಧಗಳಲ್ಲಿನ ಬಿರುಕು, ಮಳೆ ಬಂದಾಗ ಉಂಟಾಗುವ ಕೃತಕ ನೆರೆಗಳು ಹೀಗೆ ಹಲವು ಸಮಸ್ಯೆಗಳು ಕಾಡುತ್ತಿವೆ. ಈ ತೆರನಾದ ಒತ್ತಡಕ್ಕೊಳಗಾದ ಜನಸಂಖ್ಯೆಯು ಯಾವುದೇ ದೇಶಕ್ಕಾದರೂ ಶಾಪವೇ ಸರಿ.

ಸ್ವಾವಲಂಬಿ ಗ್ರಾಮೀಣ ಭಾರತದ ಆವಶ್ಯಕತೆ:
ಹಳ್ಳಿ ಗಳಲ್ಲಿ ಬೆಳೆದ ಬೆಳೆಗಳಿಗೆ ಸೂಕ್ತ ಶೇಖರಣ ವ್ಯವಸ್ಥೆ ಇರದಿ ರುವುದು, ಸರಿಯಾದ ಬೆಲೆ ದೊರಕದಿರುವುದು, ಸಮೀಪದ ಮಾರುಕಟ್ಟೆ ಇಲ್ಲದಿರುವುದು, ಮಧ್ಯ ವರ್ತಿಗಳ ಹಾವಳಿ ಇವೆಲ್ಲ ಗ್ರಾಮೀಣ ಪ್ರದೇಶದ ಜನತೆ ದಿನನಿತ್ಯ ಎದುರಿಸುತ್ತಿರುವ ಸಮಸ್ಯೆಗಳು. ಪ್ರತೀ ತಾಲೂಕು ಕೇಂದ್ರದಲ್ಲಿ ಶೀತಲ ಘಟಕಗಳಲ್ಲಿ ಬೆಳೆಗಳನ್ನು ಶೇಖರಿಸಿಟ್ಟು ಉತ್ತಮ ಬೆಲೆ ಬಂದಾಗ ಮಾರುವ ವ್ಯವಸ್ಥೆ ಜಾರಿಯಾಗಬೇಕಾಗಿದೆ. ಟೊಮೇಟೊ, ಈರುಳ್ಳಿ ಮೊದಲಾದ ತರಕಾರಿಗಳ ಬೆಲೆಗಳಲ್ಲಿ ಆಗಾಗ ಏರಿಳಿತ ಉಂಟಾಗುತ್ತಿರುವುದರಿಂದ ರೈತರೂ, ಗ್ರಾಹಕರೂ ನಿರಂತರ ಬವಣೆಯನ್ನು ಅನುಭವಿಸುವುದನ್ನು ನಾವು ಆಗಾಗ ಗಮನಿಸಿದ್ದೇವೆ.

ಸ್ವತ್ಛ ಕುಡಿಯುವ ನೀರಿನ ವ್ಯವಸ್ಥೆ, ಉತ್ತಮ ಗುಣಮಟ್ಟದ ರಸ್ತೆಗಳು, ಔಷಧದ ಲಭ್ಯತೆ ಇರುವ ಸುಸಜ್ಜಿತ ಆಸ್ಪತ್ರೆಗಳು, ಶಿಕ್ಷಕರಿಂದ ಕೂಡಿದ, ಉತ್ತಮ ಕಟ್ಟಡಗಳಿರುವ ಶಾಲೆಗಳು, ಮಕ್ಕಳಿಗೆ ಆಟದ ಮೈದಾನ, ಮನೋರಂಜನೆಗೆ ರಂಗ ಮಂದಿರಗಳು, ಸಾರ್ವಜನಿಕ ಸಭಾಂಗಣ, ಉದ್ಯಾನವನ ಇವೆಲ್ಲ ಪ್ರತಿಯೊಂದು ಹಳ್ಳಿಯ ಆದ್ಯತೆಯ ಪಟ್ಟಿಯಲ್ಲಿರುವುದು ಸಹಜವೇ. ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿದರೆ, ಶಿಕ್ಷಣ ಪಡೆದ ಬಳಿಕ ಗ್ರಾಮೀಣ ಯುವಕರು ಖಂಡಿತವಾಗಿಯೂ ತಮ್ಮ ಹಳ್ಳಿಗಳಲ್ಲೇ  ಏನಾದರೂ ಉದ್ಯೋಗ ಮಾಡಿಕೊಂಡು ಉಳಿಯುತ್ತಾರೆ. ಅವರಿಗೆ ಬೇಕಾಗಿರುವುದು ಉತ್ತಮ ಗುಣಮಟ್ಟದ ಜೀವನ. ಅದು ಹಳ್ಳಿಗಳಲ್ಲೇ  ದೊರಕಿದರೆ ಅವರು ನಗರಕ್ಕೆ ವಲಸೆ ಹೋಗುವ ಪ್ರಮೇಯ ಬರಲಾರದು.

