Advertisement
ಮಿಯಲಾಜೆಯಲ್ಲಿ ನಿರ್ಮಾಣಗ್ರಾಮಸ್ಥರ ಬಹುಕಾಲದ ಬೇಡಿಕೆಯಂತೆ ವೇಣೂರು ಗ್ರಾ.ಪಂ. ವ್ಯಾಪ್ತಿಯ ಬಜಿರೆ ಗ್ರಾಮದ ಮಿಯಲಾಜೆಯ 1 ಎಕ್ರೆ ಜಾಗದಲ್ಲಿ ಸುಸಜ್ಜಿತ ಹಿಂದೂ ರುದ್ರಭೂಮಿಯ ನಿರ್ಮಾಣ ಆಗಿದ್ದು, ಡಿ. 2ರಂದು ಲೋಕಾ ರ್ಪಣೆಗೊಳ್ಳಲಿದೆ. 2014ರಲ್ಲಿ ವೇಣೂರು ಗ್ರಾ.ಪಂ.ನ ಅಧ್ಯಕ್ಷರಾಗಿದ್ದ ಸತೀಶ್ ಹೆಗ್ಡೆಯವರ ಅವಧಿಯಲ್ಲಿ ಅಂದಿನ ಶಾಸಕರಾಗಿದ್ದ ಕೆ. ವಸಂತ ಬಂಗೇರ ಅವರ ಅವಿರತ ಶ್ರಮದಲ್ಲಿ ಜಾಗ ಕಾಯ್ದಿರಿಸಲಾಗಿತ್ತು. 2017ರ ವೇಣೂರು ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿಯವರ ಹೊಸ ಆಡಳಿತದಲ್ಲಿ ಕಟ್ಟಡದ ಕಾಮಗಾರಿಗೆ ಚಾಲನೆ ನೀಡಲಾಯಿತು. ಇದಕ್ಕಾಗಿಯೇ ಹಿಂದೂ ರುದ್ರಭೂಮಿ ಅನುಷ್ಠಾನ ಸಮಿತಿ ರಚಿಸಿ, ವೇಣೂರಿನ ಉದ್ಯಮಿ ಕೆ. ಭಾಸ್ಕರ ಪೈ ಮುಂದಾಳತ್ವದಲ್ಲಿ 18.50 ಲಕ್ಷ ರೂ. ವೆಚ್ಚದಲ್ಲಿ ರುದ್ರಭೂಮಿ ನಿರ್ಮಾಣ ಆಗಿದೆ.
ವೇಣೂರು ಗ್ರಾ.ಪಂ.ನಿಂದ ಉದ್ಯೋಗ ಖಾತರಿ ಸಹಿತ ರೂ. 9 ಲಕ್ಷದಷ್ಟು ಅನು ದಾನ ವಿನಿಯೋಗಿಸಲಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳ ದಿಂದ 2 ಲಕ್ಷ ರೂ. ಅನುದಾನ ದೊರೆತಿದೆ. ಉಳಿದಂತೆ ಊರ ಹಾಗೂ ಪರವೂರ ದಾನಿಗಳಿಂದ ಆರ್ಥಿಕ ಸಹಕಾರ ಲಭಿಸಿದೆ. ವ್ಯವಸ್ಥೆಗಳು
ದಹನ-ಸಿಲಿಕಾನ್ ಚೇಂಬರ್, ವೀಕ್ಷಕರ ಕೊಠಡಿ-ಆಸನ, ಶೌಚಾಲಯ, ಸ್ನಾನ ಗೃಹ, ಗೋಡೌನ್, ನೀರಿನ ಟ್ಯಾಂಕ್, ಇಂಟರ್‌ಲಾಕ್ ನಿರ್ಮಿಸಲಾಗಿದೆ. 25 ಸಾವಿರ ರೂ. ವೆಚ್ಚದಲ್ಲಿ ವೇಣೂರು ಗ್ರಾ.ಪಂ.ನಿಂದ ಸೋಲಾರ್ ದೀಪಗಳನ್ನು ಅಳವಡಿಸಲಾಗಿದೆ.
Related Articles
Advertisement
ವಿಗ್ರಹದ ಕೊಡುಗೆರುದ್ರಭೂಮಿಯಲ್ಲಿ ಬೃಹದಾಕಾರದ ಶಿವನ ವಿಗ್ರಹ ಹಾಗೂ ವೀರಬಾಹು (ಸತ್ಯಹರಿಶ್ಚಂದ್ರ) ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಶಿವನ ವಿಗ್ರಹವನ್ನು ವೇಣೂರಿನ ಉದ್ಯಮಿಗಳಾಗಿದ್ದ ದಿ| ಎಂ.ಎನ್. ಭಟ್ ಸ್ಮರಣಾರ್ಥ ಅವರ ಪುತ್ರ ಯಜ್ಞನಾರಾಯಣ ಭಟ್ ಅವರು ಒದಗಿಸಿದರೆ, ವೀರಬಾಹು ವಿಗ್ರಹವನ್ನು ದಿ| ಕೆ.ಎನ್. ಪೈ ಸ್ಮರಣಾರ್ಥ ಅವರ ಪತ್ನಿ ಮತ್ತು ಮಕ್ಕಳು ಕೊಡುಗೆಯಾಗಿ ನೀಡಿದ್ದಾರೆ. ಸಿಲಿಕಾನ್ ಚೇಂಬರ್‌ನ ಪ್ರಯೋಜನ
ರುದ್ರಭೂಮಿಯಲ್ಲಿ ಸಿಲಿಕಾನ್ ಚೇಂಬರ್‌ನ ರಚನೆಯಿಂದ ಸೌದೆಯ ಉಳಿತಾಯ ಆಗಲಿದ್ದು, ಸcತ್ಛತೆ ಕಾಪಾಡಲು ಸಹಕಾರಿ ಆಗಲಿದೆ. ಅತ್ಯಲ್ಪ ಸಮಯದಲ್ಲಿ ಸುಡುವಿಕೆ, ಬೀಸುವ ಗಾಳಿಯಿಂದ ರಕ್ಷಣೆ ಮತ್ತು ಶಾಖ ಹರಡುವಿಕೆ ಕಡಿಮೆಯಾದ್ದರಿಂದ ಹತ್ತಿರದಿಂದಲೇ ವೀಕ್ಷಣೆ ಮಾಡಬಹುದು. ಬೂದಿ, ಎಲುಬುಗಳ ಸಂಗ್ರಹ ಟ್ರೇಯಲ್ಲಿ ಸುಲಭವಾಗಿ ಸಾಧ್ಯವಾಗುತ್ತದೆ. ಸಹಕಾರದಿಂದ ಸಾಧ್ಯವಾಗಿದೆ
ಗ್ರಾಮಸ್ಥರ ಅನುಕೂಲಕ್ಕಾಗಿ ಸಾಕಷ್ಟು ಶ್ರಮವಹಿಸಿ ಹಿಂದೂ ರುದ್ರಭೂಮಿಯನ್ನು ನಿರ್ಮಿಸಲಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ವೇಣೂರು ಗ್ರಾ.ಪಂ.ನಿಂದ ಅತಿ ಹೆಚ್ಚಿನ ಅನುದಾನ ಲಭಿಸಿದ್ದರಿಂದ ಇದು ಸಾಧ್ಯವಾಗಿದೆ. ದಾನಿಗಳು ಆರ್ಥಿಕ ಸಹಕಾರ ನೀಡಿದ್ದಾರೆ.
– ಭಾಸ್ಕರ ಪೈ ಅಧ್ಯಕ್ಷರು, ಹಿಂದೂ
ರುದ್ರಭೂಮಿ ಅನುಷ್ಠಾನ ಸಮಿತಿ