Advertisement
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ಸ್ಪಿನ್ ದಾಳಿಗೆ ತತ್ತರಿಸಿ 17.1 ಓವರ್‌ಗಳಲ್ಲಿ ಬರೀ 70 ರನ್ನಿಗೆ ಕುಸಿಯಿತು. ಇದು ಐಪಿಎಲ್ ಋತುವಿನ ಆರಂಭಿಕ ಪಂದ್ಯದಲ್ಲಿ ದಾಖಲಾದ ಕನಿಷ್ಠ ಮೊತ್ತ. ಚೆನ್ನೈ 17.4 ಓವರ್‌ಗಳಲ್ಲಿ 3 ವಿಕೆಟಿಗೆ 71 ರನ್ ಮಾಡಿ ಸುಲಭ ಜಯ ಸಾಧಿಸಿತು.
ಕೊಹ್ಲಿ, ಎಬಿಡಿ, ಮೊಯಿನ್ ಅಲಿ, ಹೆಟ್‌ಮೈರ್, ದುಬೆ ಮೊದಲಾದ ಬಿಗ್ ಹಿಟ್ಟರ್‌ಗಳನ್ನು ಒಳಗೊಂಡಿದ್ದ ಆರ್‌ಸಿಬಿ ಟಿ20 ಜೋಶ್ ಪ್ರದರ್ಶಿಸುವ ಬದಲು ನಾಟಕೀಯ ಕುಸಿತ ಕಾಣುತ್ತಲೇ ಹೋಯಿತು. ಆರಂಭಕಾರ ಪಾರ್ಥಿವ್ ಪಟೇಲ್ ಹೊರತುಪಡಿಸಿ ಉಳಿದವರ್ಯಾರೂ ಎರಡಂಕೆಯ ಮೊತ್ತ ದಾಖಲಿಸದಿದ್ದುದು ಬೆಂಗಳೂರು ತಂಡದ ಬ್ಯಾಟಿಂಗ್ ವೈಫಲ್ಯವನ್ನು ತೆರೆದಿರಿಸಿತು. ಕೊನೆಯವರಾಗಿ ಔಟಾದ ಪಾರ್ಥಿವ್ 35 ಎಸೆತ ಎದುರಿಸಿ 29 ರನ್ ಮಾಡಿದರು (2 ಬೌಂಡರಿ). ಕೊಹ್ಲಿ 6, ಅಲಿ ಮತ್ತು ಎಬಿಡಿ ತಲಾ 9 ರನ್ ಮಾಡಿದರೆ, ಮೊದಲ ಐಪಿಎಲ್ ಪಂದ್ಯ ಆಡಲಿಳಿದ ಹೆಟ್‌ಮೈರ್ ಖಾತೆ ತೆರೆಯುವ ಮೊದಲೇ ರನೌಟಾದರು.
Related Articles
ಆರ್‌ಸಿಬಿಗೆ ಆರಂಭದಲ್ಲಿ ಬಿಸಿ ಮುಟ್ಟಿಸಿದವರು ಟರ್ಬನೇಟರ್ ಹರ್ಭಜನ್ ಸಿಂಗ್. ಚಹರ್ ಜತೆ ಬೌಲಿಂಗ್ ಆರಂಭಿಸಿದ ಅವರು ಮೊದಲ 3 ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡರು. ಬಳಿಕ ದಕ್ಷಿಣ ಆಫ್ರಿಕಾದ ಲೆಗ್‌ಸ್ಪಿನ್ನರ್ ಇಮ್ರಾನ್ ತಾಹಿರ್ ಘಾತಕವಾಗಿ ಎರಗಿ ಕೇವಲ 9 ರನ್ನಿಗೆ 3 ವಿಕೆಟ್ ಉಡಾಯಿಸಿದರು. ಜಡೇಜ ಸಾಧನೆ 15 ರನ್ನಿಗೆ 2 ವಿಕೆಟ್. ತಾಹಿರ್ ಮತ್ತು ಜಡೇಜ ಒಂದೊಂದು ಮೇಡನ್ ಓವರ್ ಎಸೆದು ಗಮನ ಸೆಳೆದರು. ಬ್ರಾವೊ ತಾನೆಸೆದ ಒಂದೇ ಎಸೆತದಲ್ಲಿ ಪಾರ್ಥಿವ್ ಪಟೇಲ್‌ಗೆ ಪೆವಿಲಿಯನ್ ಹಾದಿ ತೋರಿಸಿದರು.
