ನವದೆಹಲಿ:2022ರ ಮಾರ್ಚ್ 24 ರಂದು ತೆರೆಗೆ ಬಂದ ಆರ್ ಆರ್ ಆರ್ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಯಶಸ್ಸು ಗಳಿಸಿ ಸಾವಿರ ಕೋಟಿ ಕ್ಲಬ್ ಸೇರಿದೆ. ವಿದೇಶದಲ್ಲೂ ತೆರೆಗೆ ಬಂದ ಸಿನಿಮಾ ಈಗ ಮತ್ತೊಂದು ದಾಖಲೆ ಬರೆದಿದೆ.
ಅಕ್ಟೋಬರ್ 21 ರಂದು ಜಪಾನ್ ನಲ್ಲಿ ರಿಲೀಸ್ ಆದ ಆರ್ ಆರ್ ಆರ್ ಈಗ ಜಪಾನ್ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಬರೆದಿದೆ. ಈ ದಾಖಲೆಯನ್ನು ಬರೆದ ಭಾರತದ ಮೊದಲ ಚಿತ್ರ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.
1995 ರಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ಅವರ ʼಮುತ್ತುʼ ಸಿನಿಮಾ ತೆರೆಗೆ ಬಂದಿತ್ತು. ಜಪಾನ್ ನಲ್ಲಿ ಸಿನಿಮಾ ಅಂದು 23.50 ಕೋಟಿ ಕಲೆಕ್ಷನ್ ಮಾಡಿತ್ತು. 209 ಸ್ಕೀನ್ ನಲ್ಲಿ, 44 ನಗರದಲ್ಲಿ ತೆರೆ ಕಂಡು ರಜಿನಿಕಾಂತ್ ಜಪಾನ್ ನಲ್ಲೂ ಕಮಾಲ್ ಮಾಡಿದ್ದರು.
ಇದನ್ನೂ ಓದಿ:ಹೃದಯಾಘಾತ: ಮಗಳ ಮೆಹೆಂದಿ ಕಾರ್ಯಕ್ರಮದಲ್ಲಿ ನೃತ್ಯ ಮಾಡುವಾಗಲೇ ಕುಸಿದು ಬಿದ್ದು ತಂದೆ ಮೃತ್ಯು
ಈ ಸಿನಿಮಾ ತೆರೆ ಕಂಡು 26 ವರ್ಷಗಳು ಕಳೆದಿವೆ. 26 ವರ್ಷದ ಬಳಿಕ ʼಮುತ್ತುʼ ಸಿನಿಮಾದ ಜಪಾನ್ ಕಲೆಕ್ಷನ್ ದಾಖಲೆಯನ್ನು ರಾಮ್ ಚರಣ್, ಜೂ. ಎನ್. ಟಿ. ಆರ್ ಅವರ ಆರ್ ಆರ್ ಆರ್ ಮುರಿದಿದೆ. ಆರ್ ಆರ್ ಆರ್ ಜಪಾನ್ ನಲ್ಲಿ 24.10 ಕೋಟಿ ಕಲೆಕ್ಷನ್ ಮಾಡಿದೆ. ಆ ಮೂಲಕ ರಜಿನಿ ʼಮುತ್ತುʼ ದಾಖಲೆಯನ್ನು ಮುರಿದು, ಜಪಾನ್ ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಭಾರತದ ಚಿತ್ರವಾಗಿದೆ.
ಎಸ್.ಎಸ್. ರಾಜಾಮೌಳಿ ಅವರ ʼಆರ್ ಆರ್ ಆರ್ʼ ಸಿನಿಮಾ ಅಂತರಾಷ್ಟ್ರೀಯ 80ನೇ ಗೋಲ್ಡನ್ ಗ್ಲೋಬ್ ಅವಾರ್ಡ್ಸ್ ನಲ್ಲಿ ವಿದೇಶಿ ( ನಾನ್ ಇಂಗ್ಲೀಷ್) ಸಿನಿಮಾ ಹಾಗೂ ಬೆಸ್ಟ್ ಒರಿಜಿನಲ್ ಸಾಂಗ್ ( ನಾಟು ನಾಟು) ವಿಭಾಗದಲ್ಲಿ ನಾಮಿನೇಟ್ ಆಗಿದೆ.