Advertisement
ಉತ್ತಮ ರಸ್ತೆ – ಪ್ರಗತಿಯ ಸಂಕೇತ. ಒಂದೂರಿಗೆ ಒಳ್ಳೆಯ ರಸ್ತೆ ಇದೆ ಎಂದರೆ ಆ ಊರು ಪ್ರಗತಿಯತ್ತ ಸಾಗುತ್ತಿದೆ ಎಂದು ಧಾರಳವಾಗಿ ಹೇಳಬಹುದು. ಕಳೆದ 18 ವರ್ಷಗಳಿಂದ ಜನತೆಯ ಮೂಲಭೂತ ಸೌಕರ್ಯಗಳತ್ತ ಗಮನಹರಿಸಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳು ಹಾಗೂ ಸೇತುವೆಗಳ ನಿರ್ಮಾಣ, ನಿರ್ವಹಣೆ, ಅಭಿವೃದ್ಧಿ ಮತ್ತು ಇತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಾ ಸಾಗಿಬಂದಿರುವ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮವು ಜನಸೇವೆಯೆಂಬ ಹೆದ್ದಾರಿಯನ್ನು ಸಂಪರ್ಕಿಸುವ ಕಾರ್ಯದಲ್ಲಿ ನಿರತವಾಗಿದೆ.
Related Articles
– ಪಿಪಿಪಿ-ವಿಜಿಎಫ್ (ಟೋಲ್) ಆಧಾರದಲ್ಲಿ 347.55 ಕಿ.ಮೀ. ಉದ್ದದ 4 ಯೋಜನೆಗಳನ್ನು 961.80 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲಾಗಿದೆ.
– ವಿಶ್ವ ಬ್ಯಾಂಕ್ ಆರ್ಥಿಕ ನೆರವಿನ ಕೋ ಫೈನಾನ್ಸ್ ಹೈಬ್ರಿಡ್ (ಪಿಪಿಪಿ) ಅಡಿಯಲ್ಲಿ 361 ಕಿ.ಮೀ. ಉದ್ದದ 6 ರಾಜ್ಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು 1096 ಕೋಟಿ ರೂ.ಗಳ ಯೋಜನಾ ಮೊತ್ತದಲ್ಲಿ ಕಾರ್ಯಗತಗೊಳಿಸಲಾಗಿದೆ.
– ರಾಜ್ಯದ ವಿವಿಧೆಡೆ 20 ಬೃಹತ್ ಸೇತುವೆಗಳನ್ನು 684.17 ಕೋಟಿ ರೂ.ಗಳಲ್ಲಿ ನಿರ್ಮಾಣ ಮಾಡಲಾಗಿದೆ.
– 195 ಸೇತುವೆಗಳ ನಿರ್ಮಾಣವನ್ನು 1395.58 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಸರ್ಕಾರದ ಅನುಮೋದನೆ ದೊರೆತಿದೆ.
– ಬೆಂಗಳೂರು ನಗರದಲ್ಲಿ 108 ಕಿ.ಮೀ. ಉದ್ದದ 6 ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣ ಮಾಡಲು ಕಾರ್ಯ ಸಾಧ್ಯತಾ ವರದಿ ತಯಾರಿಕೆ ಪ್ರಗತಿಯಲ್ಲಿದೆ.