Advertisement
ರೈನಾ 5,000 ರನ್ ಸಾಧಕ ಚೆನ್ನೈ ಆಟಗಾರ ಸುರೇಶ್ ರೈನಾ ಐಪಿಎಲ್ ಇತಿಹಾಸದಲ್ಲಿ 5,000 ರನ್ ಗಳಿಸಿದ ಮೊದಲ ಸಾಧಕನಾಗಿ ಮೂಡಿಬಂದರು. ಆರ್‌ಸಿಬಿ ಎದುರಿನ ಪಂದ್ಯದಲ್ಲಿ 15 ರನ್ ಗಳಿಸಿದಾಗ ಈ ಸಾಧನೆ ಮಾಡಿದರು. ಇದರೊಂದಿಗೆ ವಿರಾಟ್ ಕೊಹ್ಲಿಗಿಂತ ಮೊದಲೇ ಈ ದಾಖಲೆಯನ್ನು ರೈನಾ ತಮ್ಮ ಹೆಸರಿಗೆ ಬರೆಸಿಕೊಂಡರು. ಕೊಹ್ಲಿಗೆ 5,000 ರನ್ ಗಳಿಸಲು ಈ ಪಂದ್ಯಕ್ಕೂ ಮುನ್ನ 52 ರನ್ ಬೇಕಿತ್ತು. ಈ ಪಂದ್ಯದಲ್ಲಿ ಅವರು 6 ರನ್ನಿಗೆ ಔಟಾದರು. ಸ್ಕೋರ್‌ಪಟ್ಟಿ
ರಾಯಲ್ ಚಾಲೆಂಜರ್ ಬೆಂಗಳೂರು
ವಿರಾಟ್ ಕೊಹ್ಲಿ ಸಿ ಜಡೇಜ ಬಿ ಹರ್ಭಜನ್ 6
ಪಾರ್ಥಿವ್ ಪಟೇಲ್ ಸಿ ಜಾಧವ್ ಬಿ ಬ್ರಾವೊ 29
ಮೊಯಿನ್ ಅಲಿ ಸಿ ಮತ್ತು ಬಿ ಹರ್ಭಜನ್ 9
ಎಬಿ ಡಿ ವಿಲಿಯರ್ ಸಿ ಜಡೇಜ ಬಿ ಹರ್ಭಜನ್ 9
ಶಿಮ್ರನ್ ಹೆಟ್‌ಮೈರ್ ರನೌಟ್ 0
ಶಿವಂ ದುಬೆ ಸಿ ವಾಟ್ಸನ್ ಬಿ ತಾಹಿರ್ 2
ಡಿ ಗ್ರ್ಯಾಂಡ್‌ಹೋಮ್ ಸಿ ಧೋನಿ ಬಿ ಜಡೇಜ 4
ನವದೀಪ್ ಸೈನಿ ಸಿ ವಾಟ್ಸನ್ ಬಿ ತಾಹಿರ್ 2
ಯಜುವೇಂದ್ರ ಚಾಹಲ್ ಸಿ ಹರ್ಭಜನ್ ಬಿ ತಾಹಿರ್ 4
ಉಮೇಶ್ ಯಾದವ್ ಬಿ ಜಡೇಜ 1
ಮೊಹಮ್ಮದ್ ಸಿರಾಜ್ ಔಟಾಗದೆ 0
ಇತರ 4
ಒಟ್ಟು (17.1 ಓವರ್‌ಗಳಲ್ಲಿ ಆಲೌಟ್) 70
ವಿಕೆಟ್ ಪತನ: 1-16, 2-28, 3-38, 4-39, 5-45, 6-50, 7-53, 8-59, 9-70.
ಬೌಲಿಂಗ್: ದೀಪಕ್ ಚಹರ್ 4-0-17-0
ಹರ್ಭಜನ್ ಸಿಂಗ್ 4-0-20-3
ಸುರೇಶ್ ರೈನಾ 1-0-6-0
ಇಮ್ರಾನ್ ತಾಹಿರ್ 4-1-9-3
ರವೀಂದ್ರ ಜಡೇಜ 4-1-15-2
ಡ್ವೇನ್ ಬ್ರಾವೊ 0.1-0-1
ಚೆನ್ನೈ ಸೂಪರ್ ಕಿಂಗ್ಸ್
ಶೇನ್ ವಾಟ್ಸನ್ ಬಿ ಚಾಹಲ್ 0
ಅಂಬಾಟಿ ರಾಯುಡು ಬಿ ಸಿರಾಜ್ 28
ಸುರೇಶ್ ರೈನಾ ಸಿ ದುಬೆ ಬಿ ಅಲಿ 19
ಕೇದಾರ್ ಜಾಧವ್ ಔಟಾಗದೆ 13
ರವೀಂದ್ರ ಜಡೇಜ ಔಟಾಗದೆ 6
ಇತರ 5
ಒಟ್ಟು (17.4 ಓವರ್‌ಗಳಲ್ಲಿ 3 ವಿಕೆಟಿಗೆ) 71
ವಿಕೆಟ್ ಪತನ: 1-8, 2-40, 3-59.
ಬೌಲಿಂಗ್: ಯಜುವೇಂದ್ರ ಚಾಹಲ್ 4-1-6-1
ನವದೀಪ್ ಸೈನಿ 4-0-24-0
ಮೊಯಿನ್ ಅಲಿ 4-0-19-1
ಉಮೇಶ್ ಯಾದವ್ 3-0-13-0
ಮೊಹಮ್ಮದ್ ಸಿರಾಜ್ 2-1-5-1
ಶಿವಂ ದುಬೆ 0.4-0-3-0