ದೇವದುರ್ಗ: ಗ್ರಾಮೀಣ ಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ರಸ್ತೆಗಳ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಶಾಸಕ ಕೆ.ಶಿವನಗೌಡ ನಾಯಕ ಎಚ್ಚರಿಕೆ ನೀಡಿದರು.
ಸಮೀಪದ ಹುಲಿಗುಡ್ಡ, ಗಾಣಧಾಳ, ಮ್ಯಾಕಲದೊಡ್ಡಿ ಮಾರ್ಗದ ರಸ್ತೆ ಡಾಂಬರೀಕರಣ ಪರಿಶೀಲಿಸಿ ಅವರು ಮಾತನಾಡಿದರು.
ದಿನಕ್ಕೆ ಒಂದರೆಡು ಭಾರಿ ಪ್ರಗತಿ ಕಾಮಗಾರಿಗಳ ಕುರಿತು ಪರಿಶೀಲನೆ ಮಾಡುವ ಕೆಲಸ ಅಧಿಕಾರಿಗಳ ಮೇಲೆ ಹಚ್ಚಿನ ಜವಾಬ್ದಾರಿ ಇದೆ. ಕಳಪೆ ಕಾಮಗಾರಿ ಕುರಿತಂತೆ ಗ್ರಾಮಸ್ಥರಿಂದ ದೂರುಗಳು ಬಂದಲ್ಲಿ ಅಧಿಕಾರಿಗಳನ್ನೇ ನೇರಹೊಣೆ ಮಾಡಬೇಕಾಗುತ್ತದೆ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ಎಚ್ಚರಿಸಿದರು.
ಪ್ರಧಾನಿ ಮಂತ್ರಿ ಗ್ರಾಮ ಸಡಕ್ ಯೋಜನೆ 3ನೇ ಹಂತದಡಿ ಡಾಂಬರೀಕರಣ ಕಾಮಗಾರಿ ಕೈಗೊಳ್ಳಲಾಗಿದ್ದು, 2021-22ನೇ ಸಾಲಿನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. ಕಚೇರಿ ಕೆಲಸ ಕಾರ್ಯಗಳ ಜತೆ ಪ್ರಗತಿಯಲ್ಲಿರುವ ಕಾಮಗಾರಿ ಕುರಿತು ಪರಿಶೀಲನೆ ಮಾಡಬೇಕು ಎಂದು ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಬಸವರಾಜ ಗಾಣಧಾಳ, ಚಂದಪ್ಪ ಬುದ್ದಿನ್ನಿ, ನಾಗರಾಜ ಪಾಟೀಲ್, ಪಿಎಂಜಿಎಸ್‌ವೈ ಇಇ ಮೋನಪ್ಪ, ಎಇಇ ಸಾಜೀದ್, ಜೆಇ ರಾಜು ತೆಲಂಗಾ ಸೇರಿದಂತೆ ಇತರರು ಇದ್ದರು.