Advertisement
ಟಾಟಾ ಕಂಪೆನಿಯ ಏಸ್ ಗೂಡ್ಸ್ ಟೆಂಪೋವೊಂದು ಚಾಲಕನ ನಿರ್ಲಕ್ಷ್ಯದಿಂದ ಸೇತುವೆಯಲ್ಲಿ ತಲೆ ಮೇಲೆಯಾಗಿ ನಿಂತುಕೊಂಡಿದೆ.
Related Articles
Advertisement
ಘಟನೆಯಿಂದ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅನಾನುಕೂಲವಾಗಿದೆ. ಸಿಲುಕಿಕೊಂಡ ವಾಹನವನ್ನು ಹೊರತೆಗೆಯಲು ಹರಸಾಹಸ ಪಡುತ್ತಿದ್ದಾರೆ.
ಬ್ರಿಟಿಷ್ ಕಾಲದಲ್ಲಿ ನಿರ್ಮಾಣವಾದ ಸೇತುವೆಯ ಆಯುಷ್ಯ ಮುಗಿದಿದ್ದು, ಯಾವುದೇ ಘನ ವಾಹನಗಳ ಸಂಚಾರ ಮಾಡುವುದು ನಿಷಿದ್ಧ ಎಂದು ಸುಮಾರು ವರ್ಷಗಳ ಹಿಂದೆಯೇ ಜಿಲ್ಲಾಧಿಕಾರಿ ಅದೇಶ ಹೊರಡಿಸಿದ್ದರೂ ಕೂಡ ಸ್ಥಳೀಯಾಡಳಿತದ ನಿರ್ಲಕ್ಷ್ಯತನಕ್ಕೆ ಒಳಗಾಗಿ ಕಳೆದ ವರ್ಷದವರೆಗೂ ಸೇತುವೆಯಲ್ಲಿ ಘನ ವಾಹನಗಳು ಬೇಕಾಬಿಟ್ಟಿಯಾಗಿ ಸಂಚಾರ ಮಾಡುತ್ತಿದ್ದವು. ಆದರೆ ಕಳೆದ ಮಳೆಗಾಲದಲ್ಲಿ ಸೇತುವೆಯ ಮೇಲೆ ಬಿರುಕು ಕಂಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿ ಸ್ಥಳೀಯಾಡಳಿತ ಕೂಡಲೇ ಸೇತುವೆಯ ಮೇಲೆ ಸಂಚಾರ ಮಾಡದಂತೆ ತಡೆಬೇಲಿ ನಿರ್ಮಾಣ ಮಾಡಿದೆ. ಆದರೆ ಒಂದು ಬಾರಿ ಅ ತಡೆಬೇಲಿಯನ್ನು ಅಕ್ರಮ ಮರಳು ಸಾಗಾಟ ಮಾಡುವ ಲಾರಿಗಳು ಹೊತ್ತು ಕೊಂಡು ಹೋಗಿದ್ದವು. ಮತ್ತೆ ಘನ ಗಾತ್ರದ ಕಬ್ಬಿಣದ ತಡೆಬೇಲಿ ಹಾಕಲಾಗಿತ್ತು. ಇದೀಗ ಆ ಬೇಲಿಗೆ ತಾಗಿ ವಾಹನ ಸಿಲುಕಿಕೊಂಡಿದೆ.