Advertisement

Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ

11:52 PM Nov 18, 2024 | Team Udayavani |

ರಾಂಚಿ: “ಪ್ರಧಾನಿ ಮೋದಿ, ಅಮಿತ್‌ ಶಾ, ಅದಾನಿ ಹಾಗೂ ಅಂಬಾನಿ ಒಂದಾಗಿದ್ದರೆ, ಅವರು ಸುರಕ್ಷಿತರಾಗುತ್ತಾರೆ. ಬಿಜೆಪಿಯ “ಏಕ್‌ ಹೇ ತೋ ಸೇಫ್ ಹೇ’ (ಒಂದಾಗಿದ್ದರೆ ಸುರಕ್ಷಿತವಾಗಿರುತ್ತೀವಿ) ಎಂಬ ಘೋಷಣೆಯ ನಿಜವಾದ ಅರ್ಥ ಇದೇ’. ಹೀಗೆಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಲೇವಡಿ ಮಾಡಿದ್ದಾರೆ.

Advertisement

ಜಾರ್ಖಂಡ್‌ನ‌ ರಾಂಚಿ ಹಾಗೂ ಮಹಾರಾಷ್ಟ್ರದ ಮುಂಬೈನಲ್ಲಿ ಮಾಧ್ಯಮಗಳ ಎದುರು ರಾಹುಲ್‌ ಬಿಜೆಪಿಯ ಏಕ್‌ ಹೇ ತೋ ಸೇಫ್ ಹೇ ಘೋಷವಾಕ್ಯವನ್ನು ಲೇವಡಿ ಮಾಡಿದ್ದಾರೆ. ಮೋದಿ ಅದಾನಿ ಜತೆಗಿರುವ ಪೋಸ್ಟರ್‌ ಮತ್ತು ಅದಾನಿ ಸಂಸ್ಥೆಯು ವಹಿಸಿಕೊಂಡಿರುವ ಧಾರಾವಿ ಪುನರ್‌ ನಿರ್ಮಾಣ ನಕ್ಷೆ ಇರುವ ಪೋಸ್ಟರ್‌ ಅನ್ನು ರಾಹುಲ್‌ ತೆರೆದು ತೋರಿಸಿ, ” ಏಕ್‌ ಹೇ ತೋ ಸೇಫ್ ಹೇ’ ಎಂದರೆ ಇದೇ ಅರ್ಥ ಎಂದಿದ್ದಾರೆ.

ಧಾರಾವಿ ಪುನರಾಭಿವೃದ್ಧಿ ಯೋಜನೆ ನ್ಯಾಯಸಮ್ಮತವಾಗಿಲ್ಲ. ಈ ಯೋಜನೆಗಾಗಿ ಬಿಜೆಪಿಯ ಇಡೀ ಆಡಳಿತ ಮಂಡಳಿ ಅದಾನಿಗಾಗಿ ಕೆಲಸ ಮಾಡಿದೆ. ಅಲ್ಲದೇ, ದೇಶದ ಪ್ರಮುಖ ಆಸ್ತಿಗಳಾದ ಬಂದರು, ವಿಮಾನ ನಿಲ್ದಾಣ ಎಲ್ಲವನ್ನೂ ಪಾರದರ್ಶಕ ಟೆಂಡರ್‌ ನಡೆಸದೆಯೇ ಅದಾನಿ, ಅಂಬಾನಿಯಂಥ ಕೋಟ್ಯಧಿಪತಿಗಳ ಕೈಗೆ ಇಡಲಾಗಿದೆ ಎಂದು ಆರೋಪಿಸಿದ್ದಾರೆ. ಇದು ಬಡವರು ಮತ್ತು ಕೋಟ್ಯಧಿಪತಿಗಳ ನಡುವಿನ ಹೋರಾಟ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next