Advertisement
ಇಪಿಸಿ ಗುತ್ತಿಗೆ: ಪದ್ಧತಿಯಡಿ ಜಾತ್-ಜಾಂಬೋಟಿ ರಾಜ್ಯದ ಹೆದ್ದಾರಿ-31 ಮಹಾರಾಷ್ಟ್ರ ಗಡಿ ಭಾಗದ ಅಥಣಿಯಿಂದ ಗೋಕಾಕ್‌ನವರಿಗಿನ 100 ಕಿ.ಮೀ. ರಸ್ತೆ, ಸವಳಂಗ-ಹೊನ್ನಾಳಿ, ಸಿಂಧನೂರು-ಕುಷ್ಟಗಿ, ರಾಯಚೂರು (ಅತ್ತಿಗೂಡೂರು-ದೇವದುರ್ಗ).ಪಿಪಿಪಿ ಮಾದರಿ: ಗಿಣಿಗೇರಿ-ಗಂಗಾವತಿ, ಯಲಹಂಕ-ದೊಡ್ಡಬಳ್ಳಾಪುರ-ಗೌರಿಬಿದನೂರು ಆಂಧ್ರ ಗಡಿವರೆಗೆ ರಸ್ತೆ ನಿರ್ಮಾಣದ ಕೆಲಸ ನಡೆಯತ್ತಿದೆ. ದೇವನಹಳ್ಳಿ-ವಿಜಯಪುರ-ಕೋಲಾರ ಮಾರ್ಗದ ರಸ್ತೆ ಅಭಿವೃದ್ಧಿಗೆ ಮಂತ್ರಿಮಂಡಲ ಅನುಮೋದನೆ ನೀಡಿದೆ. ಬೈಲಹೊಂಗಲ-ಸೌಂದತ್ತಿ, ತಾಳಿಕೋಟೆ-ಮುದ್ದೇಬಿಹಾಳ-ಹುನಗುಂದ, ಬೀದರ್-ಚಿಂಚೋಳಿ ಮಾರ್ಗದ ರಸ್ತೆ ಇದರ ಜೊತೆಯಲ್ಲಿ ಮೂರು ಹೊಸ ಎಂಸಿಎ (ಮಾದರಿ ರಿಯಾಯಿತಿ ಒಪ್ಪಂದದ ವರ್ಷಾಶನ) ಆಧಾರಿತ ಯೋಜನೆಗಳನ್ನೂ ಸಹ ರೂಪಿಸಿದೆ. ಇದರಡಿ ವಾಘದಾರಿ, ರಿಪ್ಪನ್‌ಪೇಟೆ- ಹೈದರಾಬಾದ್, ಗುಲ್ಬರ್ಗಾ-ಸೇಡಂ ಮತ್ತು ರಾಮನಗರ-ಧಾರವಾಡ- ಅಳ್ಳಾವರ ಗೋವಾ ರಸ್ತೆ ನಿರ್ಮಾಣದ ಕೆಲಸವನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಬೂದುಗುಂಪಾ ಕ್ರಾಸ್, ಗಿಣಿಗೇರ-ಸಿಂಧನೂರು ಗಂಗಾವತಿಯ 85 ಕಿ.ಮೀ. ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿದೆ. ಈ ರಸ್ತೆಯನ್ನು ಪಿಪಿಪಿ ಮಾದರಿ ಗುತ್ತಿಗೆ ಆಧಾರದಲ್ಲಿ 28 ವರ್ಷಗಳಿಗೆ ನೀಡಲಾಗಿದೆ. ಪಿಪಿಪಿ ಮಾದರಿಯಲ್ಲಿ ಯಲಹಂಕ-ದೊಡ್ಡಬಳ್ಳಾಪುರ (ಷಟ³ಥ ರಸ್ತೆ) -ಗೌರಿಬಿದನೂರು (30 ಮೀ. ರಸ್ತೆ) ಮಾರ್ಗದಲ್ಲಿ 75 ಕಿ.ಮೀ. ನಿರ್ಮಾಣ ಕಾರ್ಯ ನಡೆಯುತ್ತಿದೆ. ವಿಶ್ವ ಬ್ಯಾಂಕ್ ಆರ್ಥಿಕ ನೆರವಿನಲ್ಲಿ ಪಿಪಿಪಿ ಆಧಾರದ ಮೇಲೆ 361 ಕಿ.ಮೀ. ದೂರದ ಆರು ರಾಜ್ಯ ಹೆದ್ದಾರಿಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ದಕ್ಷಿಣ ಕರ್ನಾಟಕದಲ್ಲಿ ರಾ.