ಕಾರ್ಪೊರೇಟ್‌ ಪ್ರಪಂಚದ “ಮೇಕ್‌ ಇನ್‌ ಇಂಡಿಯಾ’ ಚಟುವಟಿಕೆಗಳನ್ನು ಗ್ರಾಮೀಣ ಭಾರತಕ್ಕೆ ಸ್ಥಳಾಂತರಿಸಲು ಕಾರ್ಯತಂತ್ರವನ್ನು ರೂಪಿಸಬೇಕಾದ ಅಗತ್ಯತೆ ಇದೆ. ಉತ್ಪಾದನ ಚಟುವಟಿಕೆಯನ್ನು ಸ್ಥಳೀಯ ಗೊಳಿಸಿದರೆ ದೇಶದ ಆಮದು ವೆಚ್ಚದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಉಳಿಸಬಹುದು. ಉಳಿಕೆ ಯಾದ ಅದೇ ಹಣವನ್ನು ಹಳ್ಳಿಯ ಅಭಿವೃದ್ಧಿ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು.

ಸಾಲಗಳ ಸಕಾಲಿಕ ಮರುಪಾವತಿ:
ಗ್ರಾಮೀಣ ಜನ ರಿಗೆ ಬ್ಯಾಂಕ್‌ ಸಾಲಗಳ ಲಭ್ಯತೆಯ ಬಗ್ಗೆ, ಸಕಾಲಿಕ ಮರು ಪಾವತಿಯ ಪ್ರಾಮುಖ್ಯದ ಬಗ್ಗೆ ಮನವರಿಕೆ ಮಾಡಿ ಕೊಡ ಬೇಕು. ಇದರಿಂದಾಗಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇ ಜನ ದೊರಕಿ ಮುಂದೆ ಇನ್ನೂ ಹೆಚ್ಚಿನ ಹಣಕಾಸಿನ ನೆರವು ದೊರಕೀತು. ಚಟುವಟಿಕೆಯಲ್ಲಿರುವ ಸ್ತ್ರೀ ಸಂಘಗಳು, ಸ್ವ ಸಹಾಯ ಗುಂಪುಗಳು, ರೈತರ ಸಭೆಗಳು, ಆಧುನಿಕ ಕೃಷಿ ತಂತ್ರಜ್ಞಾನದ ಮಾಹಿತಿ ಒದಗಿಸುವ ಕೃಷಿ ಇಲಾಖೆ ಇವೆಲ್ಲ ವುಗಳೊಡನೆ ಸ್ಥಳೀಯ ಬ್ಯಾಂಕ್‌ನ ಅಧಿಕಾರಿಗಳು ಆಗಾಗ ಸಭೆ ನಡೆಸಿ ಸೂಕ್ತ ಪರಿಹಾರದ ಕ್ರಮಗಳನ್ನು ಕೈಗೊಳ್ಳುತ್ತಾ ಬಂದರೆ ಇನ್ನಷ್ಟು ಹೆಚ್ಚಿನ ಹಣಕಾಸಿನ ನೆರವು ಹರಿಯಲು ಸಹಕಾರಿಯಾದೀತು. ಹೆಚ್ಚಿನ ಬ್ಯಾಂಕ್‌ ಸಾಲಗಳ ಹರಿ ವಿನಿಂದ ಹಳ್ಳಿಗಳೂ ಅಭಿವೃದ್ಧಿ ಹೊಂದುವ ಸಾಧ್ಯತೆ ಹೆಚ್ಚು.

