Advertisement
ರಾಹುಲ್ ಜತೆಗೆ ಸಿಪಿಎಂ ಮುಖಂಡ ಸೀತಾರಾಮ್ ಯೆಚೂರಿ ಸೇರಿ ಹಲವು ಮುಖಂಡರು ಈ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗ ವಹಿಸುವ ಸಾಧ್ಯತೆಯಿದೆ. ವಿಭಿನ್ನ ಸೈದ್ಧಾಂತಿಕ ನಿಲುವುಗಳನ್ನು ಹೊಂದಿರುವ ವ್ಯಕ್ತಿ ಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ನಿರ್ಧರಿಸಲಾ ಗಿದೆ. ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ “ಭಾರತದ ಭವಿಷ್ಯದ ಬಗ್ಗೆ ಆರೆಸ್ಸೆಸ್ ದೃಷ್ಟಿಕೋನ’ ಎಂಬ ವಿಚಾ ರದ ಬಗ್ಗೆ ಮಾತನಾಡಲಿದ್ದಾರೆಂದು ಪ್ರಚಾರ ಪ್ರಮುಖ್ ಅರುಣ್ ಕುಮಾರ್ ಹೇಳಿದ್ದಾರೆ. ನಾಗ್ಪುರ ಕಾರ್ಯಕ್ರಮ ದಲ್ಲಿ ಪ್ರಣಬ್ ಮುಖರ್ಜಿ ಭಾಗವಹಿ ಸಿದ್ದ ಬಗ್ಗೆ ರಾಹುಲ್ ಯಾವುದೇ ಹೇಳಿಕೆ ನೀಡಿಲ್ಲದಿದ್ದರೂ, ಪಕ್ಷದ ಹಲವು ಮುಖಂಡರು ವಿರೋಧಿಸಿದ್ದರು.
ಲಂಡನ್‌ನಲ್ಲಿ ಮುಸ್ಲಿಂ ಬ್ರದರ್‌ಹುಡ್ ಜತೆ ಆರೆಸ್ಸೆಸ್ ಸಿದ್ಧಾಂತ ಹೋಲಿಕೆ ಮಾಡಿದ್ದ ರಾಹುಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆರೆಸ್ಸೆಸ್, ರಾಹುಲ್‌ಗೆ ಭಾರತದ ಬಗ್ಗೆ ಅರಿವಿಲ್ಲ. ಹೀಗಾಗಿ ಸಂಘದ ಬಗ್ಗೆ ತಿಳಿದುಕೊಳ್ಳಲೂ ಅವರಿಂದ ಸಾಧ್ಯವಿಲ್ಲ ಎಂದಿದೆ. ಇಡೀ ದೇಶ ಇಂದು ಇಸ್ಲಾಮಿಕ್ ಮೂಲಭೂತವಾದದ ಭೀತಿಯನ್ನು ಎದುರಿಸುತ್ತಿದೆ. ಈ ಸನ್ನಿವೇಶದ ತೀವ್ರತೆಯ ಬಗ್ಗೆ ರಾಹುಲ್‌ಗೆ ತಿಳಿದಿಲ್ಲ ಎಂದು ಆರೆಸ್ಸೆಸ್ ಪ್ರಚಾರ ಪ್ರಮುಖ್ ಅರುಣ್ ಕುಮಾರ್ ಹೇಳಿದ್ದಾರೆ. ಭಾರತವನ್ನು ಅರ್ಥ ಮಾಡಿಕೊಳ್ಳದ ಹೊರತು, ರಾಹುಲ್‌ಗೆ ಸಂಘದ ಸಿದ್ಧಾಂತ ಅರ್ಥವಾಗದು ಎಂದು ಅರುಣ್ ಹೇಳಿದ್ದಾರೆ.