ಅಡ್ಡಕ್ಕೆ, ಉದ್ದಕ್ಕೆ ಬೇಕೆಂದಲ್ಲಿ ತಿರುಗಿಸಬಲ್ಲ ಬಣ್ಣ ಬಣ್ಣದ ಚೌಕಾಕಾರದ ಈ ಸಾಮಗ್ರಿ ಆಟಿಕೆಯಷ್ಟೇ ಅಲ್ಲ. ಇದು ಬುದ್ಧಿ ಸಾಮರ್ಥ್ಯ ವನ್ನು ಪರೀಕ್ಷಿಸುವ ವಸ್ತು. ಈ ರೂಬಿಕ್ಸ್ ಕ್ಯೂಬ್ ಎನ್ನುವುದು ಬಹಳಷ್ಟು ಮಂದಿಗೆ ಬಿಡಿಸ ಲಾರದ ಒಗಟೂ ಕೂಡಾ ಹೌದು. ಆದರೆ ಈ ಒಗಟನ್ನು ಬಿಡಿಸುವ ಪ್ರಯತ್ನ ಮಾತ್ರ ಬಿಡುವುದಿಲ್ಲ. ಅದು ರೂಬಿಕ್ಸ್ ಕ್ಯೂಬ್‌ನ ತಾಕತ್ತು.
ಒಮ್ಮೆ ಅದರ ಗೀಳು ಹಿಡಿದುಬಿಟ್ಟರೆ ಸುತ್ತಲ ಜಗತ್ತಿನ ಪರಿವೆಯೇ ಇಲ್ಲದೆ ಅದರಲ್ಲಿ ಮುಳುಗುವವರೂ ಇದ್ದಾರೆ. ಆದರೆ ಇಂದಿನ ಮಕ್ಕಳು ಎಷ್ಟು ಮುಂದುವರಿದಿದ್ದಾರೆ ಎಂದರೆ, ಅದನ್ನು ಬಿಡಿಸುವುದು ಅವರಿಗೆ ಕಷ್ಟದ ಮಾತಲ್ಲ. ಎಷ್ಟು ಬೇಗ ಬಿಡಿಸುತ್ತಾರೆ ಎನ್ನುವುದರ ಆಧಾರದ ಮೇಲೆ ರೂಬಿಕ್ಸ್ ಕ್ಯೂಬ್ ಮೇಲೆ ಅವರಿಗಿರುವ ಹಿಡಿತವನ್ನು ಪರೀಕ್ಷಿಸಲಾಗುತ್ತದೆ.
ಅದರದ್ದೇ ಚಾಂಪಿಯನ್‌ಶಿಪ್ ಪಂದ್ಯಕೂಟಗಳು ನಗರದಲ್ಲಿ ಆಗಾಗ್ಗೆ ನಡೆಯುತ್ತಿರುತ್ತವೆ. ಅವುಗಳಲ್ಲೊಂದಾದ ಲ್ಯಾಂಡ್‌ಮಾರ್ಕ್ “ರೂಬಿಕ್ಸ್ ಕ್ಯೂಬ್ ಚಾಂಪಿಯನ್‌ಶಿಪ್’ ಪಂದ್ಯಾವಳಿ ಮತ್ತೆ ಮರಳಿ ಬಂದಿದೆ. ಮೊದಲಿಗೆ ಅರ್ಹತಾ ಸುತ್ತು ನಡೆಯಲಿದ್ದು ನಂತರ ಫೈನಲ್ ಪಂದ್ಯಗಳು ನಡೆಯಲಿವೆ. ವಿಜೇತರಿಗೆ ಚಿನ್ನದ ಪದಕ ಮತ್ತು ಉಡುಗೊರೆಗಳನ್ನು ನೀಡಿ ಸನ್ಮಾನಿಸಲಾಗುತ್ತದೆ.
ಎಲ್ಲಿ?: ಫೋರಂ ಮಾಲ್, ಕೋರಮಂಗಲ, ಒರಾಯನ್ ಮಾಲ್, ರಾಜಾಜಿನಗರ
ಯಾವಾಗ?: ಜೂನ್ 1- 2