ಗ್ರಾಮೀಣ ಭಾರತದಲ್ಲಿ ಉಳಿಯಲು ಪ್ರೇರಣೆ:
ಹಳ್ಳಿ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ತಮ ಗುಣಮಟ್ಟದ ಪ್ರೌಢ ಶಾಲೆಗಳು, ಕಾಲೇಜುಗಳು ಮತ್ತು ವೃತ್ತಿಪರ ಸಂಸ್ಥೆಗಳನ್ನು ಸ್ಥಾಪಿಸಬೇಕಾದ ಅಗತ್ಯತೆ ಇದೆ. ಅಲ್ಲದೆ ಹೊಸ ಹೊಸ ಯೋಜನೆಗಳು, ಸಾರ್ವಜನಿಕ ವಲಯದ ಸಂಸ್ಥೆಗಳು, ಬಹುರಾಷ್ಟ್ರೀಯ ಸಂಸ್ಥೆಗಳು ಮುಂತಾದವುಗಳ ಕಚೇರಿ ಗಳು ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಾಗಿ ಬರಬೇಕಾಗಿದೆ.

ಅಂತಹವುಗಳಿಗೆ ಸರಕಾರಕ್ಕೆ ಸಲ್ಲಿಸಬೇಕಾದ ತೆರಿಗೆಯಲ್ಲಿ ರಿಯಾಯಿತಿಯನ್ನು ಘೋಷಿಸಿ ಉತ್ತೇಜಿಸಬಹುದು. ಒಮ್ಮೆ ಗ್ರಾಮೀಣ ಭಾರತದಲ್ಲಿ ಇಂತಹ ಉದ್ಯೋಗಾವಕಾ ಶಗಳು ಲಭ್ಯವಾದರೆ, ಗ್ರಾಮೀಣ ಜನರು ನಗರಗಳಿಗೆ ವಲಸೆ ಹೋಗುವುದು ಸಂಪೂರ್ಣವಾಗಿ ನಿಂತೀತು. ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ವಿವಿಧ ಸಂಸ್ಥೆಗಳ ಸಿಬಂದಿಗೆ ಹೆಚ್ಚುವರಿ ಭತ್ತೆ ನೀಡಿ ಆಕರ್ಷಿಸುವ ಕಡೆಗೂ ಗಮನ ಕೊಡಬಹುದು.

2-3 ವರ್ಷಗಳಲ್ಲಿ ಜಗತ್ತಿನ ಮೂರನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗುವತ್ತ ದಾಪುಗಾಲು ಹಾಕುತ್ತಿರುವ ನಮ್ಮ ದೇಶವು, ಹಳ್ಳಿಗಳ ಅಭಿವೃದ್ಧಿಯನ್ನೂ ಖಾತ್ರಿ ಪಡಿಸಿ ಕೊಂಡರೆ ನಮ್ಮ ಸ್ವಾತಂತ್ರÂದ ಶತಮಾನೋತ್ಸವದ ಸಂದರ್ಭ ದಲ್ಲಿ ಸಮತೋಲಿತ ಪ್ರಗತಿಯುಂಟಾಗಿ ವಿಕಸಿತ ಭಾರತದ ಕನಸು ನನಸಾಗುವುದರಲ್ಲಿ ಸಂಶಯವೇ ಇಲ್ಲ.

– ಬಿ.ಎನ್‌. ಭರತ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next