Advertisement

RSS; ಭಾರತ ಹಿಂದೂ ರಾಷ್ಟ್ರ, ಅದನ್ನು ಹಿಂದೂಗಳು ರಕ್ಷಿಸಬೇಕು: ಭಾಗವತ್‌

01:59 AM Oct 07, 2024 | Team Udayavani |

ಕೋಟಾ: “ಭಾರತ ಹಿಂದೂ ರಾಷ್ಟ್ರ. ಅದರ ರಕ್ಷಣೆಗೆ ಹಿಂದೂ ಸಮುದಾಯವು ಭಾಷೆ, ಜಾತಿ-ಮತ ಹಾಗೂ ಪ್ರಾದೇಶಿಕ ವಿವಾದಗಳನ್ನು ಮರೆತು ಒಂದಾಗಬೇಕು’ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

Advertisement

ರಾಜಸ್ಥಾನದ ಬರಾನ್‌ನಲ್ಲಿ ನಡೆದ ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಹಳ ಪ್ರಾಚೀನ ಕಾಲದಿಂದಲೂ ಈ ನಾಡಿನಲ್ಲಿ ವಾಸಿಸುತ್ತಿದ್ದೇವೆ. ಹಿಂದೂ ಎಂಬ ಪದವು ಬಳಿಕ ಬಂದಿದೆ. ಹಿಂದೂಗಳು ಎಲ್ಲರನ್ನೂ ತಮ್ಮಂತೆಯೇ ಭಾವಿಸುತ್ತಾರೆ’ ಎಂದರು.

ಇದರ ಜತೆಗೆ ಹಿಂದೂಗಳು ತಮ್ಮ ಕೆಲಸವನ್ನು ಮತ್ತೂಬ್ಬರಿಗೆ ವಹಿಸಿಕೊಡುವ ಅಭ್ಯಾಸ ಹೊಂದಿದ್ದು, ದೇವರೇ ನಮ್ಮನ್ನು ಕಾಪಾಡು ಎನ್ನುತ್ತಾರೆ. ಆದರೆ ದೇವರು ತಮ್ಮ ಕೆಲಸಗಳನ್ನು ತಾವೇ ಮಾಡುವರಿಗೆ ನೆರವಾಗುತ್ತಾನೆ ಎಂದರು. ಮಹಾಭಾರತದಲ್ಲಿ ಕೂಡ ಕೃಷ್ಣ ಪಾಂಡವರಿಗೆ ನೆರವಾಗಿದ್ದ ಉದಾಹರಣೆ ಇದೆ ಎಂದು ಭಾಗವತ್‌ ನೆನಪಿಸಿ ಕೊಂಡರು.

ಸಿದ್ಧಾಂತದ ಆಧಾರದಲ್ಲಿ ಆರ್‌ಎಸ್‌ಎಸ್‌ ಕೆಲಸ ಮಾಡುತ್ತದೆಯೇ ಹೊರತು ಯಾಂತ್ರಿಕವಾಗಿ ಅಲ್ಲ. ಸಂಘ ಹೊಂದಿರುವ ಮೌಲ್ಯಗಳನ್ನು ನಾಯಕರು ಸೇರಿದಂತೆ ವಿವಿಧ ಹಂತಗಳ ಮೂಲಕ ಕಾರ್ಯಕರ್ತರಿಗೆ ತಲುಪುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next