ಲಾಸ್ ಏಂಜಲೀಸ್: ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ಉಂಟಾಗಿರುವ ಕಾಳ್ಗಿಚ್ಚಿನಿಂದಾಗಿ ಬರೋಬ್ಬರಿ 29,000 ಎಕ್ರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ. ಜತೆಗೆ 1 ಲಕ್ಷಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಲಾಗಿದೆ. ಈ ದುರಂತದಲ್ಲಿ ಅಸುನೀಗಿದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಕ್ಯಾಲಿಫೋರ್ನಿಯಾದಲ್ಲಿ 4 ಲಕ್ಷ ಮಂದಿಗೆ ವಿದ್ಯುತ್ ವ್ಯತ್ಯಯ ಉಂಟಾಗಿದೆ. 2 ಸಾವಿರ ಮನೆ ಭಸ್ಮವಾಗಿದ್ದು, ಐತಿಹಾಸಿಕ, ಐಷಾರಾಮಿ ಕಟ್ಟಡಗಳು, ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಈ ಪೈಕಿ ಅಧ್ಯಕ್ಷ ಬೈಡೆನ್ ಪುತ್ರ ಹಂಟರ್ ಬೈಡನ್ ವಾಸಿಸುತ್ತಿದ್ದ ಮನೆ ಹಾಗೂ ಕಾರು ಬೆಂಕಿಗಾಹುತಿಯಾಗಿದ್ದು ಫೋಟೋ ವೈರಲ್ ಆಗಿದೆ. ಬೆಂಕಿ ಶಮನಗೊಳಿಸುವ ನಿಟ್ಟಿನಲ್ಲಿ 10 ಕಾಪ್ಟರ್, ಸಿ-130 ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ.
ಭಯಾನಕ ಅನುಭವ: ಪ್ರಿಯಾಂಕಾ
ಬೆಂಕಿಗಾಹುತಿಯಾದ ಪ್ರದೇಶದಲ್ಲಿ ವಾಸಿಸುತ್ತಿದ್ದ ಬಾಲುವುಡ್ ನಟಿ ನೋರಾ ಫತೇಹಿ ಹಾಗೂ ಪ್ರಿಯಾಂಕಾ ಚೋಪ್ರಾ ತಮ್ಮ ಭಯಾನಕ ಅನುಭವ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿ ದ್ದಾರೆ. ಕೇವಲ 5 ನಿಮಿಷಗಳ ಹಿಂದಷ್ಟೇ ಸ್ಥಳಾಂತರ ಆಗಬೇಕೆಂಬ ನೋಟಿಸ್ ನೀಡಲಾಗಿತ್ತು. ಅಷ್ಟರಲ್ಲೇ ಬೆಂಕಿ ಎಲ್ಲೆಡೆ ವ್ಯಾಪಿಸಿದೆ ಎಂದು ನೋರಾ ಹೇಳಿದ್ದಾರೆ. ಪ್ರಿಯಾಂಕಾ ಬೆಂಕಿ ಹಬ್ಬುತ್ತಿರುವ ವೀಡಿಯೋ ಹಂಚಿಕೊಂಡಿದ್ದಾರೆ.