Advertisement
ರಾಜ್ಯಪಾಲರ ಕೊಲ್ಲೂರು ಭೇಟಿ ಸಂದರ್ಭದಲ್ಲಿ ಚೆಲ್ಲಿದ ಜಲ್ಲಿ ದಿಕ್ಕುಪಾಲು ಎರಡು ವಾರಗಳ ಹಿಂದೆ ಕೊಲ್ಲೂರು ಶ್ರೀ ದೇವಿಯ ದರ್ಶನಕ್ಕೆ ಇದೇ ಮಾರ್ಗವಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯಪಾಲರ ಆಗಮನದ ಸಂದರ್ಭದಲ್ಲಿ ರಸ್ತೆಯ ಹೊಂಡಕ್ಕೆ ಚೆಲ್ಲಿದ್ದ ಜಲ್ಲಿ ದಿಕ್ಕುಪಾಲಾಗಿದ್ದು ಧೂಳುಮಯವಾದ ರಸ್ತೆಯಲ್ಲಿ ದ್ವಿಚಕ್ರ ವಾಹನ ಸಂಚಾರವು ಕೂಡ ಕಷ್ಟಸಾಧ್ಯವಾಗಿದೆ. ರಸ್ತೆ ದುರಸ್ತಿಯಾಗದೆ ಪಾದಚಾರಿಗಳು ಆತಂಕದಲ್ಲೇ ಸಾಗಬೇಕಾಗಿದೆ.
ವಿವಿಧ ರಾಜ್ಯಗಳು ಸಹಿತ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇಗುಲ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲ ಹಾಗೂ ಸಿಗಂಧೂರು ದೇಗುಲಕ್ಕೆ ನೂರಾರು ಸಂಖ್ಯೆಯಲ್ಲಿ ವಿವಿಧ ವಾಹನಗಳು ಈ ಮಾರ್ಗವಾಗಿ ಸಂಚರಿಸುತ್ತದೆ. ಯಾತ್ರಾರ್ಥಿಗಳ ಪ್ರಯಾಣದ ಪಾಡು ಹೇಳತೀರದು. ರಾತ್ರಿ ಸಂಚಾರವಂತೂ ಇನ್ನೂ ಕಷ್ಟಸಾಧ್ಯ. ಹೊಂಡಮಯ ರಸ್ತೆಯಲ್ಲಿ ಅನೇಕ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬಿದ್ದು ಸವಾರರು ಗಾಯಗೊಂಡ ಅನೇಕ ನಿದರ್ಶನಗಳಿವೆ. ಆರಂಭಗೊಳ್ಳದ ಕಾಮಗಾರಿ
ತೀರಾ ಹದಗೆಟ್ಟ ಈ ಡಾಮರು ರಸ್ತೆಯ ಮರು ನಿರ್ಮಾಣಕ್ಕೆ ಟೆಂಡರ್ ಆಗಿದ್ದರೂ ಕಾಮಗಾರಿ ಆರಂಭ ಗೊಳ್ಳದಿರುವುದು ನಿತ್ಯ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡಿದೆ. ಅಗಲ ಕಿರಿದಾದ ಈ ರಸ್ತೆಯಲ್ಲಿ ಆಯತಪ್ಪಿದಲ್ಲಿ ಅಪಘಾತ ಖಂಡಿತ. ಅಷ್ಟರ ಮಟ್ಟಿಗೆ ರಸ್ತೆ ಹದಗೆಟ್ಟಿದೆ.
Related Articles
ವಂಡ್ಸೆ- ಇಡೂರು ನಡುವಿನ ಮುಖ್ಯ ರಸ್ತೆಯಲ್ಲಿ ವಾಹನದಲ್ಲಿ ಪ್ರಯಾಣಿಸುವುದು ಕಷ್ಟಸಾಧ್ಯವಾಗಿದೆ. ಇಲಾಖೆ
ಸೂಕ್ತ ಕ್ರಮ ಕೈಗೊಳ್ಳಬೇಕು.
-ಗೋವರ್ಧನ ಜೋಗಿ,
ವಂಡ್ಸೆ, ಗ್ರಾ.ಪಂ. ಸದಸ್ಯರು
Advertisement
ಸದ್ಯದಲ್ಲೇ ಕಾಮಗಾರಿಚಿತ್ತೂರು ಇಡೂರು ನಡುವಿನ ಹದಗಟ್ಟೆ ರಸ್ತೆಯ ಸಂಪೂರ್ಣ ಡಾಮರು ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಸದ್ಯದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ. ನಿರಂತರ ಮಳೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ. ಅತೀ ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು.
-ದುರ್ಗಾದಾಸ್, ಸಹಾಯಕ ಕಾರ್ಯಪಾಲಕ ಅಭಿಯಂತ, ಲೋಕೋಪಯೋಗಿ ಇಲಾಖೆ