ಹೆ. 48ರಲ್ಲಿ ಹಾಸನದಿಂದ ಗೊರೂರು, ಅರಕಲಗೂಡು, ರಾಮನಾಥಪುರ, ಪಿರಿಯಾಪಟ್ಟಣದ 74 ಕಿ.ಮೀ.ಗಳು ಮೈಸೂರು-ಬೆಂಗಳೂರು-ಮಡಿಕೇರಿ ರಾ.ಹೆಯನ್ನು ಸಂಪರ್ಕಿಸುತ್ತದೆ. ಹಿರೆಕೇರೂರು-ರಾಣಿಬೆನ್ನೂರು 58 ಕಿ.ಮೀ., ಮುಂಡರಗಿ-ಹರಪನಹಳ್ಳಿ 56 ಕಿ.ಮೀ., ಬೈಲಹೊಂಗಲ-ಸೌಂದತ್ತಿ 61 ಕಿ.ಮೀ., ತಾಳಿಕೋಟೆ-ಮುದ್ದೇಬಿಹಾಳ-ಹುನಗುಂದ 63 ಕಿ.ಮೀ. ಹಾಗೂ ಬೀದರ್-ಚಿಂಚೋಳಿಯ 61 ಕಿ.ಮೀ.ಯದಾಗಿದೆ. 180 ಕಿ.ಮೀ.ಗಳ ಉದ್ದದ ಮೈಸೂರು-ಬಂಟ್ವಾಳ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿದ ಪ್ರಯುಕ್ತ ಷಟ³ಥ ರಸ್ತೆಯನ್ನಾಗಿಸಿ ಅಭಿವೃದ್ಧಿಪಡಿಸಲಾಗಿದೆ. ಕೆಆರ್‌ಡಿಸಿಎಲ್‌ನಿಂದಾದ ಸೇತುವೆಗಳು: ಯಾದಗಿರಿ (ಗುಲ್ಬರ್ಗಾ) 61.50 ಮೀ., ಗೋಕಾಕ್ (ಬೆಳಗಾವಿ) 90 ಮೀ., ರೋಣ (ಗದಗ) 86.10ಮೀ., ಮಾವಿನಹಳ್ಳ (ಕಾರವಾರ) 75ಮೀ., ಯಗಚಿ (ಹಾಸನ) 179ಮೀ., ಲಕ್ಷ್ಮಣತೀರ್ಥ 18.50ಮೀ., ಹೇಮಾವತಿ (ಹೊಳೆನರಸೀಪುರ) 267ಮೀ., ಹಿರಿಸಾವೆ (ಶ್ರವಣಬೆಳಗೊಳ) ಮತ್ತು ಮಂಡ್ಯ (ಕೆ.ಆರ್.ಪೇಟೆ) 50 ಮೀ.ಗಳ ದೊಡ್ಡ ಸೇತುವೆಗಳನ್ನು ನಿಗಮ ನಿರ್ಮಾಣ ಮಾಡಿದ್ದು, ಒಟ್ಟು 200 ಸೇತುವೆಗಳ ನಿರ್ಮಾಣ ಕಾರ್ಯದ ಬಗ್ಗೆ ಸರ್ಕಾರಿ ಮಟ್ಟದಲ್ಲಿ ಪರಿಶೀಲನೆ ನಡೆಯುತ್ತಿದೆ. ಬೆಂಗಳೂರಿಗೆ ಆರು ಎಲಿವೇಟೆಡ್ ಕಾರಿಡಾರ್: ಕೆ.ಎಸ್. ಕೃಷ್ಣಾರೆಡ್ಡಿ
ಬೆಂಗಳೂರು ನಗರ ವರ್ತುಲಾಕಾರದಲ್ಲಿ ಅಭಿವೃದ್ಧಿ ಹೊಂದಿದೆ. ಅದಕ್ಕನುಗುಣವಾಗಿ ಸಂಚಾರ ದಟ್ಟಣೆ ಪ್ರಮಾಣವೂ ಹೆಚ್ಚಾಗಿದೆ. ಆದ್ದರಿಂದ ಪೂರ್ವ ಭಾಗದಲ್ಲಿ ಐಟಿ ಮತ್ತು ಬಿಟಿ ಸಂಸ್ಥೆಗಳಿರುವುದರಿಂದ ಸಹಜವಾಗಿ ಜನದಟ್ಟಣೆ ಮತ್ತು ವಾಹನ ದಟ್ಟಣೆ ಹೆಚ್ಚಿದೆ. ಬೆಂಗಳೂರು ಉತ್ತರ ಮತ್ತು ದಕ್ಷಿಣ ಭಾಗದಲ್ಲೂ ಕೂಡ ಸಂಚಾರ ದಟ್ಟಣೆ ಇದ್ದೇ ಇದೆ. ಉತ್ತರದಲ್ಲಿ ವಿಮಾನ ನಿಲ್ದಾಣವಿದ್ದರೆ, ದಕ್ಷಿಣದ ಮೈಸೂರು ಕಡೆ ಅಭಿವೃದ್ಧಿ ಹೆಚ್ಚಾಗಿರುವುದೇ ಕಾರಣ. ಬೆಂಗಳೂರು ನಗರಕ್ಕೆ ಎಂಟು ರೇಡಿಯಲ್ ಸ್ಪೈಕ್ಸ್‌ಗಳಿವೆ (ಅಂದರೆ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳಿಂದ ಸಂಪರ್ಕಿಸುವ ರಸ್ತೆಗಳು). ಅವುಗಳಲ್ಲಿ ತುಮಕೂರು ರಸ್ತೆ, ಯಲಹಂಕ ರಸ್ತೆ, ಬಳ್ಳಾರಿ ರಸ್ತೆ, ಹಳೆ ಮದ್ರಾಸ್ ರಸ್ತೆ, ಹೊಸೂರು ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ. ಇವುಗಳಿಂದ ನಗರದಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆಯನ್ನು ಬೇರೆಡೆ ತಿರುಗಿಸುವ ಉದ್ದೇಶದಿಂದ 06 ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣದ ಕಾರ್ಯಸಾಧ್ಯತಾ ವರದಿ ತಯಾರಿಸುತ್ತಿದ್ದೇವೆ ಎನ್ನುತ್ತಾರೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್. ಕೃಷ್ಣಾರೆಡ್ಡಿ.
ಪೂರ್ವ-ಪಶ್ಚಿಮ ಬೆಂಗಳೂರು ಸಂಪರ್ಕಿಸುವ ಯೋಜನೆ ಇದಾಗಿರುವುದರಿಂದ ಸಾಮಾಜಿಕ ಸುರಕ್ಷತೆ ಮತ್ತು ಪರಿಸರ ಸುರಕ್ಷತೆ ಬಗ್ಗೆ ಅಧ್ಯಯನ ಮಾಡಬೇಕಾಗುತ್ತದೆ. ಆ ನಿಟ್ಟಿನಲ್ಲಿ ಯೋಚಿಸಿ ಕಾರ್ಯಸಾಧ್ಯತಾ ವರದಿ ತಯಾರಿಸುತ್ತಿದ್ದೇವೆ. ಹೊಸೂರು ರಸ್ತೆ ಸಿಲ್ಕ್ಬೋರ್ಡ್ ಜಂಕ್ಷನ್‌ನಿಂದ ಏರ್‌ಪೋರ್ಟ್ ತಲುಪಬೇಕಾದರೆ ರಿಚ¾ಂಡ್ ರಸ್ತೆ, ಕೆಎಸ್‌ಸಿಎ ಸ್ಟೇಡಿಯಂ, ಕಂಟೋನ್ಮೆಂಟ್ ಮೂಲಕ ಬಳ್ಳಾರಿ ರಸ್ತೆಯ ಹೆಬ್ಟಾಳ ಫ್ಲೆ$çಓವರ್ ಸಂಪರ್ಕಿಸುವ ಉದ್ದೇಶವಿದೆ. ಈ ಉತ್ತರ-ದಕ್ಷಿಣ ಸಂಪರ್ಕಿಸುವ ಕಾರಿಡಾರ್ ರಸ್ತೆಗೆ ಎರಡು ಕಾರಿಡಾರ್‌ಗಳನ್ನು ನಿರ್ಮಾಣ ಮಾಡಲಿದ್ದೇವೆ. ಒಂದು ಪೂರ್ವದಿಂದ ಪಶ್ಚಿಮ ಸಂಪರ್ಕ ಕಲ್ಪಿಸುವ ರಸ್ತೆ ಉತ್ತರ ಭಾಗದ ಕಾರಿಡಾರ್. ಮತ್ತೂಂದು ಪೂರ್ವದಿಂದ ಪಶ್ಚಿಮ ಸಂಪರ್ಕ ಕಲ್ಪಿಸುವ ರಸ್ತೆ ದಕ್ಷಿಣ ಭಾಗದ ಕಾರಿಡಾರ್. ಪೂರ್ವ-ಪಶ್ಚಿಮ ಕಾರಿಡಾರ್-1: ಹಳೇ ಮದ್ರಾಸ್ ರಸ್ತೆಯ ಕೆ.