Advertisement

ತಾಜ್‌ ಮಹಲ್‌-2 ಹಾಡು ಹೊರಬಂತು

01:16 PM Mar 21, 2022 | Team Udayavani |

ಸ್ಯಾಂಡಲ್‌ವುಡ್‌ನ‌ಲ್ಲಿ ನಟ ಕೃಷ್ಣ ಅಜೇಯ್‌ ರಾವ್‌ ಮತ್ತು ಪೂಜಾ ಗಾಂಧಿ ಜೋಡಿಯಾಗಿ ಅಭಿನಯಿಸಿದ್ದ “ತಾಜ್‌ ಮಹಲ್‌’ ಎಂಬ ಹೆಸರಿನ ಚಿತ್ರ ತೆರೆಗೆ ಬಂದು ಸಿನಿಪ್ರಿಯರ ಮನಗೆದ್ದಿರುವುದು ನಿಮಗೆ ಗೊತ್ತಿರಬಹುದು.

Advertisement

ಈಗ ಅದೇ ಹೆಸರಿನಲ್ಲಿ “ತಾಜ್‌ ಮಹಲ್‌-2′ ಎಂಬ ಹೊಸ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗುತ್ತಿದೆ. ಈ ಹಿಂದೆ “ಡೇಂಜರ್‌ ಜೋನ್‌’ ಚಿತ್ರವನ್ನು ನಿರ್ದೇಶಿಸಿದ್ದ ದೇವರಾಜ ಕುಮಾರ್‌ ಈ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಜೊತೆಗೆ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್‌-ಕಟ್‌ ಹೇಳಿದ್ದಾರೆ.

ಈಗಾಗಲೇ “ತಾಜ್‌ ಮಹಲ್‌-2′ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಇತ್ತೀಚೆಗೆ “ತಾಜ್‌ ಮಹಲ್‌-2′ ಚಿತ್ರದ ಹಾಡುಗಳು ಬಿಡುಗಡೆಯಾಯಿತು.

ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಸಭಾಂಗಣದಲ್ಲಿ ನಡೆದ “ತಾಜ್‌ ಮಹಲ್‌-2′ ಚಿತ್ರದ ಹಾಡುಗಳನ್ನು ನಟ ರೋರಿಂಗ್‌ ಸ್ಟಾರ್‌ ಶ್ರೀಮುರಳಿ, ಹಿರಿಯ ನಿರ್ಮಾಪಕ ಎಸ್‌. ಎ ಚಿನ್ನೇಗೌಡ ಬಿಡುಗಡೆಗೊಳಿಸಿದರು.

ಇದನ್ನೂ ಓದಿ: ಹೋಮ್ ಮಿನಿಸ್ಟರ್ ಟ್ರೈಲರ್ : ಹೆಣ್ತನ ತೋರಿ ಕುತೂಹಲ ಮೂಡಿಸಿದ ಉಪ್ಪಿ!

Advertisement

ನಿರ್ಮಾಪಕರಾದ ಭಾ. ಮ ಹರೀಶ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್‌ ಬಣಕಾರ್‌, ನಿರ್ದೇಶಕ ವಿಕ್ಟರಿ ವಾಸು, ಸುನೀಲ್‌ ಕುಮಾರ್‌, ಭಾ. ಮ ಗಿರೀಶ್‌, ನಟ ಕಾಕ್ರೋಚ್‌ ಸುಧಿ ಸೇರಿದಂತೆ ಚಿತ್ರರಂಗದ ಅನೇಕರು ಹಾಜರಿದ್ದರು.

ಇನ್ನು ಔಟ್‌ ಆ್ಯಂಡ್‌ ಔಟ್‌ ರೊಮ್ಯಾಂಟಿಕ್‌ ಲವ್‌ ಕಥಾಹಂದರ ಹೊಂದಿರುವ “ತಾಜ್‌ ಮಹಲ್‌-2′ ಸಿನಿಮಾದ ಹಾಡುಗಳಿಗೆ ವಿಕ್ರಂ ಸೆಲ್ವ ಸಂಗೀತ ಸಂಯೋಜಿಸಿದ್ದಾರೆ.

ಈಗಾಗಲೇ “ತಾಜ್‌ ಮಹಲ್‌-2′ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಅಂತಿಮ ಹಂತದಲ್ಲಿದ್ದು, ಸದ್ಯ ಆಡಿಯೋ ಬಿಡುಗಡೆಯ ಮೂಲಕ “ತಾಜ್‌ ಮಹಲ್‌-2′ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಮೇ ಅಂತ್ಯದೊಳಗೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next