Advertisement

Russia; 25ರ ವಿದ್ಯಾರ್ಥಿನಿ ಮಗು ಹೆತ್ತರೆ 81,000 ರೂ.!

01:34 AM Jan 10, 2025 | Team Udayavani |

ಮಾಸ್ಕೋ: ಜನಸಂಖ್ಯೆ ಹೆಚ್ಚಳಕ್ಕೆ ಮುಂದಾಗಿರುವ ರಷ್ಯಾ ಯೌವ್ವಾನವಸ್ಥೆಯಲ್ಲೇ ಕುಟುಂಬಗಳನ್ನು ಬೆಳೆಸುವುದಕ್ಕಾಗಿ ಮುಂದಾಗಿದೆ. ಕಾಲೇಜಿನಲ್ಲಿ ಓದುತ್ತಿದ್ದು ಮತ್ತು 25 ವರ್ಷ ಪೂರೈಸಿದ ಹೆಣ್ಣು ಮಕ್ಕಳು ಮಗು ಹೆತ್ತರೆ ಅಂದಾಜು 81,000 ರೂ. (100,000 ರೂಬಲ್ಸ್‌) ಪ್ರೋತ್ಸಾಹಧನ ನೀಡಲಿದೆ.

Advertisement

ರಷ್ಯಾದ ಕೆರುಲಿಯಾ ಪ್ರಾಂತವು ಈ ಆಫ‌ರ್‌ ನೀಡುತ್ತಿದೆ. ಮಗು ಹೆರುವ ಯುವತಿ ಕಡ್ಡಾಯವಾಗಿ ಸ್ಥಳೀಯ ವಿವಿ ಅಥವಾ ಕಾಲೇಜಿನಲ್ಲಿ ಪೂರ್ಣ ಪ್ರಮಾಣದ ವಿದ್ಯಾರ್ಥಿಯಾಗಿರಬೇಕೆಂಬ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ. ಮಗು ಮೃತಪಟ್ಟರೆ ಅಥವಾ ಇನ್ನಿತರ ಪರಿಸ್ಥಿತಿಗಳ ಬಗ್ಗೆ ಯಾವುದೇ ಸ್ಪಷ್ಟ ಉಲ್ಲೇಖ ಮಾಡಿಲ್ಲ. ರಷ್ಯಾದ ಇತರ ಪ್ರಾಂತಗಳು ಕೂಡ ಇದೇ ರೀತಿಯಲ್ಲಿ ಮಕ್ಕಳನ್ನು ಹೆರಲು ಆಫ‌ರ್‌ ನೀಡುತ್ತಿವೆ. ರಷ್ಯಾ ಸರಕಾರ ಮಾತೃತ್ವ ರಜೆಯ ಪಾವತಿಯನ್ನೂ ಹೆಚ್ಚಿಸಿವೆ.

ರಷ್ಯಾದಲ್ಲಿ ಜನನ ಪ್ರಮಾಣ ಗಣನೀಯವಾಗಿ ಕುಸಿದಿದೆ. 2024ರ ಮೊದಲಾರ್ಧದಲ್ಲಿ ಕೇವಲ 5,99,600 ಮಕ್ಕಳು ಜನಿಸಿದ್ದಾರೆ. ಇದು 25 ವರ್ಷಗಳಲ್ಲೇ ಅತ್ಯಂತ ಕಡಿಮೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next