Advertisement

RTO ಕಚೇರಿ ಮುಂಭಾಗ ಬಸ್‌ಗಳ ಧಾವಂತದಿಂದ ಸಂಕಷ್ಟ

04:07 PM Aug 24, 2023 | Team Udayavani |

ಮಹಾನಗರ: ನಗರದ ಆರ್‌ಟಿಒ ಕಚೇರಿ ಎದುರು ಬಸ್‌ಗಳ ಧಾವಂತದಿಂದಾಗಿ ಪಾಂಡೇಶ್ವರ ಕಡೆಗೆ ಸಂಚರಿಸುವ ವಾಹನಗಳ ಸವಾರರು, ಚಾಲಕರು ಸಂಕಷ್ಟಕ್ಕೀಡಾಗಿದ್ದಾರೆ. ಕ್ಲಾ

Advertisement

ಕ್‌ಟವರ್‌ ಕಡೆಯಿಂದ ನೇರವಾಗಿ ಪಾಂಡೇಶ್ವರ ಕಡೆಗೆ, ಬಲಕ್ಕೆ ತಿರುಗಿ ಹ್ಯಾಮಿಲ್ಟನ್‌ ಸರ್ಕಲ್‌ ಕಡೆಗೆ ಸಂಚರಿ ಸಬಹುದು. ಇಲ್ಲಿ ಈ ಹಿಂದೆ ಎ.ಬಿ. ಶೆಟ್ಟಿ ವೃತ್ತವಿತ್ತು. ಅದನ್ನು ತೆರವುಗೊಳಿಸಿ ಒಂದು ವರ್ಷದ ಹಿಂದೆ ಐಲ್ಯಾಂಡ್‌ ನಿರ್ಮಿಸಲಾಗಿದೆ. ಇದರಿಂದಾಗಿ ಆರ್‌ಟಿಒ ಕಚೇರಿ ಮುಂಭಾಗದಲ್ಲಿ ವಾಹನ ಚಾಲಕರಲ್ಲಿ ಗೊಂದಲ ಉಂಟಾಗುತ್ತಿದೆ.

ಬಲಕ್ಕೆ ತಿರುಗುವಾಗ ಅಪಾಯ ಬಸ್‌ಗಳು ಕ್ಲಾಕ್‌ಟವರ್‌ ದಾಟಿ ಬಂದು ಆರ್‌ಟಿಒ ಕಚೇರಿ ಎದುರು ಇರುವ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿ ಅನಂತರ ಸ್ಟೇಟ್‌ಬ್ಯಾಂಕ್‌ ಬಸ್‌ನಿಲ್ದಾಣಕ್ಕೆ ಹೋಗುವುದಕ್ಕಾಗಿ ಕೂಡಲೇ ಬಲಕ್ಕೆ ತಿರುವು ಪಡೆದುಕೊಳ್ಳುತ್ತವೆ. ಈ ವೇಳೆ ಬಸ್‌ಗಳ ಹಿಂದಿನಿಂದ ಅಥವಾ ಬಲಬದಿಯಲ್ಲಿ ಪಾಂಡೇಶ್ವರ ಕಡೆಗೆ ನೇರವಾಗಿ ಸಂಚರಿಸುವ ವಾಹನಗಳಿಗೆ ತೀವ್ರ ಅಡಚಣೆಯಾಗುತ್ತಿದೆ. ಅಪಘಾತಕ್ಕೂ ಕಾರಣವಾಗುತ್ತಿದೆ.

ವೇಗದ ಸಂಚಾರ

ಬಸ್‌ಗಳು ವೇಗವಾಗಿ ಬಂದು ಆರ್‌ ಟಿಒ ಕಚೇರಿ ಮುಂಭಾಗ ಏಕಾಏಕಿ ನಿಲುಗಡೆಯಾಗುತ್ತವೆ. ಪ್ರಯಾಣಿಕರನ್ನು ಇಳಿಸಿ ಮತ್ತೆ ವೇಗವಾಗಿ ಬಲಕ್ಕೆ ತಿರುವು ಪಡೆದುಕೊಳ್ಳುತ್ತವೆ. ಕೆಲವು ಬಸ್‌ಗಳ ಚಾಲಕರು ಇಂಡಿಕೇಟರ್‌ ಲೈಟ್‌ ಕೂಡ ಹಾಕುವುದಿಲ್ಲ. ಏಕಾಏಕಿ ಬಲಕ್ಕೆ ತಿರುಗುತ್ತವೆ ಎನ್ನುವುದು ಪಾಂಡೇಶ್ವರ ಕಡೆಗೆ ನೇರವಾಗಿ ಸಂಚರಿಸುವ ದ್ವಿಚಕ್ರ ವಾಹನ, ಇತರ ವಾಹನಗಳ ಸವಾರರು, ಚಾಲಕರ ದೂರು.

