Advertisement

Kambala Time Table: ಡಿ.13ರ ವರೆಗೆ ಸಾಂಪ್ರದಾಯಿಕ ಕಂಬಳ ಹಬ್ಬ

03:31 AM Nov 25, 2024 | Team Udayavani |

ಕುಂದಾಪುರ: ಕರಾವಳಿ ಜಿಲ್ಲೆಗಳಲ್ಲಿ ಕಂಬಳ ಋತು ಆರಂಭಗೊಂಡಿದೆ. ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು, ಬ್ರಹ್ಮಾವರ ಭಾಗದಲ್ಲಿ ಹೆಚ್ಚಾಗಿ ಆಯೋಜನೆಗೊಳ್ಳುವ ಸಾಂಪ್ರದಾಯಿಕ (ಪರಂಪರೆ) ಕಂಬಳವು ನ. 21ರಂದು ಆರಂಭಗೊಂಡಿದೆ.

Advertisement

ನಿಗದಿ ಯಾದಂತೆ ನ.21ರಂದು ಕೊಡೇರಿ ಹಕ್ರೆಮಠ ಹಾಗೂ ನ.22ರಂದು ಬಿಲ್ಲಾಡಿ ಪ್ರಕಾರ ನಡೆದಿದ್ದು, ಡಿ.13ರಂದು ಹೊಂಬಾಡಿ -ಮಂಡಾಡಿಯಲ್ಲಿ ಕೊನೆಯ ಕಂಬಳ ನಡೆಯಲಿದೆ. ಕುಂದಾಪುರ, ಬೈಂದೂರು, ಬ್ರಹ್ಮಾವರ ತಾಲೂಕು ವ್ಯಾಪ್ತಿಯಲ್ಲಿ ನಡೆಯುವ ಬಹುತೇಕ ಎಲ್ಲ ಕಂಬಳಗಳು ಸಾಂಪ್ರದಾಯಿಕವಾಗಿವೆ. ಅಂದಾಜು 50ರಿಂದ 60 ಕಂಬಳಗಳಿದ್ದು, ಅವುಗಳಲ್ಲಿ ಸುಮಾರು 30-35 ಕಂಬಳಗಳು ಪ್ರಮುಖವಾಗಿವೆ. ಸಾಂಪ್ರದಾಯಿಕ ಕಂಬಳಗಳು ವೃಶ್ಚಿಕ ಸಂಕ್ರಮಣದಿಂದ ಆರಂಭಗೊಂಡು ಧನು ಸಂಕ್ರಮಣದೊಳಗೆ ಮುಗಿಯಬೇಕು.

ಕಂಬಳಗಳ ದಿನ ನಿಗದಿ
ಕಂಬಳ ನಡೆಸುವ ಮನೆತನದವರೇ ಅರ್ಚಕರಲ್ಲಿ ಕೇಳಿ ದಿನ ನಿಗದಿ ಮಾಡುತ್ತಾರೆ. ಬಹುತೇಕರು ವೃಶ್ಚಿಕ ಸಂಕ್ರಮಣ ದಿನದಂದು ಕಂಬಳ ನಡೆಯುವ ದಿನವನ್ನು ಅಂತಿಮಗೊಳಿಸುವುದು ಪದ್ಧತಿ. ಯಜಮಾನರ ತಾರಾಬಲಕ್ಕೆ ಅನುಕೂಲ ವಾಗಿ ದಿನ ನಿಗದಿಪಡಿಸಲಾಗುತ್ತದೆ.

ಸಾಂಪ್ರದಾಯಿಕ ಕಂಬಳ ನಡೆಯುವ ದಿನ
ಕೆಲವು ಕಂಬಳಗಳಿಗೆ ಇನ್ನಷ್ಟೇ ದಿನ ನಿಗದಿ ಆಗಬೇಕಿದೆ. ಇದುವರೆಗೆ ದಿನಾಂಕ ನಿಗದಿಯಾಗಿರುವ ಕಂಬಳಗಳ ವಿವರ ಇಂತಿದೆ.

ನ.25: ಬಾರ್ಕೂರು

Advertisement

ನ.26: ಕೆಂಜೂರು

ನ.27: ಯಡ್ತಾಡಿ, ಶಿರ್ವ, ಗೋಳಿ ಹೊಳೆಯ ಕುಡೂರು, ಎಲ್ಲೂರು

ನ.28: ಉಳ್ಳೂರು ಕೆರೆಗದ್ದೆ

ನ. 29: ಕೆರಾಡಿ

ಡಿ.1: ಹೆರಂಜೆ

ಡಿ.2: ಹೊರ್ಲಾಳಿ

ಡಿ.4: ಮೂಡ್ಲಕಟ್ಟೆ, ತಲ್ಲೂರು ದೊಡ್ಮನೆ

ಡಿ.5: ಹೊಸಮಠ, ಕಡ್ರಿ, ಇಡೂರು ಕುಂಜ್ಞಾಡಿ

ಡಿ.6: ವಂಡಾರು, ತಗ್ಗರ್ಸೆ, ಕೊಡವೂರು

ಡಿ.7: ಮೊಳಹಳ್ಳಿ

ಡಿ.8: ತೋನ್ಸೆ, ಹಂದಾಡಿ

ಡಿ.9: ಬನ್ನಾಡಿ, ಚೇರ್ಕಾಡಿ

ಡಿ.10: ಗುಲ್ವಾಡಿ, ಹೊಸೂರು

ಡಿ.11: ಚೋರಾಡಿ

ಡಿ.12: ಆತ್ರಾಡಿ, ಕೊರ್ಗಿ, ಕುಚ್ಚಾರು

ಡಿ.13: ಹೊಂಬಾಡಿ -ಮಂಡಾಡಿ

Advertisement

Udayavani is now on Telegram. Click here to join our channel and stay updated with the latest news.

Next