Advertisement

ರೊಮ್ಯಾಂಟಿಕ್‌ “ಪೈಲ್ವಾನ್‌’

05:51 AM Mar 12, 2019 | |

ಸುದೀಪ್‌ ಅವರ “ಪೈಲ್ವಾನ್‌’ ಚಿತ್ರದ ಚಿತ್ರೀಕರಣ ಸಂಪೂರ್ಣ ಮುಗಿದಿದೆ. ಸದ್ಯ ಸುದೀಪ್‌ “ಕೋಟಿಗೊಬ್ಬ-3′ ಚಿತ್ರೀಕರಣದಲ್ಲಿ ಬಿಝಿ. ಈ ನಡುವೆಯೇ “ಪೈಲ್ವಾನ್‌’ ಚಿತ್ರದ ಫೋಟೋವೊಂದು ಅಭಿಮಾನಿಗಳನ್ನು ಮೋಡಿ ಮಾಡಿದೆ. ಅದು ರೊಮ್ಯಾಂಟಿಕ್‌ ಮೂಡ್‌ನ‌ಲ್ಲಿರುವ ಸ್ಟಿಲ್‌. ಚಿತ್ರದ ಹಾಡಿನಲ್ಲಿ ಸುದೀಪ್‌ ಹಾಗೂ ನಾಯಕಿ ಆಕಾಂಕ್ಷ ಸಖತ್‌ ರೊಮ್ಯಾಂಟಿಕ್‌ ಆಗಿರುವ ಫೋಟೋವೊಂದು ಸೋಶಿಯಲ್‌ ಮೀಡಿಯಾದಲ್ಲಿ  ಹರಿದಾಡುತ್ತಿದೆ.

Advertisement

ಈ ಮೂಲಕ ರಗಡ್‌ ಪೈಲ್ವಾನ್‌ನಲ್ಲಿ ರೊಮ್ಯಾಂಟಿಕ್‌ ಹಾಗೂ ಕಲರ್‌ಫ‌ುಲ್‌ ಹಾಡನ್ನು ನಿರೀಕ್ಷಿಸಬಹುದು ಎಂದು ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ಚಿತ್ರವನ್ನು ಕೃಷ್ಣ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. “ಹೆಬ್ಬುಲಿ’ ಮೂಲಕ ಒಂದಾಗಿರುವ ಈ ಜೋಡಿ ಈಗ “ಪೈಲ್ವಾನ್‌’ನೊಂದಿಗೆ ಮತ್ತೆ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ. ನಿರ್ದೇಶಕ ಕೃಷ್ಣ ಕೂಡಾ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ.

ಚಿತ್ರದ ಬಗ್ಗೆ ಮಾತನಾಡುವ ಕೃಷ್ಣ, “ಸಿನಿಮಾದಲ್ಲಿ ಪ್ರತಿಯೊಂದು ಅಂಶಗಳು ತೆರೆಮೇಲೆ ಅದ್ಧೂರಿಯಾಗಿ ಕಾಣುವ ಜೊತೆಗೆ ಪ್ರೇಕ್ಷಕರಿಗೆ ಖುಷಿ ಕೊಡಲಿದೆ. ಇಲ್ಲಿಯವರೆಗೂ ಸುದೀಪ್‌ ಕಾಣಿಸಿಕೊಂಡಿರದ ರೀತಿ, ಅವರ ಗೆಟಪ್‌, ಮ್ಯಾನರಿಸಂ, ಡೈಲಾಗ್ಸ್‌ ಡೆಲಿವರಿ ಎಲ್ಲವೂ ಭಿನ್ನವಾಗಿದೆ. ತಾಂತ್ರಿಕವಾಗಿ ಹೇಳುವುದಾದರೆ, ಸಾಂಗ್ಸ್‌, ಸಿನಿಮಾಟೋಗ್ರಫಿ, ಲೊಕೇಷನ್ಸ್‌, ಆರ್ಟ್‌ ವರ್ಕ್ಸ್, ದೊಡ್ಡ ಕಲಾವಿದರ ತಾರಾಗಣ …ಹೀಗೆ ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯೇ ಬೆಳೆಯುತ್ತದೆ.  

ಸುಮಾರು 7-8 ಭಾಷೆಗಳಿಗೆ ಚಿತ್ರವನ್ನು ಡಬ್‌ ಮಾಡುವ ಯೋಚನೆ ನಮಗಿದೆ. ಡಬ್ಬಿಂಗ್‌ಗೂ ಬೇರೆ ಬೇರೆ ಭಾಷೆಗಳಿಂದ ಉತ್ತಮ ಬೇಡಿಕೆ ಬರುತ್ತಿದೆ. ಅದರ ಬಗ್ಗೆ ಇನ್ನೂ ಚರ್ಚೆ, ಮಾತುಕತೆ ನಡೆಯುತ್ತಿದೆ’ ಎನ್ನುತ್ತಾರೆ. ಚಿತ್ರದಲ್ಲಿನ ಸುದೀಪ್‌ ಗೆಟಪ್‌ ಬಗ್ಗೆಯೂ ಕೃಷ್ಣ ಖುಷಿಯಿಂದ ಮಾತನಾಡುತ್ತಾರೆ. “ಪೈಲ್ವಾನ್‌’ ಒಂದು ನ್ಪೋರ್ಟ್ಸ್ ಆ್ಯಕ್ಷನ್‌ ಡ್ರಾಮಾ. ಇದರಲ್ಲಿ ಸುದೀಪ್‌ ಮೂರು ಡಿಫ‌ರೆಂಟ್‌ ಲುಕ್‌ನಲ್ಲಿ ಕಾಣುತ್ತಾರೆ. ಪೋಸ್ಟರ್‌ನಲ್ಲಿ ರಿವಿಲ್‌ ಆಗಿರುವ ಲುಕ್‌ ಸಿನಿಮಾದಲ್ಲೂ ಇರುತ್ತದೆ’ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next