Advertisement

ವೃತ್ತವಾದರೆ ಅನುಕೂಲ

ಹಿಂದೆ ವೃತ್ತವಿದ್ದಾಗ ಬಸ್‌ಗಳು ಕೂಡ ನಿಧಾನವಾಗಿ ವೃತ್ತದ ಮೂಲಕ ಬಲಕ್ಕೆ ತಿರುವು ಪಡೆದುಕೊಳ್ಳುತ್ತಿದ್ದವು. ನೇರವಾಗಿ ಪಾಂಡೇಶ್ವರ ಕಡೆಗೆ ಹೋಗುವ ವಾಹನಗಳು ಕೂಡ ಹೆಚ್ಚು ಅಪಾಯವಿಲ್ಲದೆ ಸಾಗುತ್ತಿದ್ದವು. ಆದರೆ ಈಗ ವೃತ್ತದ ಬದಲು ಐಲ್ಯಾಂಡ್‌ ನಿರ್ಮಿಸಿರುವುದರಿಂದ ಸಮಸ್ಯೆ ಹೆಚ್ಚಾಗಿದೆ ಎನ್ನುತ್ತಾರೆ ಕೆಲವು ಮಂದಿ ವಾಹನಗಳ ಚಾಲಕರು.

ಹಿಂದಿನಂತೆ ವೃತ್ತಗಳನ್ನು ನಿರ್ಮಿಸಿ:

ಕ್ಲಾಕ್‌ ಟವರ್‌- ಹಿಂದಿನ ಎ.ಬಿ.ಶೆಟ್ಟಿ ವೃತ್ತ-ಹ್ಯಾಮಿಲ್ಟನ್‌ ಸರ್ಕಲ್‌-ರಾವ್‌ ಆ್ಯಂಡ್‌ರಾವ್‌ ಸರ್ಕಲ್‌-ಕ್ಲಾಕ್‌ಟವರ್‌ ಈ ರಸ್ತೆಯಲ್ಲಿ ದ್ವಿಮುಖ ಸಂಚಾರ ನಿಷೇಧಿಸಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಟ್ಟಿರುವುದರಿಂದ ಸುಗಮ ಸಂಚಾರಕ್ಕೆ ತೊಡಕಾಗಿದೆ. ಪಾಂಡೇಶ್ವರ, ಓಲ್ಡ್‌ಕೆಂಟ್‌ ರಸ್ತೆಯಿಂದ ಬರುವವರಿಗೆ ಅನಗತ್ಯ 1 ಕಿ.ಮೀ. ಹೆಚ್ಚು ದೂರ ಸಂಚಾರ ಮಾಡಬೇಕಾಗಿದೆ. ಆರ್‌ಟಿಒ ಕಚೇರಿ ಎದುರು ಕೂಡ ಗೊಂದಲ ಉಂಟಾಗಿದೆ. ಕೆಲವರು ವಿರುದ್ಧ ದಿಕ್ಕಿನಿಂದಲೂ ವಾಹನ ಚಲಾಯಿಸುತ್ತಿದ್ದಾರೆ. ಹಾಗಾಗಿ ಇದನ್ನು ಹಿಂದಿನಂತೆ ದ್ವಿಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಈ ಹಿಂದೆ ಇದ್ದಂತೆಯೇ ಆರ್‌ಟಿಒ ವೃತ್ತ(ಎ.ಬಿ.ಶೆಟ್ಟಿ ವೃತ್ತ), ಹ್ಯಾಮಿಲ್ಟನ್‌ ವೃತ್ತ ಮತ್ತು ರಾವ್‌ ಆ್ಯಂಡ್‌ ರಾವ್‌ ವೃತ್ತಗಳನ್ನು ಪುನರ್‌ ನಿರ್ಮಿಸಬೇಕು. – ಗೋಪಾಲಕೃಷ್ಣ ಭಟ್‌, ದ.ಕ. ಜಿಲ್ಲಾ ರಸ್ತೆ ಸುರಕ್ಷಾ ಸಮಿತಿ ಸದಸ್ಯರು

ಬಸ್‌ಗಳಿಗೆ ಪೊಲೀಸರಿಂದ ಸೂಚನೆ: ಬಸ್‌ಗಳು ಆರ್‌ಟಿಒ ಕಚೇರಿ ಎದುರಿನಲ್ಲಿ ಪ್ರಯಾಣಿಕರನ್ನು ಇಳಿಸಿದ ಮೇಲೆ ಬಲಕ್ಕೆ ತಿರುವು ಪಡೆದುಕೊಳ್ಳುವ ಮೊದಲು ಇಂಡಿಕೇಟರ್‌ ಲೈಟ್‌ಗಳನ್ನು ಹಾಕಬೇಕು. ನಿಧಾನವಾಗಿ ಚಲಿಸಬೇಕು. ಈ ಬಗ್ಗೆ ಈಗಾಗಲೇ ಬಸ್‌ನವರಿಗೆ ಸೂಚನೆ ನೀಡಲಾಗಿದೆ. ಏಕಮುಖ ಸಂಚಾರ ರದ್ದು ಮಾಡುವ ಬಗ್ಗೆ ಜಿಲ್ಲಾಧಿಕಾರಿ ಮಟ್ಟದ ಸಭೆಯ ಅನಂತರವಷ್ಟೇ ನಿರ್ಧಾರ ತೆಗೆದುಕೊಳ್ಳಬಹುದು. – ದಿನೇಶ್‌ ಕುಮಾರ್‌ ಬಿ.ಪಿ., ಡಿಸಿಪಿ ಅಪರಾಧ ಮತ್ತು ಸಂಚಾರ ವಿಭಾಗ

„ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next