ಆರ್. ಪುರಂ (ಭಟ್ಟರಹಳ್ಳಿಯಿಂದ ಹಲಸೂರು ಲೇಕ್ ಮುಖಾಂತರ ಸೆಂಟ್ ಜಾನ್ಸ್ ಚರ್ಚ್ ರಸ್ತೆ, ಮೇಖೀÅ ಸರ್ಕಲ್, ಯಶವಂತಪುರ ಗ್ರೇಡ್ ಸೆಪರೇಟರ್‌ನಿಂದ ತುಮಕೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುತ್ತದೆ. ಪೂರ್ವ-ಪಶ್ಚಿಮ ಕಾರಿಡಾರ್-2: ವರ್ತೂರ್ ಕೋಡಿಯಿಂದ ಕೋಡಿಹಳ್ಳಿ ಮೂಲಕ ನೈಸ್ ರಸ್ತೆಗೆ ಸಂಪರ್ಕಿಸಿ ಅಲ್ಲಿಂದ ಮೈಸೂರು ರಸ್ತೆಯ ನಾಯಂಡಹಳ್ಳಿಯನ್ನು ಸಂಪರ್ಕಿಸುತ್ತದೆ. ಕನೆಕ್ಟಿಂಗ್ ಕಾರಿಡಾರ್: ಪೂರ್ವ-ಪಶ್ಚಿಮದ ಕಾರಿಡಾರ್-1 ಮತ್ತು ಕಾರಿಡಾರ್-2 ಅನ್ನು ಸಂಪರ್ಕಿಸುವ ಮತ್ತೂಂದು ರಸ್ತೆ ಕನೆಕ್ಟಿಂಗ್ ಕಾರಿಡಾರ್. ಅದು ಡಿಸೋಜ ವೃತ್ತದಿಂದ ಕಲ್ಯಾಣನಗರಕ್ಕೆ ಹಾಗೂ ಮತ್ತೂಂದು ನಗರದ ಮಧ್ಯದಲ್ಲಿ ಸಿಟಿ ಏರಿಯಾ (ಸಿಬಿಡಿ)ದಲ್ಲಿ ಪರಿಶೀಲಿಸಿದ್ದೇವೆ. ಇವುಗಳೆಲ್ಲ ಸೇರಿ ಒಟ್ಟು 103 ಕಿ.ಮೀ. ಎಲಿವೆಟೆಡ್ ಕಾರಿಡಾರ್ ನಿರ್ಮಾಣ ಯೋಜನೆ. ಇದರಲ್ಲಿ 84 ಕಿ.ಮೀ.ಗಳ ಲಿನಿಯರ್ ಲಿಂಕ್ ರಸ್ತೆಯಿದ್ದು, ಉಳಿದದ್ದು ರ್‍ಯಾಂಪ್ಸ್ ಮತ್ತು ಫ್ಲೆçಓವರ್‌ಗಳಾಗಿವೆ. ಇದರಲ್ಲಿ ಮುಖ್ಯ ವಿಚಾರವೆಂದರೆ ಈ ಭಾಗದ ಮಳೆ ನೀರಿನ ರಾಜಾಕಾಲುವೆಗಳ ಭೂಮಿಯನ್ನು ಬಳಸಿಕೊಂಡು ಅದರ ಮೇಲೆ ಮೇಲ್ಸೇತುವೆ (ಎಲೆವೆಟೆಡ್) ರಸ್ತೆ ಮಾಡಲಿದ್ದೇವೆ. ಹಾಗಾಗಿ ಭೂಸ್ವಾಧೀನ ಸಮಸ್ಯೆ ಅಷ್ಟಾಗಿ ಬರುವುದಿಲ್ಲ. ಈ ವರದಿಯನ್ನು ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸಲಿದ್ದೇವೆ ಎನ್ನುತ್ತಾರೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್. ಕೃಷ್ಣಾರೆಡ್ಡಿ. – ಗೋಪಾಲ್ ತಿಮ್ಮಯ್ಯ