Advertisement

Bangladesh ಹಿಂದೂಗಳ ವಿರುದ್ಧ ದಾಳಿ ಸಲ್ಲದು: ಭಾರತ ಎಚ್ಚರಿಕೆ

01:12 AM Dec 10, 2024 | Team Udayavani |

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿ ಅಲ್ಪಸಂಖ್ಯಾಕ‌ರ ಮೇಲಿನ ದಾಳಿಗಳು ಸಲ್ಲದು. ಅದು ವಿಷಾ­ದ­ನೀಯ ಎಂದು ವಿದೇಶಾಂಗ ಕಾರ್ಯ ದರ್ಶಿ ವಿಕ್ರಂ ಮಿಸ್ರಿ ಹೇಳಿದ್ದಾರೆ.

Advertisement

ಇಸ್ಕಾನ್‌ಗೆ ಸೇರಿದ ದೇಗುಲ, ಹಿಂದೂಗಳು ಮತ್ತು ಧಾರ್ಮಿಕ ಸಂಸ್ಥೆಗಳ ಮೇಲೆ ದಾಳಿ ಬಿರುಸಾಗಿರುವಂತೆಯೇ ಬಾಂಗ್ಲಾಕ್ಕೆ ದೌಡಾಯಿಸಿದ ಅವರು, ವಿದೇಶಾಂಗ ಕಾರ್ಯದರ್ಶಿ ಮೊಹಮ್ಮದ್‌ ಜಶೀಮ್‌ ಉದ್ದೀನ್‌ ಜತೆ ಸಭೆ ನಡೆಸಿದರು. ಬಳಿಕ ಮಾತನಾಡಿ, “ಅಲ್ಪ­ಸಂಖ್ಯಾಕರ ಮೇಲಾಗುತ್ತಿರುವ ದಾಳಿ ಬಗ್ಗೆ ಭಾರತಕ್ಕಿರುವ ಕಳವಳದ ಬಗ್ಗೆ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾ­ಗಿದೆ. ಧಾರ್ಮಿಕ, ಸಾಂಸ್ಕೃತಿಕ, ರಾಜತಾಂತ್ರಿಕ ಕೇಂದ್ರಗಳ ಮೇಲಿನ ದಾಳಿ ವಿಷಾದನೀಯ ಎಂದು ಸರಕಾರದ ಗಮನಕ್ಕೆ ತರಲಾಗಿದೆ ಎಂದರು.

ಭಾರತ ಬಾಂಗ್ಲಾದೊಂದಿಗೆ ಸಕಾರಾ­ತ್ಮಕ, ರಚನಾತ್ಮಕ ಹಾಗೂ ಪರಸ್ಪರ ಅನು­ಕೂಲಕರ ಸಂಬಂಧ ಹೊಂದಲು ಇಚ್ಛಿ­ಸು­ತ್ತಿದೆ. ಉಭಯ ದೇಶಗಳ ನಡುವಿನ ಸಂಪರ್ಕ, ವ್ಯಾಪಾರದಿಂದ ಜನರಿಗೆ ಅನುಕೂಲಗಳು ಇವೆ ಎಂದರು. ಶೇಖ್‌ ಹಸೀನಾ ನೇತೃತ್ವದ ಸರಕಾರ ಪತನ­ಗೊಂಡ ಬಳಿಕ ಮೊದಲ ಬಾರಿಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next