Advertisement

ಹೃದಯಾಘಾತವಾದ ವ್ಯಕ್ತಿಗೆ ಸಕಾಲದಲ್ಲಿ ಚಿಕಿತ್ಸೆ: ಆಸ್ಪತ್ರೆ ಸಿಬ್ಬಂದಿ ಕಾರ್ಯಕ್ಕೆ ಶ್ಲಾಘನೆ

07:00 PM Dec 08, 2024 | Team Udayavani |

ಪುಂಜಾಲಕಟ್ಟೆ: ಹೃದಯಘಾಕ್ಕೊಳಗಾದ ವ್ಯಕ್ತಿಯೊರ್ವರಿಗೆ ಸಕಾಲದಲ್ಲಿ ಚಿಕಿತ್ಸೆ ಒದಗಿಸಿದ ಕಾರಣದಿಂದ ಅಪಾಯದಿಂದ ಪಾರಾದ ಘಟನೆ ನಡೆದಿದ್ದು, ಚಿಕಿತ್ಸೆ ಒದಗಿಸಿದವರು ಸಾರ್ವಜನಿಕವಾಗಿ ಪ್ರಸಂಸೆಗೆ ಒಳಗಾಗಿದ್ದಾರೆ.

Advertisement

ಮಂಗಳೂರು ಕೆ.ಎಂ.ಸಿ.ಆಸ್ಪತ್ರೆಯ ಸಿಬ್ಬಂದಿ ಮದ್ದಡ್ಕ ನಿವಾಸಿ ಪ್ರದೀಪ್ ನಾಯಕ್ ಅವರು ಸಕಾಲದಲ್ಲಿ ಚಿಕಿತ್ಸೆ ಒದಗಿಸಿದ್ದು ಹೃದಯಘಾತಕ್ಕೊಳಗಾದ ಬೆಳ್ತಂಗಡಿ ತಾಲೂಕಿನ ಅಳಕೆ ನಿವಾಸಿ ಮಿಥುನ್ ಅವರು ಸಾವಿನಿಂದ ಪಾರಾಗಿದ್ದಾರೆ.

ಘಟನೆ: ಮಿಥುನ್ ಅವರು ಲಘು ಹೃದಯಘಾತಕ್ಕೊಳಗಾಗಿದ್ದು,ಅವರ ಇಸಿಜಿ ರಿಪೋರ್ಟ್ ನ್ನು ಅವರ ಸಂಬಂಧಿಕರು ಪ್ರದೀಪ್ ನಾಯಕ್ ಕಳುಹಿಸಿದ್ದರು. ಈ ವರದಿಯನ್ನು ಪ್ರದೀಪ್ ನಾಯಕ್ ಅವರು ಖ್ಯಾತ ಹೃದಯತಜ್ಞ ಡಾ| ಪದ್ಮನಾಭ ಕಾಮತ್ ಅವರಿಗೆ ಕಳುಹಿಸಿದ್ದರು. ವರದಿಯನ್ನು ನೋಡಿ ಕಾಮತ್ ಅವರು ತಕ್ಷಣವೇ ರೋಗಿಯನ್ನು ಮಂಗಳೂರು ಆಸ್ಪತ್ರೆಗೆ ಕರೆತರಲು ಸೂಚಿಸಿದ್ದರು.ಅದರಂತೆ ಉಪ್ಪಿನಂಗಡಿ ಬಳಿಯ ತಣ್ಷೀರುಪಂತ ಅಳಕೆಯಿಂದ ಮಿಥುನ್ ಅವರನ್ನು ಕಾರಿನಲ್ಲಿ ಕರೆದುಕೊಂಡು ಮಂಗಳೂರಿಗೆ ಬರುತ್ತಿದ್ದರು. ಇದೇ ವೇಳೆ ಪ್ರದೀಪ್ ನಾಯಕ್ ಅವರು ತನ್ನ ಮನೆಯಿಂದ ಬಸ್ಸಿನಲ್ಲಿ ಹೊರಟಿದ್ದರು. ಮಿಥುನ್ ಅವರು ಪುಂಜಾಲಕಟ್ಟೆ ಕಳೆದು ಸಾಗುತ್ತಿರುವಾಗ ಅವರಿಗೆ ಎದೆನೋವು ತೀವ್ರವಾಯಿತು. ಈ ವಿಚಾರ ತಿಳಿದ ಪ್ರದೀಪ್ ನಾಯಕ್ ಅವರು ವಗ್ಗ ಬಳಿ ಬಸ್ಸಿನಿಂದ ಇಳಿದು,ಮಿಥುನ್ ಅವರಿಗಾಗಿ ಕಾದಿದ್ದರು.ಅವರ ಬಳಿ  ಹೃದಯಾಘಾತ ವಾದ ಕೂಡಲೇ ಅಗತ್ಯವಾಗಿ ನೀಡಬೇಕಾದ ಔಷಧಿಯನ್ನು ಇರಿಸಿಕೊಂಡಿದ್ದು, ರೋಗಿಗೆ ನೀಡಿದರು. ಇದರಿಂದ ಮಿಥುನ್ ಅವರಿಗೆ ಮತ್ತೆ ಹೃದಯಾಘಾತವಾಗುವುದು ತಪ್ಪಿತು.

ಬಳಿಕ ಅವರು ಅದೇ ಕಾರಿನಲ್ಲಿ ಮಂಗಳೂರಿಗೆ ಸಾಗುತ್ತಿರುವಾಗ ಟ್ರಾಫಿಕ್ ಜಾಮ್ ಇರುವ ಕಾರಣ ಕೆ.ಎಂ.ಸಿ.ಯ ಅಂಬ್ಯುಲೆನ್ಸ್ ವಾಹನಕ್ಕೆ ಕರೆ ಮಾಡಿ ಬರಿಸಿ, ರೋಗಿಯನ್ನು ಶೀಘ್ರವಾಗಿ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದರು.ವಿಶೇಷವೆಂದರೆ ಪ್ರದೀಪ್ ಅವರಿಗೆ ಮಿಥುನ್ ಪರಿಚಯವೇ ಇರಲಿಲ್ಲ. ಆದರೆ ಅವರ ಕಾಳಜಿ ಅಭಿನಂದನೀಯವಾಗಿದೆ.

ಇದೀಗ ಮಿಥುನ್ ಅವರಿಗೆ ಯಶಸ್ವಿಯಾಗಿ  ಶಸ್ತ್ರ ಚಿಕಿತ್ಸೆ ನಡೆದಿದ್ದು, ಆರೋಗ್ಯವಾಗಿದ್ದಾರೆ ಎಂದು ವೈದ್ಯ ಡಾ| ಪದ್ಮನಾಭ ಕಾಮತ್ ತಿಳಿಸಿದ್ದು, ಪ್ರದೀಪ್ ನಾಯಕ್ ಅವರ ಸಕಾಲಿಕ ಕಾರ್ಯವೈಖರಿಗೆ ಶ್ಲಾಘನೆಯನ್ನು ಅವರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next