Advertisement

ರಸ್ತೆ ರಂಪ, ಹತ್ಯೆ ಕೇಸ್;ಮಣಿಪುರ ಸಿಎಂ ಪುತ್ರನಿಗೆ 5ವರ್ಷ ಜೈಲುಶಿಕ್ಷೆ

02:57 PM May 29, 2017 | Team Udayavani |

ನವದೆಹಲಿ: 2011ರಲ್ಲಿ ನಡೆದಿದ್ದ ರಸ್ತೆ ಗಲಾಟೆ, ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪುರ ಹಾಲಿ ಮುಖ್ಯಮಂತ್ರಿ ಬಿರೇನ್ ಸಿಂಗ್ ಪುತ್ರ ಅಜಯ್ ಮೀಟೈಗೆ ವಿಚಾರಣಾಧೀನ ಕೋರ್ಟ್ ಸೋಮವಾರ 5 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಗಲಾಟೆ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Advertisement

ಕಳೆದ ವಾರ ಸುಪ್ರೀಂಕೋರ್ಟ್ ನ ಜಸ್ಟೀಸ್ ಎಲ್.ನಾಗೇಶ್ವರ ರಾವ್ ಮತ್ತು ನವೀನ್ ಸಿನ್ನಾ ನೇತೃತ್ವದ ರಜಾಕಾಲದ ಪೀಠ, ರಸ್ತೆ ರಂಪಾಟದಲ್ಲಿ ಗುಂಡಿಗೆ ಬಲಿಯಾಗಿದ್ದ ಇರೋಮ್ ರೋಜರ್ ತಾಯಿ ಚಿತ್ರಾ ದೇವಿ ಅವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿ, ಈ ಬಗ್ಗೆ ವಿವರಣೆ ನೀಡುವಂತೆ ಕೇಂದ್ರ ಗೃಹ ಕಾರ್ಯದರ್ಶಿ ಹಾಗೂ ಮಣಿಪುರ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿತ್ತು.

ತಮ್ಮ ಜೀವಕ್ಕೆ ಅಪಾಯ ಇದೆ ಎಂದು ಹೇಳಿಕೊಂಡಿರುವ ಇರೋಮ್ ಪೋಷಕರು ವಕೀಲ ಉತ್ಸವ್ ಬೈನ್ಸ್ ಮೂಲಕ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

2001ರ ಮಾರ್ಚ್ 20ರಂದು ಅಜಯ್ ಮೀಟೈ ತನ್ನ ಎಸ್ ವಿ ಕಾರನ್ನು ವೇಗವಾಗಿ ಓಡಿಸುತ್ತಿದ್ದ ಈ ಸಂದರ್ಭದಲ್ಲಿ ಓವರ್ ಟೇಕ್ ಮಾಡಲು ಹೋದಾಗ ಇರೋಮ್ ರೋಜರ್ ದಾರಿ ಬಿಟ್ಟು ಕೊಟ್ಟಿರಲಿಲ್ಲವಾಗಿತ್ತು. ಇದರಿಂದ ಕುಪಿತಗೊಂಡ ಅಜಯ್ ಕಾರನ್ನು ಅಡ್ಡಗಟ್ಟಿ ಜಗಳಕ್ಕಿಳಿದಿದ್ದ, ಆಗ ರೊಚ್ಚಿಗೆದ್ದ ಅಜಯ್ ಪಿಸ್ತೂಲಿನಿಂದ ಇರೋಮ್ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದ. 

Advertisement

Udayavani is now on Telegram. Click here to join our channel and stay updated with the latest news.

Next