Advertisement

Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

11:52 PM Nov 15, 2024 | Team Udayavani |

ಥಾಣೆ: “ಕರ್ನಾಟಕ, ತೆಲಂಗಾಣದಲ್ಲಿ ಎಸ್ಸಿ, ಎಸ್ಟಿ, ಒಬಿ­ಸಿಗಳಿಗೆ ಮೀಸಲಿರುವ ಕೋಟಾಗಳನ್ನು ಅಲ್ಪಸಂಖ್ಯಾಕ ರಿಗೆ ನೀಡಲು ಕಾಂಗ್ರೆಸ್‌ ಬಯಸುತ್ತಿದೆ. ಆದರೆ ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದು ತಿರುಗುವ ರಾಹುಲ್‌ಗೆ ಧರ್ಮದ ಆಧಾ­ರದಲ್ಲಿ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂಬುದು ತಿಳಿದಿಲ್ಲ.

Advertisement

ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ’ ಹೀಗೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಲೇವಡಿ ಮಾಡಿದ್ದಾರೆ. ಥಾಣೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ವೋಟ್‌ ಬ್ಯಾಂಕ್‌ ರಾಜಕಾರಣ ತಡೆಯ­ಬೇಕಾಗಿದೆ. ರಾಹುಲ್‌ ತಮ್ಮ ಪ್ರೀತಿಯ ಅಂಗಡಿಯಲ್ಲಿ ದ್ವೇಷದ ಸರಕು ಮಾರುತ್ತಿದ್ದಾರೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next