Advertisement

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

07:16 PM Jan 05, 2025 | Team Udayavani |

ಬೆಂಗಳೂರು: ರಾಜ್ಯ ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಎಂದು ಸಹಾಯಧನ ಕೊಡಲು ಸಾಧ್ಯ? ನೀವು ಮಟನ್‌ ರೇಟು 100 ರೂ. ಇದ್ದದ್ದು 500 ರೂ. ಆದರೂ ತಗತೀರಿ ತಾನೆ? ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ.

Advertisement

ಬಸ್‌ ಪ್ರಯಾಣ ದರ ಏರಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನೀವು ನಿಮ್ಮ ಮನೆಯಲ್ಲಿ ಡೀಸೆಲ್‌ ದರ ಜಾಸ್ತಿಯಾದರೆ ಕೊಡುತ್ತೀರಿ. ಜಾಸ್ತಿ ಆದರೂ ಅಂಗಡಿಯಲ್ಲಿ ಅಕ್ಕಿ ತೆಗೆದುಕೊಳ್ಳುತ್ತೀರಿ. ಬಟ್ಟೆ ದರ ಜಾಸ್ತಿ ಆದರೂ ಕೊಡುತ್ತೀರಿ, ಮಟನ್‌ 100 ರೂ. ಇದ್ದುದು 500 ರೂ. ಆದರೂ ತಗತೀರಿ, ಎಣ್ಣೆ ತಗತೀರಿ,  ಬೇಳೆ ತಗತೀರಿ, ಹೆಂಗ್ರೀ ಕೆಎಸ್‌ಆರ್‌ಟಿಸಿ ಸಂಸ್ಥೆಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯವಿದೆ? ಸರ್ಕಾರದ ತೀರ್ಮಾನವನ್ನು ಆ ಮಟ್ಟಕ್ಕೆ ಪ್ರಶ್ನಿಸಿದರೆ ಹೇಗೆ? ಎಂದು ಮರುಪ್ರಶ್ನೆ ಹಾಕಿದರು.

ಬೇರೆ ರಾಜ್ಯಕ್ಕಿಂತ ನಮ್ಮಲ್ಲಿ ಕಮ್ಮಿ ಇದೆ
ನಮ್ಮಲ್ಲಿ ಪ್ರಯಾಣ ದರ 84 ರೂ. ಇದ್ದರೆ, ಆಂಧ್ರಪ್ರದೇಶದಲ್ಲಿ 140 ರೂ. ಇದೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಶೇ.50 ರಷ್ಟು ಹೆಚ್ಚಿದೆ. ನಮ್ಮಲ್ಲಿ ಬೇರೆ ರಾಜ್ಯಕ್ಕಿಂತ ಕಡಿಮೆ ಇದೆ ಎಂದರು.

ನಗರ ಮತ್ತು ಗ್ರಾಮೀಣದ ದರಗಳಲ್ಲಿ ದರ ವ್ಯತ್ಯಾಸ ಸಾಕಷ್ಟಿದೆ. ಸಾರಿಗೆ ಸಂಸ್ಥೆಗಳು ಚೆನ್ನಾಗಿ ನಡೆಯಬೇಕು, ಮೂಲಸೌಕರ್ಯ ಕೊಡಬೇಕು, ಗ್ರಾಮೀಣ ಸೇವೆ ಚೆನ್ನಾಗಿರುವಂತೆ ನೋಡಿಕೊಳ್ಳಬೇಕಿದ್ದರೆ ಸಹಜವಾಗಿ ಪ್ರತಿ ಎರಡ್ಮೂರು ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಬೇಕು. 10-15 ವರ್ಷ ದರ ಪರಿಷ್ಕರಣೆ ಮಾಡದೆ ಇರುವುದೇ ಸಮಸ್ಯೆ ಎಂದರು.

ಯಾವುದಕ್ಕೂ ಕೊರತೆ ಮಾಡಿಲ್ಲ
ನಮ್ಮಲ್ಲಿ 10-15 ವರ್ಷದಿಂದ ಬಸ್‌ ಪ್ರಯಾಣ ದರ ಪರಿಷ್ಕರಣೆ ಆಗಿರಲಿಲ್ಲ. ಸಾರಿಗೆ ಸಂಸ್ಥೆಗಳ ನಿರ್ವಹಣೆ ಹೇಗೆ ಆಗಬೇಕು? 7ನೇ ವೇತನ ಆಯೋಗದನ್ವಯ ನೌಕರರಿಗೆ ವೇತನ ಪರಿಷ್ಕರಣೆ ಮಾಡಿದ್ದೇವೆ. ಮಹಿಳೆಯರಿಗೆ ಮಾತ್ರ ಉಚಿತವಿಲ್ಲ. ವಿದ್ಯಾರ್ಥಿಗಳು, ಅಂಗಲವಿಕರು, ಹಿರಿಯ ನಾಗರಿಕರಿಗೂ ರಿಯಾಯತಿ ಕೊಡುತ್ತಿದ್ದೇವೆ. ಯಾವುದಕ್ಕೂ ಕೊರತೆ ಮಾಡಿಲ್ಲ. ಪರಿಷ್ಕರಣೆ ಮಾಡಬೇಕಿತ್ತು, ಮಾಡಿದ್ದೇವೆ. ಬೇರೆ ರಾಜ್ಯಗಳಿಗೂ ಇಲ್ಲಿಗೂ ವ್ಯತ್ಯಾಸ ಬಹಳಷ್ಟಿದೆ ನಮ್ಮ ವಾದ ಎಂದು ಸಮರ್ಥಿಸಿಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next