Advertisement
ನವೆಂಬರ್‌ನಲ್ಲಿ ನಡೆದಿದ್ದ ಮಂಜುನಾಥ್ ಕೊಲೆ ಪ್ರಕರಣದ ತನಿಖೆ ವೇಳೆ ಕುಣಿಗಲ್ ಗಿರಿ ಪಾತ್ರವೂ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿದ್ದು, ಪ್ರಕರಣದ ಹೆಚ್ಚಿನ ವಿಚಾರಣೆಗಾಗಿ ಒಂದು ವಾರ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾದ ಮಂಜುನಾಥ್ ಕೂಲೆ ಕಳ್ಳತನ ಸೇರಿ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಕೆಲವೊಮ್ಮೆ ಸ್ನೇಹಿತರ ಬಳಿ “ಕುಣಿಗಲ್ ಗಿರಿಯನ್ನು ಮುಗಿಸಬೇಕು’ ಎಂದು ಹೇಳಿಕೊಂಡು ತಿರುಗಾಡಿದ್ದ. ಈ ವಿಚಾರ ಗಿರಿಗೆ ಗೊತ್ತಾಗಿತ್ತು. ಬಳಿಕಗಿರಿಯ ಸಹಚರ ಲಕ್ಷ್ಮಣ್ ಅಲಿಯಾಸ್ ಸುಳಿಯನ್ನು ಕೊಲೆ ಮಾಡಲು ಮಂಜುನಾಥ್ ಸಂಚು ರೂಪಿಸಿ ಕಾಯುತ್ತಿದ್ದ.
Related Articles
Advertisement
ಫಾರ್ಮ್ ಹೌಸ್‌ಒಡೆಯ ಗಿರಿ :
ದುಷ್ಕೃತ್ಯಗಳನ್ನು ಮಾಡಿಸಿ ಹಣ ಮಾಡುವ ಗಿರಿ ಇತ್ತೀಚೆಗೆ ರೈತನಾಗಿದ್ದೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದ. ಕುಣಿಗಲ್‌ನ ಸ್ವಂತಊರಲ್ಲಿ ಸುಮಾರು 15 ಎಕರೆಗೂ ಅಧಿಕಜಾಗದಲ್ಲಿ ಫಾರ್ಮ್ ಹೌಸ್ ಮಾಡಿಕೊಂಡಿದ್ದಾನೆ. ತೆಂಗು, ಅಡಿಕೆ ಸೇರಿದಂತೆ ಹಲವು ಗಿಡಗಳನ್ನು ಬೆಳೆಸಿಕೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಚುನಾವಣೆಗೆ ಸಜ್ಜಾಗಿದ್ದ ಗಿರಿ : ರೌಡಿಶೀಟರ್ ಗಿರಿ ಕುಣಿಗಲ್‌ನ ತಾಲೂಕಿನ ಸ್ವಂತ ಹೊಸೂರಿನಲ್ಲಿ ರಾಜಕೀಯ ಪ್ರಾಬಲ್ಯ ಉಳಿಸಿಕೊಳ್ಳಲು ನಿರ್ಧರಿಸಿದ್ದ. ಹೀಗಾಗಿ ಗ್ರಾಪಂ ಚುನಾವಣೆಯಲ್ಲಿ ತಮ್ಮ ತಂದೆ ಅಥವಾ ತಾನೇಕಣಕ್ಕಿಳಿಸಲು ನಿರ್ಧರಿಸಿ ಅದಕ್ಕೆ ಬೇಕಾದ ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿದ್ದ. ತಮ್ಮಕುಟುಂಬದವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕು ಎಂದುಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಗಳಾಗಿದ್ದ ಇತರರಿಗೆ ಬೆದರಿಕೆ ಒಡ್ಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
“ವ್ಯಾಟ್ಸಾಪ್ ಹಾಗೂಮೆಸೆಂಜರ್ ಕಾಲ್‌ಗಳಲ್ಲಿಯೇ ಡೀಲ್’ : ರಾಬರಿ, ಡಕಾಯಿತಿ,ಕೊಲೆ,ಕೊಲೆಯತ್ನ ಸೇರಿದಂತೆ ಹಲವು ಅಪರಾಧ ಕೃತ್ಯಗಳು ಸೇರಿದಂತೆ ಒಟ್ಟು 108 ಪ್ರಕರಣಗಳುಕುಣಿಗಲ್ ಗಿರಿಯ ಮೇಲಿವೆ. ಬೆಂಗಳೂರು, ಬೆಂ. ಗ್ರಾಮಾಂತರ, ತುಮಕೂರು, ಕುಣಿಗಲ್ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಆತ ಆರೋಪಿಯಾಗಿದ್ದಾನೆ. ಹತ್ತಾರು ಬಾರಿ ಜೈಲಿಗೆ ಹೋಗಿ ಜಾಮೀನು ಪಡೆದು ಹೊರಗಡೆ ಬಂದಿದ್ದಾನೆ.ತನ್ನ ಸಹಚರರ ಮೂಲಕ ಇಸ್ಪೀಟ್‌ಕ್ಲಬ್‌ಗಳ ಮೇಲೆ ದಾಳಿ ನಡೆಸಿ ಸುಲಿಗೆ ಮಾಡುವುದು. ರಾಬರಿ ಕೃತ್ಯಗಳನ್ನು ಮಾಡಿಸಿ ಹಣ ಮಾಡುವುದರಲ್ಲಿಕುಖ್ಯಾತಿ ಪಡೆದಿರುವ ಗಿರಿ ಇತ್ತೀಚೆಗೆ ಪೊಲೀಸರಿಗೆ ಸಿಕ್ಕಿಬೀಳಬಾರದು ಸಾಕ್ಷ್ಯಗಳು ಲಭ್ಯವಾಗಬಾರದು ಎಂಬ ಉದ್ದೇಶದಿಂದ ತನ್ನ ಹೊಸ ತಂತ್ರಗಳನ್ನು ಬಳಸುತ್ತಿದ್ದಾನೆ. ತನ್ನ ಸಹಚರರಿಗೆವ್ಯಾಟ್ಸಾಪ್ ಹಾಗೂ ಮೆಸೆಂಜರ್‌ನಲ್ಲಿ ಮಾತ್ರವೇಕರೆ ಮಾಡುತ್ತಾನೆ. ಜತೆಗೆ, ದುಷ್ಕೃತ್ಯಗಳಿಗೆ ಸೂಚನೆಗಳನ್ನು ನೀಡುತ್ತಾನೆ. ಬಳಿಕ ತನ್ನ ಪಾಡಿಗೆ ತಾನಿರುತ್ತಾನೆ. ಮಂಜುನಾಥ್‌ಕೊಲೆ ಪ್ರಕರಣದಲ್ಲಿಯೂ ಸೈಕೋ ಹಾಗೂ ಲಕ್ಷ್ಮಣನ ಜತೆ ಹಲವು ಬಾರಿ ಮಾತನಾಡಿದ್ದಾನೆ. ಈ ಬಗ್ಗೆ ತನಿಖೆ ಮುಂದುವರಿದಿದೆ.