Advertisement
ನವೆಂಬರ್ 2014 ರಲ್ಲಿ ವಿಶಾಖಪಟ್ಟಣದಿಂದ ಹೊರಟ ಈ ರೈಲು ಉತ್ತರ ಪ್ರದೇಶದ ಬಸ್ತಿ ನಿಲ್ದಾಣವನ್ನು ತಲುಪಲು ಬರೋಬ್ಬರಿ 3ವರ್ಷ ೬ ತಿಂಗಳು ತೆಗೆದುಕೊಂಡಿತು. ಸಾಮಾನ್ಯವಾಗಿ 1,400 ಕಿಲೋಮೀಟರ್ ದೂರವನ್ನು ಕ್ರಮಿಸಲು ರೈಲು 42 ಗಂಟೆ 13 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಇಲ್ಲಿ ನಡೆದಿರುವುದು ಮಾತ್ರ ಆಶ್ಚರ್ಯವೇ ಸರಿ.
ಉದ್ಯಮಿ ರಾಮಚಂದ್ರ ಗುಪ್ತಾ ಅವರು ತಮ್ಮ ಕಂಪೆನಿಯ ಸರಕು ಸಾಗಿಸಲು ಗೂಡ್ಸ್ ರೈಲನ್ನು ಬುಕ್ ಮಾಡಿದ್ದರು. ಅದರಂತೆ ರೈಲಿನಲ್ಲಿ 14 ಲಕ್ಷಕ್ಕೂ ಅಧಿಕ ಮೌಲ್ಯದ 1,361 ಚೀಲ ರಸಗೊಬ್ಬರಗಳನ್ನು ತುಂಬಿಸಿ ವಿಶಾಖಪಟ್ಟಣದಿಂದ ಉತ್ತರ ಪ್ರದೇಶದ ಬಸ್ತಿ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿತ್ತು ಆದರೆ ಎರಡು ದಿನ ಕಳೆದರೂ ರೈಲು ನಿರ್ದಿಷ್ಟ ಪ್ರದೇಶಕ್ಕೆ ತಲುಪಲಿಲ್ಲ ಇದರಿಂದ ಬೇಸರಗೊಂಡ ಗುಪ್ತಾ ರೈಲ್ವೇ ಅಧಿಕಾರಿಗಳನ್ನು ಸಂಪರ್ಕಿಸಿ ಹಲವು ಬಾರಿ ದೂರು ಸಲ್ಲಿಸಿದ್ದಾರೆ ಆದರೆ ಅಧಿಕಾರಿಗಳು ಯಾವುದೇ ಕ್ರಮವನ್ನೂ ಕೈಗೊಳ್ಳಲಿಲ್ಲ. 2018 ಕ್ಕೆ ಬಸ್ತಿ ನಿಲ್ದಾಣ ತಲುಪಿದ ರೈಲು:
2014 ರಲ್ಲಿ ವಿಶಾಖಪಟ್ಟಣದಿಂದ ರೈಲು ಉತ್ತರ ಪ್ರದೇಶದ ಬಸ್ತಿ ರೈಲು ನಿಲ್ದಾಣಕ್ಕೆ ಮಾತ್ರ ತಲುಪದೆ ಕಣ್ಮರೆಯಾಗಿತ್ತು ಇದರಿಂದ ಉದ್ಯಮಿ ಹಲವು ಬಾರಿ ರೈಲು ಅಧಿಕಾರಿಗಳಿಗೆ ದೂರನ್ನೂ ನೀಡಿದ್ದರು ಎರಡು ದಿನ ಹೋಗಿ ತಿಂಗಳು ಕಳೆಯಿತು ತಿಂಗಳು ಹೋಗಿ ವರ್ಷನೆ ಕಳೆಯಿತು ಆದರೂ ರೈಲಿನ ಪತ್ತೆ ಇಲ್ಲ ಇದಾಗಿ ಬರೋಬ್ಬರಿ ಮೂರು ವರ್ಷ ಆರು ತಿಂಗಳ ಬಳಿಕ ಅಂದರೆ 2018 ಕ್ಕೆ ಉತ್ತರ ಪ್ರದೇಶದ ಬಸ್ತಿ ರೈಲು ನಿಲ್ದಾಣಕ್ಕೆ ಬಂದು ತಲುಪಿದೆ.
Related Articles
ಇನ್ನು ರೈಲಿನಲ್ಲಿ ಇದ್ದ ಲಕ್ಷಾಂತರ ಮೌಲ್ಯದ ರಸಗೊಬ್ಬರ ಕೊಳೆತು ನಿಷ್ಪ್ರಯೋಜಕವಾಗಿತ್ತು. ಆದರೆ ರೈಲು ಇಷ್ಟು ಸಮಯ ಎಲ್ಲಿತ್ತು ರೈಲು ಅಧಿಕಾರಿಗಳ ಕಣ್ತಪ್ಪಿಸಿ ಎಲ್ಲಿಗೆ ಪ್ರಯಾಣ ಬೆಳೆಸಿತ್ತು ಎಂಬುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ.
Advertisement
ರೈಲು ಇತಿಹಾಸದಲ್ಲೇ ಮೊದಲು:ಭಾರತೀಯ ರೈಲ್ವೇ ಇತಿಹಾಸದಲ್ಲಿ ರೈಲೊಂದು ಇಷ್ಟೊಂದು ವಿಳಂಬವಾಗಿ ನಿರ್ದಿಷ್ಟ ಪ್ರದೇಶವನ್ನು ತಲುಪಿದ್ದು ಇದೇ ಮೊದಲು ಎನ್ನಲಾಗಿದೆ. ಇದು ರೈಲ್ವೆ ವ್ಯವಸ್ಥೆಯಲ್ಲಿ ಇರುವ ಸವಾಲುಗಳನ್ನು ಎತ್ತಿ ತೋರಿಸುತ್ತದೆ ಮತ್ತು ಭವಿಷ್ಯದಲ್ಲಿ ಇಂತಹ ಗಂಭೀರ ವಿಳಂಬಗಳನ್ನು ತಪ್ಪಿಸಲು ಸರಕು ಸಾಗಣೆ ರೈಲುಗಳ ಉತ್ತಮ ಮೇಲ್ವಿಚಾರಣೆ ಮತ್ತು ನಿರ್ವಹಣೆಯ ಅಗತ್ಯವನ್ನು ಎತ್ತಿ ತೋರಿಸುತ್ತದೆ.